NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಕೂಟಕ್ಕೂ ಚಾಟಿ, 6 ನೇ ವೇತನ ಆಯೋಗ ಮಾಡಿಸುತ್ತೇನೆಂದು ರಕ್ತದಲ್ಲಿ ಬರೆದು ಕೊಡುತ್ತೇನೆ ಅಂತ ಹೇಳಿದ್ದ ವಕೀಲರು ಈಗ ಎಲ್ಲಿದ್ದಾರೆ : ಜಂಟಿ ಕ್ರಿಯಾಸಮಿತಿ ಪ್ರಶ್ನೆ

ವಿಜಯಪಥ ಸಮಗ್ರ ಸುದ್ದಿ
ತಾವು ಬಹಿರಂಗ ಚರ್ಚೆಗೆ ಕರೆದಿದ್ದೀರಿ ಸ್ಥಳ, ಸಮಯ ತಿಳಿಸಿ ಅಲ್ಲಿ ಬುಲ್ಡೋಜರ್ ಹೊಡೆಯೋದು ಬೇಡ. ತಜ್ಞರನ್ನು ಇಟ್ಟುಕೊಂಡು ಚರ್ಚೆ ಮಾಡಲು ನಾವು ಸಿದ್ದರಿದ್ದೇವೆ

ಬೆಂಗಳೂರು: ವೈಜ್ಞಾನಿಕ ವೇತನ ಪದ್ದತಿ ID ಕಾಯ್ದೆ 1947 ರ ಅಡಿ ಆಗುತ್ತಿದ್ದ ದ್ವಿಪಕ್ಷೀಯ ಒಪ್ಪಂದ ( 2p settlement). ಇದರ ಬಗ್ಗೆ ಕಾನೂನು ತಜ್ಞರ ಬಳಿ ತಿಳಿದುಕೊಳ್ಳಿ. ಸರ್ಕಾರಿ ನೌಕರರನ್ನಾಗಿ ಮಾಡಬೇಕು ಅಂತ ಹಲವು ವರ್ಷಗಳಿಂದ ಪ್ರಚಾರ ಮಾಡಿ ಯಾವ ಸಂಘಗಳು ಬೇಡ ಎಂದು ಹೇಳಿದವರು ಯಾರು?

ಸಂಘಗಳು ಬೇಡ – ಅವರ ಸಹವಾಸವೇ ಬೇಡ ನಾವು ರಚನೆ ಮಾಡಿರುವ ಕೂಟಕ್ಕೆ 100% ಕಾರ್ಮಿಕರ ಬೆಂಬಲ ಇದೆ ಅಂತ ಪ್ರಚಾರ ಮಾಡಿ ಡಿಸೆಂಬರ್- 2020 ರಲ್ಲಿ ಮುಷ್ಕರ ಮಾಡಿಸಿದ್ದು ಯಾರು? ಆ ವೇಳೆ ಇದೇ ಕೊನೆ ಹೋರಾಟ ಅಂತ ಕಾರ್ಮಿಕರನ್ನು ಪ್ರಚೋದಿಸಿದ್ದು ಯಾರು? ಸಂಘಗಳು ಕಾರ್ಮಿಕರ ಎದುರು ಮಾತನಾಡೋದಿಲ್ಲ. 4 ಗೋಡೆಗಳ ಮಧ್ಯೆ ಮಾತನಾಡುತ್ತಾರೆ ಅಂತ ಅಪಪ್ರಚಾರ ಮಾಡಿ ತಾವು ಮಾತನಾಡಿದ್ದು ಎಲ್ಲೆಲ್ಲಿ? ಆನಂತರ ಆ ಮುಷ್ಕರ ಮುಕ್ತಾಯ ಮಾಡಿದ್ದು ಏಕೆ?

100 % ಬೆಂಬಲ ಇದ್ದ ಮೇಲೆ ಸರ್ಕಾರಿ ನೌಕರರನ್ನಾಗಿ ಮಾಡಿಸಬೇಕಿತ್ತು ಅಲ್ಲವೇ? ನಂತರ ಸರ್ಕಾರಿ ನೌಕರರಾಗಬೇಕು ಎಂಬ ಬೇಡಿಕೆಯನ್ನು ಕೈಬಿಟ್ಟವರು ಯಾರು? ಏಪ್ರಿಲ್- 2021 ರಲ್ಲಿ 6 ನೇ ವೇತನ ಆಯೋಗದ ಜಾರಿಗೆ ಸರ್ಕಾರ ಬರೆದುಕೊಟ್ಟಿದೆ ಅಂತ ಹೇಳಿ 15 ದಿವಸಗಳ ಕಾಲ ಸಾರಿಗೆ ಕಾರ್ಮಿಕರು ಐತಿಹಾಸಿಕ ಮುಷ್ಕರ ಮಾಡಿದರು. ಆದರೂ ಏಕೆ 6 ನೇ ವೇತನ ಆಯೋಗವನ್ನು ಜಾರಿ ಮಾಡಿಸಲಿಲ್ಲ? ನೂರಕ್ಕೆ ನೂರು ಮುಷ್ಕರ ಮಾಡಿದಾಗ್ಯೂ ಬೇಡಿಕೆ ಈಡೇರಲಿಲ್ಲ ಏಕೆ?

