Please assign a menu to the primary menu location under menu

NEWSನಮ್ಮರಾಜ್ಯವಿಶೇಷಸಂಸ್ಕೃತಿ

ಸುಖ- ದುಃಖಗಳ ಸಮ್ಮಿಲದ ಹಬ್ಬವೇ ಈ “ಯುಗಾದಿ”!

ವಿಜಯಪಥ ಸಮಗ್ರ ಸುದ್ದಿ

ಗಾದಿ ಅಥವಾ ಯುಗಾದಿ ಹಬ್ಬ ಎಂದರೆ ಕರ್ನಾಟಕ ಬಹುತೇಕ ಗ್ರಾಮೀಣ ಭಾಗದಲ್ಲಿ ಜೂಜಾಡುವುದಕ್ಕೆ ಮೂರುದಿನಗಳ ಕಾಲ ಕಾನೂನು ಬಾಹಿರವಾಗಿ ಅನುಮತಿ ಸಿಗುವ ಹಬ್ಬ ಎಂದೇ ಹೇಳಬಹುದು. ಅಲ್ಲದೆ ಈ ಹಬ್ಬ ಹಿಂದೂಗಳಿಗೆ ಹೊಸ ವರ್ಷದ ಆರಂಭಕ್ಕೆ ನಾಂದಿಹಾಡುವ ಹಬ್ಬವಾಗಿದೆ.

ಇನ್ನು ಈ ಉಗಾದಿ ಅಥವಾ ಯುಗಾದಿ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ಹಲವಾರು ದಕ್ಷಿಣ ಭಾರತದಲ್ಲಿ ಆಚರಿಸಲಾಗುತ್ತದೆ. ಅದು ಕೂಡ ಇದು ಪ್ರಮುಖ ಹಬ್ಬವಾಗಿದೆ. ಹಿಂದೂಗಳ ಹೊಸ ವರ್ಷದ ಪ್ರಾರಂಭದ ಹಬ್ಬವೇ ಈ ಯುಗಾದಿ. ಈ ಬಾರಿ ಅಂದರೆ 2024 ರ ಯುಗಾದಿ ಹಬ್ಬವನ್ನು ಸಡಗರದಿಂದ ಏಪ್ರಿಲ್‌ 9 ರಂದು ಆಚರಿಸಲಾಗುವುದು.

ಹಿಂದೂ ಕ್ಯಾಲೆಂಡರ್ ಪ್ರಕಾರ, ಯುಗಾದಿ ಹಬ್ಬವನ್ನು ಚೈತ್ರ ಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ. ಈ ದಿನವನ್ನು ಮರಾಠಿ ಮತ್ತು ಕೊಂಕಣಿ ಹಿಂದೂಗಳು ಗುಡಿ ಪಾಡ್ವಾ ಎಂದು ಆಚರಿಸುತ್ತಾರೆ, ಇದನ್ನು ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.

ಯುಗಾದಿ ಎನ್ನುವ ಪದವು ಎರಡು ಪದಗಳ ಸಂಯೋಗವಾಗಿದೆ. ಯುಗಾದಿ ಎನ್ನುವ ಪದದಲ್ಲಿ ಯುಗ ಎಂದರೆ ಅವಧಿ ಮತ್ತು ಆದಿ ಎಂದರೆ ಆರಂಭ ಅಥವಾ ಪ್ರಾರಂಭ. ಯುಗಾದಿ ಎಂದರೆ ”ಹೊಸ ಯುಗದ ಆರಂಭ” ಎಂದರ್ಥ. ಯುಗಾದಿಯ ಬಗ್ಗೆ ತಿಳಿದುಕೊಳ್ಳಲು ನಮಗೆ ಸಾಕಷ್ಟು ವಿಚಾರಗಳಿವೆ. ಅವು ಯಾವುವು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ವಿವರಿಸುವ ಪ್ರಯತ್ನ ಮಾಡಲಾಗಿದೆ.

1. ಯುಗಾದಿಯ ಇತಿಹಾಸ: ಹಿಂದೂ ಪುರಾಣಗಳ ಪ್ರಕಾರ, ಬ್ರಹ್ಮ ದೇವರು ಯುಗಾದಿಯಂದು ಬ್ರಹ್ಮಾಂಡದ ಸೃಷ್ಟಿಯನ್ನು ಪ್ರಾರಂಭಿಸಿದನು ಎನ್ನುವ ಉಲ್ಲೇಖವಿದೆ. ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಆಚರಿಸುವ ಒಂಬತ್ತು ದಿನಗಳ ಉತ್ಸವದ ಮೊದಲ ದಿನ – ಚೈತ್ರ ನವರಾತ್ರಿಯು ಈ ದಿನದಿಂದ ಪ್ರಾರಂಭವಾಗುತ್ತದೆ.

