NEWSಕ್ರೀಡೆದೇಶ-ವಿದೇಶ

ಕಿವೀಸ್ ವಿರುದ್ಧ 2019ರ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತಕ್ಕಿದೆ ಸುವರ್ಣಾವಕಾಶ

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ನಾಲ್ಕು ವರ್ಷದ ಹಿಂದೆ ಅಂದರೆ, 2019ರ ಏಕದಿನ ವಿಶ್ವಕಪ್​ ಟೂರ್ನಿಯ ಸಮಿಫೈನಲ್​ ಪಂದ್ಯ ಮತ್ತೆ ನೆನಪು ಮಾಡಿಕೊಳ್ಳುವ ಕ್ಷಣ ಮರುಕಳಿಸಿದ್ದು, ಆ ಪಂದ್ಯವನ್ನು ಎಂದಿಗೂ ಮರೆಯುವಂತಿಲ್ಲ. ಅಂದು ನ್ಯೂಜಿಲೆಂಡ್​ ಪಡೆ ಇಂಗ್ಲೆಂಡ್​ ನೆಲದಲ್ಲಿ ಭಾರತವನ್ನು ಮಣಿಸಿ, ವಿಶ್ವಕಪ್​ ಟೂರ್ನಿಯಿಂದ ಹೊರಗಟ್ಟಿತ್ತು. ಅಂದು ಕೊಹ್ಲಿ ನಾಯಕರಾಗಿದ್ದರು. ಈ ಸೋಲಿಗೆ ಇಂದು ಪ್ರತೀಕಾರ ತೀರಿಸಿಕೊಳ್ಳುವ ಸಮಯ ಬಂದಿದೆ.

ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ಮೊದಲ ಸೆಮಿಫೈನಲ್​ ಪಂದ್ಯ ನಡೆಯಲಿದೆ. ಇದು 2019ರ ಸಮಿಫೈನಲ್​ ಪಂದ್ಯದ ಮರು ಪಂದ್ಯ ಎಂದೇ ಬಿಂಬಿತವಾಗಿದೆ.

ಹೌದು! ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್​ ಆಯೋಜಿಸಿದ್ದ ಟೂರ್ನಿಯಲ್ಲಿ ಕಿವೀಸ್​ ಮತ್ತು ಇಂಡಿಯಾ ಓಲ್ಡ್​ ಟ್ರಾಫೋರ್ಡ್​ ಕ್ರೀಡಾಂಗಣದಲ್ಲಿ ನಡೆದ ಸಮಿಫೈನಲ್​ ಪಂದ್ಯದಲ್ಲಿ ಸೆಣಸಾಡಿತ್ತು. ಈ ವೇಳೆ ಮೊದಲು ಬ್ಯಾಟ್​ ಮಾಡಿದ್ದ ಕಿವೀಸ್​ ಪಡೆ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 239 ರನ್​ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಇಂಡಿಯಾ 221 ರನ್​ಗಳಿಗೆ ಸರ್ವಪತನ ಕಂಡು ಸೋಲಿನೊಂದಿಗೆ ವಿಶ್ವಕಪ್​ ಅಭಿಯಾನವನ್ನು ಮಗಿಸಿತು. ಅಂದು ಭಾರತದ ಎದುರು ಕಿವೀಸ್​ ರಣಕೇಕೆ ಹಾಕಿತ್ತು.

ಪ್ರತೀಕಾರದ ಕಾಲ ಬಂದಿದೆ: ಅಂದಿನ ಸೋಲಿಗೆ ಇದೀಗ ಪ್ರತೀಕಾರ ತೀರಿಸಿಕೊಳ್ಳುವ ಕಾಲ ಕೂಡಿಬಂದಿದೆ. ನ.15ರಂದು ನಡೆಯಲಿರುವ ಪಂದ್ಯಕ್ಕೆ ಭಾರತ ತಂಡ ಎದುರು ನೋಡುತ್ತಿದೆ. ಪಾಕಿಸ್ಥಾನ ತನ್ನ ರನ್​ರೇಟ್​ ಹಿಗ್ಗಿಸಿಕೊಳ್ಳಲು ವಿಫಲವಾದ್ದರಿಂದ ನ್ಯೂಜಿಲೆಂಡ್​ ಪಡೆದ ಸೆಮೀಸ್​ ಸ್ಥಾನ ಖಚಿತವಾಗಿದೆ. ಈ ಮೂಲಕ ಭಾರತದ ವಿರುದ್ಧ ನಾಕೌಟ್​ ಹಂತದಲ್ಲಿ ಸೆಣಸಾಡಲು ಸನ್ನದ್ಧವಾಗುತ್ತಿದೆ.