ಈಗ ಅವರಿವರ ಮೇಲೇ ಹೇಳಿಕೊಂಡು ಕಾರ್ಮಿಕರನ್ನು ದಾರಿ ತಪ್ಪಿಸುತ್ತಿರೋರು ಯಾರು? ಮುಷ್ಕರದ ವೇಳೆ ಸಾವಿರಾರು ಕಾರ್ಮಿಕರ ವರ್ಗಾವಣೆ- ಡಿಸ್ಮಿಸಲ್- ಅಮಾನತು- ವೇತನ ಕಡಿತ ಮುಂತಾದವುಗಳನ್ನು ಮಾಡಿದ ನಂತರ ತಾವು ಸಂಘಗಳ ಸಹವಾಸವೇ ಬೇಡ ಅಂತ ಹೇಳಿದ್ದರೂ ಸಹ ನಿಗಮಗಳಲ್ಲಿನ ಎಲ್ಲ ಸಂಘಗಳು ಶಿಕ್ಷೆಗಳನ್ನು ವಾಪಸ್ಸು ಪಡೆಯಬೇಕು ಅಂತ ಮನವಿ ಸಲ್ಲಿಸಿ ಸರ್ಕಾರ ಮತ್ತು ಆಡಳಿತ ವರ್ಗಗಳನ್ನು ಒತ್ತಾಯಿಸಿದ್ದೇವೆ.

ಸ್ವಲ್ಪ ಸುದಾರಣೆ ಆಗಿದ್ದರೆ ಅದು ಎಲ್ಲ ಸಂಘಗಳ ಪ್ರಯತ್ನವಲ್ಲವೆ? ಆನಂತರ ಸಂಘಗಳು ಹೋರಾಟ ಮಾಡಿದರೆ ಹೋರಾಟಕ್ಕೆ ಹೋಗಬೇಡಿ ಅಂತ ಹೇಳಿ ಅಡ್ಡಿಪಡಿಸಿದ್ದು ನೀನೆ ಅಲ್ಲವೆ? ನಂತರದಲ್ಲಿ ಇದೇ ಕೊನೆ ಹೋರಾಟ ಅಂತ ಬಳ್ಳಾರಿಯಲ್ಲಿ ಅನಿರ್ದಿಷ್ಟ ಉಪವಾಸ ಮಾಡಿ ಏನು ಇಲ್ಲದೆ ಬರಿಗೈನಲ್ಲಿ ಬಂದುದ್ದು ಏಕೆ?

ರಕ್ತದಲ್ಲಿ ಬರೆದು ಕೊಡುತ್ತೇನೆ ಅಂತ ಹೇಳಿದ್ದರು: ಈಗ ಸೈಕಲ್ ಜಾಥಾ ಚಳವಳಿಯನ್ನು ಜಂಟಿ ಕ್ರಿಯಾ ಸಮಿತಿಯ ರಚನೆ ನಂತರ ಸಮಾವೇಶಗಳಿಗೆ ನಿರ್ಧರಿಸಿದ ವೇಳೆಯಲ್ಲಿ ಆರಂಭಿಸಿದ್ದು ಏಕೆ?  ಹೋರಾಟಕ್ಕೆ ಯಾರದ್ದು ಅಡ್ಡಿ ಇಲ್ಲ. ಈಗಲೂ ಇಲ್ಲ- ಸಲ್ಲದ ಸುಳ್ಳುಗಳನ್ನು ಹೇಳುತ್ತಾ ಇದೇ ಕೊನೆ ಹೋರಾಟ ಅಂತ ಹೇಳಲು ಹೊರಟಿದ್ದೀಯಾ. ತಾವುಗಳು 2019 ರಿಂದಲು ಸಮಯ ಸಾಕಷ್ಟಿತ್ತು. ಸರ್ಕಾರಿ ನೌಕರರನ್ನಾಗಿ ಮಾಡಿಸಿದ್ದರೆ ಆಗುತ್ತಿತ್ತಲ್ಲವೇ?

ಸರ್ಕಾರಿ ನೌಕರರು- 6 ನೇ ವೇತನ ಆಯೋಗ, ಕೇಂದ್ರ ಸರ್ಕಾರಿ ನೌಕರರ ವೇತನ, ಶಾಶ್ವತ ಪರಿಹಾರ ಯಾರು ಬೇಡ ಅಂದಿದ್ದಾರೆ. ಇದೆಲ್ಲವನ್ನೂ ಮಾಡಬೇಕಾಗಿರುವುದು ಸರ್ಕಾರ ತಾನೆ? ವಿನಾ ಕಾರಣ ಸಂಘಗಳನ್ನು ಏಕೆ ದೂರುತ್ತೀಯಾ? ಸಂಘಗಳ ಸಹವಾಸವೇ ಬೇಡ ಅಂದ ಮೇಲೇ ಸಾರಿಗೆ ಕಾರ್ಮಿಕರು ಸಂಪೂರ್ಣ ಬೆಂಬಲ ನೀಡಿದ್ದರು. ತಾವು ಶಿವರಾಜ್ ಸುಪ್ರೀಂ ಮತ್ತು ಹೈಕೋರ್ಟ್ ವಕೀಲರನ್ನಾಗಿ ನೇಮಿಸಿಕೊಂಡಿದ್ದೀರಲ್ಲವೇ? ಅವರು ಸಹ ನಿನ್ನ ಆಗೆಯೇ ಸರ್ಕಾರಿ ನೌಕರರನ್ನಾಗಿ ಮಾಡಿಸಿ 6 ನೇ ವೇತನ ಆಯೋಗವನ್ನು ಜಾರಿಗೆ ಮಾಡಿಸುತ್ತೇನೆಂದು ರಕ್ತದಲ್ಲಿ ಬರೆದು ಕೊಡುತ್ತೇನೆ ಅಂತ ಹೇಳಿದ್ದರು. ಈಗ ಅವರು ಎಲ್ಲಿದ್ದಾರೆ.

ಇನ್ನು ಕೋಡಿಹಳ್ಳಿ ಚಂದ್ರ ಶೇಖರ್ ಅವರು ಸ್ಟಿಂಗ್ ಆಪರೇಷನ್‌ಗೆ ಒಳಗಾಗಿದ್ದು ಪ್ರಪಂಚಕ್ಕೆ ತಿಳಿದಿದೆ. ಅವರನ್ನು ಮುಖಂಡರು ಮತ್ತು ನಿನ್ನ ಸಂಘದ ಗೌರವಾಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಸಾರಿಗೆ ಕಾರ್ಮಿಕರು 1957 ರಿಂದ ಕಾರ್ಮಿಕ ಸಂಘಟನೆಗಳನ್ನು ಕಟ್ಟಿಕೊಂಡು ಅಂದಿನಿಂದ ಇಲ್ಲಿಯವರೆಗೂ ಹತ್ತಾರು ಸಾವಿರ ನೌಕರರು / ಮುಖಂಡರು ತ್ಯಾಗ ಬಲಿದಾನಗಳನ್ನು ಮಾಡಿ ಹಲವು ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಉತ್ತಮ ಸೌಲಭ್ಯಗಳು ಬೇಕು.

ಏಕಪಕ್ಷೀಯವಾಗಿ ಸರ್ಕಾರ ಘೋಷಿಸುತ್ತಾ ಬಂದಿದೆ: ತಾವು ತುಂಬಾ ಅವೈಜ್ಞಾನಿಕವಾಗಿ ಇರುವ ಸಮಸ್ಯೆಗಳನ್ನು ಬಿಂಬಿಸಲು ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತಿದೆ. ತಾವು 1996 ರಿಂದ 2016 ರವರೆಗಿನ ವೇತನ ಹೆಚ್ಚಳ ದ್ವಿಪಕ್ಷೀಯ ಒಪ್ಪಂದಗಳಾಗಿಲ್ಲ. ಎಲ್ಲವೂ ಏಕಪಕ್ಷೀಯವಾಗಿ ಸರ್ಕಾರ ಘೋಷಿಸುತ್ತಾ ಬಂದಿದೆ. 2016 ರಲ್ಲಿ ಆದ ವೇತನ ಜಾರಿ ಹಾಗೂ ಸರ್ಕಾರಿ ನೌಕರರ ವೇತನ ಇಟ್ಟು ತಾಳೆ ಮಾಡಿ ಸತ್ಯವನ್ನು ಕಾರ್ಮಿಕರಿಗೆ ಹೇಳಿ. ಸರ್ಕಾರಿ ನೌಕರರಿಗಿಂತ ಹೆಚ್ಚಿನ ವೇತನ ಪಡೆಯಲು ಸಾಧ್ಯತೆಗಳು ಇವೆ.

ತಾವುಗಳು ಯಾರಾದರೂ ಕಾನೂನು ತಜ್ಞರನ್ನು ನೇಮಿಸಿಕೊಂಡು ಅವರ ಬಳಿ ಚರ್ಚಿಸಿ ವೈಜ್ಞಾನಿಕ ವೇತನ ಪದ್ಧತಿ ಯಾವುದು ಅಂತ ತಿಳಿದುಕೊಳ್ಳಿ. ತಾವು ಬಹೀರಂಗ ಚರ್ಚೆಗೆ ಕರೆದಿದ್ದೀರಿ ಸ್ಥಳ, ಸಮಯ ತಿಳಿಸಿ ಅಲ್ಲಿ ಬುಲ್ಡೋಜರ್ ಹೊಡೆಯೋದು ಬೇಡ. ತಜ್ಞರನ್ನು ಇಟ್ಟುಕೊಂಡು ಚರ್ಚೆ ಮಾಡಲು ನಾವು ಸಿದ್ದರಿದ್ದೇವೆ.

l ಸಾರಿಗೆ ನೌಕರರ ಜಂಟಿ ಕ್ರಿಯಾಸಮಿತಿ 

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...