ರಾಯಚೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಲಿಂಗಸುಗೂರು ಘಟಕ ವ್ಯವಸ್ಥಾಪಕ ಅದೆಪ್ಪ ಅವರನ್ನು ಮಸ್ಕಿ ಘಟಕಕ್ಕೆ ವರ್ಗಾವಣೆ ಮಾಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಕಳೆದ 2022ರ ಡಿಸೆಂಬರ್ 10ರಂದೆ ಅದೆಪ್ಪ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಆ ವರ್ಗಾವಣೆ ಆದೇಶವನ್ನು ತಡೆಹಿಡಿಯಲಾಗಿತ್ತು. ಮತ್ತೆ ಆ ಆದೇಶವನ್ನು ಪರಿಶೀಲಿಸಿ ಈ ಮೊದಲೆ ವರ್ಗಾವಣೆಗೊಂಡಿದ್ದ ಮಸ್ಕಿ ಘಟಕಕ್ಕೇ ಹೋಗಿ ಕಾರ್ಯಭಾರ ವಹಿಸಿಕೊಳ್ಳಬೇಕು ಎಂದು ಗುರುವಾರ (ಜ.5) ಆದೇಶ ಹೊರಡಿಸಿದ್ದಾರೆ.
ಕೆಕೆಆರ್‌ಟಿಸಿ : ಲಿಂಗಸೂಗುರು ಘಟಕ ವ್ಯವಸ್ಥಾಪಕನ ದರ್ಪ – ಮಾಡದ ತಪ್ಪಿಗೆ 1200 ರೂ. ದಂಡ ಕಟ್ಟುತ್ತಿರುವ ಚಾಲಕರು
ಕಳೆದ ತಿಂಗಳು ತಮ್ಮ ಘಟಕದ ಚಾಲಕರೊಬ್ಬರ ಮೇಲೆ ನಮ್ಮ ವಾಹನವನ್ನು ಓವರ್‌ಟೇಕ್ ಮಾಡಲು ಬಿಡಲಿಲ್ಲ ಎಂದು 7-8 ಮಂದಿಯಿದ್ದ ಪುಂಡರ ಗುಂಪು ಹಲ್ಲೆ ಮಾಡಿತ್ತು. ಈ ವೇಳೆ ಚಾಲಕನ ಕೈ ಬೆರಳುಗಳನ್ನು ಮುರಿದು ಹಾಕಿದ್ದರು. ಆದರೂ ಆ ಪುಂಡರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕಿದ್ದ ಡಿಎಂ ಅದೆಪ್ಪ ಏನು ಗೊತ್ತೆ ಇಲ್ಲ ಎಂಬಂತೆ ನಡೆದುಕೊಂಡಿದ್ದರು.
ಈ ಬಗ್ಗೆ ಬಲ್ಲ ಮೂಲಗಳಿಂದ ಬಂದ ಮಾಹಿತಿ ಮೇರೆಗೆ ವಿಷಯವನ್ನು ಖಚಿತ ಪಡಿಸಿಕೊಂಡ ವಿಜಯಪಥ ಡಿಎಂ ಅವರ ನಡೆಯ ಬಗ್ಗೆ ಸವಿಸ್ತಾರವಾಗಿ ವರದಿ ಮಾಡಿತ್ತು. ಆ ಬಳಿಕ ಎಚ್ಚೆತ್ತುಕೊಂಡಿದ್ದ ಅದೆಪ್ಪ ಅಂದು ರಾತ್ರಿಯೇ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು.
ಇನ್ನು ಅದಪ್ಪ ತಮ್ಮ ಘಟಕದ ಚಾಲನ ಸಿಬ್ಬಂದಿ ವರ್ಗದವರನ್ನು ಕೀಳು ಮಟ್ಟದಲ್ಲಿ ನಡೆಸಿಕೊಳ್ಳುತ್ತಿದ್ದ ಬಗ್ಗೆ ಹಾಗೂ ಮನಸೋ ಇಚ್ಛೆ ನೌಕರರಿಗೆ ದಂಡ ವಿಧಿಸುತ್ತಿದ್ದ ಬಗ್ಗೆಯೂ ವಿಜಯಪಥ ಸಮಗ್ರ ವರದಿ ಮಾಡಿತ್ತು. ಈ ಎಲ್ಲವನ್ನು ಗಮನಿಸಿದ ಮೇಲಧಿಕಾರಿಗಳು ಅದೆಪ್ಪ ಅವರನ್ನು ವರ್ಗಾವಣೆ ಮಾಡಿದ್ದಾರೆ.
ಕೆಕೆಆರ್‌ಟಿಸಿ: ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ- ಆದರೂ ಪೊಲೀಸ್ ದೂರು ದಾಖಲಿಸದಂತೆ ಡಿಎಂನಿಂದಲೇ ಬೆದರಿಕೆ
ಮಸ್ಕಿ ಘಟಕಕ್ಕೆ ವರ್ಗಾವಣೆಗೊಂಡಿರುವ ಅದೆಪ್ಪ ಅವರು ಅಲ್ಲಾದರೂ ನೌಕರರಿಗೆ ಸ್ಪಂದಿಸಿ ಅವರಿಂದ ಕೆಲಸ ತೆಗೆದುಕೊಳ್ಳುವ ಜಾಣ್ಮೆ ಮರೆಯಬೇಕಿದೆ. ಆ ಮೂಲಕ ನಾವು ಸಾರ್ವಜನಿಕ ಸೇವೆಯಲ್ಲಿರುವವರು ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ನಾಡಿನ ಜನರಿಗೆ ನಮ್ಮ ಸೇವೆಯನ್ನು ಉತ್ತಮವಾಗಿ ಸಲ್ಲಿಸೋಣ ಎಂಬ ನಿಲುವನ್ನು ತಾಳಲಿ ಎಂದು ನೊಂದ ನೌಕರರು ಮನವಿ ಮಾಡಿದ್ದಾರೆ.
[wp-rss-aggregator limit=”4″ pagination=”on”]