ಭಗವಾನ್ ಬ್ರಹ್ಮನಿಂದ ಮಾನವಕುಲದ ಸೃಷ್ಟಿಯ ಪ್ರಾರಂಭವನ್ನು ಗುರುತಿಸಲು ಯುಗಾದಿ ಎಂದು ಈ ದಿನವನ್ನು ಆಚರಿಸಲಾಗುತ್ತದೆ. 12 ನೇ ಶತಮಾನದಲ್ಲಿ, ಭಾರತೀಯ ಗಣಿತಜ್ಞ ಭಾಸ್ಕರಾಚಾರ್ಯರು ಯುಗಾದಿಯನ್ನು ಹೊಸ ವರ್ಷದ ಆರಂಭ, ಹೊಸ ತಿಂಗಳು ಮತ್ತು ಹೊಸ ದಿನ ಎಂದು ಉಲ್ಲೇಖಿಸಿದ್ದಾರೆ.

2. ಯುಗಾದಿಯ ಮಹತ್ವ: ಈ ಮೊದಲೇ ತಿಳಿಸಿದಂತೆ ಯುಗಾದಿ ಎಂದರೆ ಹೊಸ ವರ್ಷದ ಆರಂಭ. ಯುಗ ಎಂದರೆ ಅವಧಿ ಮತ್ತು ಆದಿ ಎಂದರೆ ಯಾವುದೋ ಒಂದು ಆರಂಭ. ಯುಗಾದಿಯು ಬ್ರಹ್ಮಾಂಡವನ್ನು ಸೃಷ್ಟಿಸುವ ಭಗವಾನ್ ಬ್ರಹ್ಮನ ಶ್ರಮವನ್ನು ಸೂಚಿಸುತ್ತದೆ. ಇದು ಚಳಿಗಾಲದ ಕಠೋರವಾದ ಚಳಿಯ ನಂತರ ವಸಂತಕಾಲದ ಆರಂಭ ಮತ್ತು ಸೌಮ್ಯವಾದ ಹವಾಮಾನವನ್ನು ಸೂಚಿಸುವ ಹಬ್ಬವಾಗಿದೆ. ಇದು ವಸಂತ ಋತುವನ್ನು ಸ್ವಾಗತಿಸಲು ಆಚರಿಸುವ ಹಬ್ಬವೂ ಹೌದು.

3. ಯುಗಾದಿ ಆಚರಣೆ ಹೇಗೆ..? ಯುಗಾದಿ ಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಳ್ಳುವುದು ವಾರದಿಂದಲೇ ಆರಂಭವಾಗುತ್ತದೆ. ತಮ್ಮ ಮನೆಗಳನ್ನು ಸ್ವಚ್ಛಗೊಳಿಸುವುದು ಮತ್ತು ಹೊಸ ಬಟ್ಟೆಗಳನ್ನು ಖರೀದಿಸುವ ಭರಾಟೆಯಲ್ಲೂ ಜನರು ತೊಡಗಿಕೊಳ್ಳುತ್ತಾರೆ. ಮನೆಯ ಪ್ರವೇಶದ್ವಾರಗಳನ್ನು ಮಾವಿನ ಎಲೆಗಳ ತೋರಣದಿಂದ ಅಲಂಕರಿಸುತ್ತಾರೆ.

ಹಬ್ಬದ ದಿನದಂದು ಜನರು ತಮ್ಮ ಮನೆಯ ಸುತ್ತಲಿನ ಸ್ಥಳಗಳನ್ನು ಹಸುವಿನ ಸಗಣಿಯಿಂದ ( ಈ ಹಿಂದೆ ಮಣ್ಣಿನ ನೆಲವಾಗಿದ್ದಾಗ ಮಾಡುತ್ತಿದ್ದರು ಈಗ ಕಾಂಕ್ರೀಟ್‌ ರಸ್ತೆಗಳು ಆಗಿರುವುದರಿಂದ ಈ ಸಂಪ್ರದಾಯ ಇಲ್ಲವಾಗಿದೆ.) ನೀರನ್ನು ಸಿಂಪಡಿಸಿ ಸ್ವಚ್ಛಗೊಳಿಸಿದರೆ, ಇನ್ನೂ ಕೆಲವರು ಹಸುವಿನ ಸಗಣಿಯನ್ನು ಹಾಕಿ ಮನೆಯಂಗಳವನ್ನು ಸ್ವಚ್ಛಗೊಳಿಸುತ್ತಾರೆ.