ತವರು ನೆಲದಲ್ಲಿ ಭಾರತ ಕಿವೀಸ್​ ಪಡೆಯನ್ನು ಬಗ್ಗುಬಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಆ ಕ್ಷಣಕ್ಕಾಗಿ ಭಾರತದ ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸೆಮೀಸ್​ನಿಂದ ನಮ್ಮನ್ನು ಕಳುಹಿಸಿದ್ದ ನ್ಯೂಜಿಲೆಂಡ್ ಪಡೆಯನ್ನು ಇಂದು ಸಮೀಸ್​ನಿಂದಲೇ ಕಳುಹಿಸುವ ಅವಕಾಶ ಸಿಕ್ಕಿರುವುದು ನ.15ರಂದು ನಡೆಯುವ ಪಂದ್ಯದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.

ಕೊಹ್ಲಿಗೂ ಇದು ಸುಸಂದರ್ಭ: ಕೊಹ್ಲಿ ನಾಯಕತ್ವದಲ್ಲಿ ಸಮಿಫೈನಲ್​ನಿಂದ ಭಾರತ ಹೊರಬಿದ್ದಿದ್ದು, ಕೊಹ್ಲಿಗೂ ಕೂಡ ತುಂಬಾ ನೋವು ಉಂಟು ಮಾಡಿತ್ತು.​ ಅಲ್ಲದೆ, ಆ ಸಮಯದಲ್ಲಿ ಸಾಕಷ್ಟು ಮಂದಿ ಕೊಹ್ಲಿ ನಾಯಕತ್ವವನ್ನು ಪ್ರಶ್ನೆ ಮಾಡಿ, ಅಣಕಿಸಿದ್ದರು ಮತ್ತು ಗೇಲಿ ಮಾಡಿದ್ದರು. ಕಿವೀಸ್​ ವಿರುದ್ಧದ ಸೋಲೇ ಇದಕ್ಕೆ ಕಾರಣವಾಗಿತ್ತು. ಆದರೆ, ಇದೀಗ ಅದೇ ಕಿವೀಸ್​ ಮತ್ತೊಮ್ಮೆ ಮುಖಾಮುಖಿಯಾಗುತ್ತಿದೆ. ಅಂದು ಕೇವಲ 1 ರನ್​ಗೆ ಔಟಾಗಿದ್ದ ಕೊಹ್ಲಿ ಈ ಬಾರಿ ಉತ್ತಮ ಫಾರ್ಮ್​ನಲ್ಲಿದ್ದು, ಕಿವೀಸ್​ ಬೌಲರ್​ಗಳನ್ನು ಕಾಡಿ, ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.

ಸೋಲು ಕಾಣದ ಭಾರತ: ಭಾರತದ ಬ್ಯಾಟ್‌ಮನ್‌ಗಳಾದ ರೋಹಿತ್​ ಶರ್ಮ, ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಅಲ್ಲದೆ, ಬೌಲಿಂಗ್​ನಲ್ಲಿ ಜಸ್ಪ್ರಿತ್​ ಬೂಮ್ರಾ, ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್​ ಹಾಗೂ ರವೀಂದ್ರ ಜಡೇಜಾ ಕೂಡ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಭಾರತ ಎದುರು ಕಿವೀಸ್​ ಸುಲಭ ತುತ್ತಾಗುವ ನಿರೀಕ್ಷೆ ಇದೆ.

ಅದಕ್ಕೆ ಇಂಬು ಕೊಡುವಂತೆ ಪ್ರಸಕ್ತ ವಿಶ್ವಕಪ್​ನಲ್ಲಿ ಭಾರತ ಈವರೆಗೂ ಅಜೇಯನಾಗಿ ಉಳಿದಿದೆ. ಇದುವರೆಗೂ ಆಡಿರುವ 8 ಪಂದ್ಯದಲ್ಲೂ ಅದ್ಭುತ ಗೆಲುವು ದಾಖಲಿಸಿದೆ. ನ.12ರಂದು ನೆದರ್ಲೆಂಡ್ಸ್​ ವಿರುದ್ಧ ಗ್ರೂಪ್​ ಹಂತದ ಕೊನೆಯ ಪಂದ್ಯದ ಹಾಗೂ ನವೆಂಬರ್​ 15ರಂದು ಕಿವೀಸ್ ವಿರುದ್ಧ ಸಮಿಫೈನಲ್​ನಲ್ಲಿ ಕಾದಾಡಲಿದೆ.

ಕಿವೀಸ್ ಸವಾಲೊಡ್ಡುವ ಸಾಧ್ಯತೆ: ಪ್ರಸಕ್ತ ಟೂರ್ನಿಯಲ್ಲಿ ಕಿವೀಸ್​ ಪಡೆ 9 ಪಂದ್ಯಗಳನ್ನು ಆಡಿದ್ದು, 9ರಲ್ಲಿ 5 ರಲ್ಲಿ ಗೆದ್ದು 4ರಲ್ಲಿ ಸೋಲುಂಡಿದೆ. ಭಾರತಕ್ಕೆ ಕಿವೀಸ್​ ಸವಾಲೊಡ್ಡುವ ಸಾಧ್ಯತೆ ಇದೆ. ಅ.22ರಂದು ನಡೆದ ಲೀಗ್​ ಪಂದ್ಯದಲ್ಲಿ ಕಿವೀಸ್​ ಪಡೆ ಭಾರತಕ್ಕೆ 273 ರನ್​ಗಳ ಸವಾಲಿನ ಗುರಿ ನೀಡಿದ್ದನ್ನು ಇಲ್ಲಿ ಮರೆಯುವ ಆಗಿಲ್ಲ.

ಕಿವೀಸ್​ ತಂಡ ಟೂರ್ನಿಯಲ್ಲೇ ಅತ್ಯಂತ ವೈವಿಧ್ಯತೆಯಿಂದ ಕೂಡಿದ ವೇಗ-ಸ್ಪಿನ್​ ಬೌಲಿಂಗ್​ ವಿಭಾಗವನ್ನು ಹೊಂದಿದೆ. ಅಲ್ಲದೆ, ಡೆವೊನ್​ ಕಾನ್​ವೇ, ಡೆರಿಲ್​ ಮಿಚೆಲ್​, ಬೆಂಗಳೂರು ಮೂಲದ ರಚಿನ್​ ರವೀಂದ್ರ ಉತ್ತಮ ಫಾಮ್​ರ್ನಲ್ಲಿರುವುದರಿಂದ ಕಿವೀಸ್​ ಕೂಡ ಭಾರತಕ್ಕೆ ಒಂದೊಳ್ಳೆ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ.

ಏಕದಿನ ವಿಶ್ವಕಪ್​ ಮುಖಾಮುಖಿ: 10- ಭಾರತ: 4ರಲ್ಲಿ ಗೆಲುವು. ನ್ಯೂಜಿಲೆಂಡ್​: 5 ರಲ್ಲಿ ಗೆಲುವು – ರದ್ದು: 1

ಮುಖಾಮುಖಿಯಾಗುವ ತಂಡಗಳು: ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ಪೂರ್ಣವಿರಾಮ: ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ.

ಇನ್ನು ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡ ತಲಾ 40 ಸಾವಿರ ಡಾಲರ್​ ಬಹುಮಾನ ಪಡೆಯಲಿವೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