ನಂತರ ಮನೆಯನ್ನು ಹೂವುಗಳಿಂದ ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ. ತಮ್ಮ ಊರ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ, ಭಕ್ತರು ಎಣ್ಣೆ ಸ್ನಾನದಿಂದ ದಿನವನ್ನು ಪ್ರಾರಂಭಿಸುತ್ತಾರೆ. ಸಂಬಂಧಿಕರು ಒಟ್ಟಿಗೆ ಸೇರಿ ಈ ದಿನವನ್ನು ಸಂಭ್ರಮಿಸುತ್ತಾರೆ.

ಯುಗಾದಿಯನ್ನು ಹಿಂದೂಗಳು ಸೃಷ್ಟಿಯ ಆರಂಭ ಮತ್ತು ಹೊಸ ವರ್ಷದ ಪ್ರಾರಂಭವೆಂದೂ ಆಚರಿಸುವುದು ರೂಡಿಯಲ್ಲಿದೆ. ಯುಗಾದಿ ಹಬ್ಬದ ಆಚರಣೆ ವಿಧಿ ವಿಧಾನಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದ್ದರೂ ಕೆಲವೊಂದು ಸ್ಥಳಗಳಲ್ಲಿ ಈ ದಿನ ಎಣ್ಣೆ ಸ್ನಾನ ಮಾಡಿ, ದೇವರನ್ನು ಪೂಜಿಸಿ ನಂತರ ಸಿಹಿಯುಣ್ಣುವ ಸಂಪ್ರದಾಯ ಈಗಲೂ ಇದೆ.

ಇನ್ನು ಎಲ್ಲದಕ್ಕಿಂತ ಪ್ರಮುಖವಾಗಿ ಬೇವು ಬೆಲ್ಲ ಬರೆಸಿ ಪ್ರಸಾದವಾಗಿ ಹಬ್ಬದ ದಿನದಂದು ತಿನ್ನುವ ಮೂಲಕ ಜೀವನವು ಹೀಗೆ ಬೇವು ಬೆಲ್ಲದಂತೆ ಕೂಡಿರಲಿ ಎಂದು ಪ್ರತಿಯೊಬ್ಬರು ತಮ್ಮ ಇಷ್ಟಾದೇವತೆಗಳನ್ನು ಸ್ಮರಿಸಿಕೊಳ್ಳುತ್ತಾರೆ.

ಇನ್ನು ಮೊದಲೇ ತಿಳಿಸಿದಂತೆ ಈ ಹಬ್ಬದ ಆರಂಭದಲ್ಲಿ ಜೂಜಾಡುವುದು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತದೆ.ಈ ಜೂಜಾಟದಿಂದ ಕೆಲವರು ಆಸ್ತಿ ಪಾಸ್ತಿಯನ್ನು ಕಳೆದುಕೊಂಡರೆ ಇನ್ನು ಕೆಲವರು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. ಹೀಗಾಗಿ ಈ ಹಬ್ಬ ಸಂಭ್ರಮದ ಜತೆಗೆ ದುಃಖವನ್ನು ಜತೆಜತೆಗೆ ತರುತ್ತದೆ ಎಂದರೆ ಅಷ್ಟಾಗಿ ತಪ್ಪಾಗಲಾರದು.

Leave a Reply

error: Content is protected !!
LATEST
ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿ ಸೆರೆ ಬೀದರ್: ಸಿಬ್ಬಂದಿ ಹತ್ಯೆಮಾಡಿ 93 ಲಕ್ಷ ದೋಚಿ ಪರಾರಿಯಾಗಿದ್ದ ಖದೀಮರ ಬಂಧನ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ನಟ ಸೈಫ್‌ ಅಲಿ ಖಾನ್‌ ಪ್ರಾಣಾಪಾಯದಿಂದ ಪಾರು ಎಟಿಎಂಗೆ ಹಣ ತುಂಬಲು ಬಂದ ಎಸ್‌ಬಿಐ ಸಿಬ್ಬಂದಿ ಮೇಲೆ ಖದೀಮರಿಂದ ಗುಂಡಿನ ದಾಳಿ- ಓರ್ವ ಸಾವು, ₹93 ಲಕ್ಷ ದೋಚಿ ಪರಾರಿ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ ವಿತರಣೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ ₹390 ಕೋಟಿ ಹೂಡಿಕೆಯ ಬ್ಯಾಟರಿ ಫ್ಯಾಕ್ಟರಿಗೆ ಶಂಕುಸ್ಥಾಪನೆ : ಸಚಿವ ಪಾಟೀಲ್‌ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು...