ಚೀನಾದ ಏಟಿಗೆ ಎದುರೇಟು ಕೊಡಲು ಭಾರತ ಸಜ್ಜು
ಕ್ಯಾತೆ ತೆಗೆದರೆ ಸೊಂಟ ಮುರಿಯಲು ನಾವು ಸಿದ್ಧ ಎಂದ ಭಾರತೀಯ ಸೈನಿಕರು
ನ್ಯೂಡೆಲ್ಲಿ: ಲಡಾಖ್‌ನ ಗಾಲ್ವಾನ್ ನದಿ ಕಣಿವೆಯಲ್ಲಿ ಭಾರತದ ಯೋಧರೊಂದಿಗೆ ಕಾಲುಕೆರೆದುಕೊಂಡು ಚೀನಾ ಯೋಧರು ಮಲ್ಲಯುದ್ಧಮಾಡಿದ್ದರಿಂದ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ.
ಇಷ್ಟಕ್ಕೆ ನಾವು ಸೋತು ತಲೆ ಬಾಗುತ್ತೇವೆ ಎಂದು ಚೀನಾ ಮಾಡಿಕೊಂಡಿದ್ದ ಊಹೆ ತಿರುಗುಮುರುಗಾಗಿದೆ. ಅಂದರೆ ನಾಲ್ಕೈದು ದಶಕದ ಹಿಂದೆ ನಮ್ಮ ಜಾಗವನ್ನೇ ಒತ್ತುವರಿ ಮಾಡಿಕೊಂಡಿದ್ದರೂ ಶಾಂತಿಗಾಗಿ ಅಂದಿನ ಪ್ರಧಾನಿ ಹೋಗಲಿಬಿಡು ಎಂದು ಚೀನಾ ಮಾಡಿದ್ದ ಒತ್ತುವರಿಯನ್ನು ಬಿಟ್ಟುಕೊಟ್ಟಿದ್ದರು.
ಅದನ್ನೇ ಇಂದು ಒಂದು ರೀತಿ ಭಾರತೀಯರು ಅಂಜುಬುರುಕರು ಎಂಬಂತೆ ಮತ್ತೆ ಕ್ಯಾತೆ ತೆಗೆದುಕೊಂಡು ಇನ್ನಷ್ಟು ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಮುಂದಾಗಿದೆ. ಆದರೆ ಇಂದು ಭಾರತವು ಶೈಕ್ಷಣಕವಾಗಿ, ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಅಷ್ಟೇ ಏಕೆ ಆಹಾರೋತ್ಪಾದನೆಯಲ್ಲೂ ಸಮರ್ಥವಾಗಿದ್ದು, ಏನೆ ಸಮಸ್ಯೆ ಬಂದರು ಎದುರಿಸುವ ಶಕ್ತಿಯನ್ನು ಹೊಂದಿದೆ.
ಇದನ್ನು ಅರಿತಿದ್ದರೂ ಚೀನಾ ಭಾರತವನ್ನು ಕೆಣಕುವ ಸಾಹಸಕ್ಕೆ ಕೈಹಾಕುತ್ತಿದೆ. ಇದಕ್ಕೆ ಚೀನಾ ಮುಂದಿನ ದಿನಗಳಲ್ಲಿ ಸರಿಯಾದ ಬೆಲೆಯನ್ನೇ ತೆತ್ತಬೇಕಾಗುತ್ತದೆ. ಇಲ್ಲ ಈಗಲೇ ಎಚ್ಚೆತ್ತುಕೊಂಡು ಭಾರತದ ಸಹವಾಸಕ್ಕೆ ಬರದಿದ್ದರೆ ಅಭಿವೃದ್ಧಿ ಪಥದತ್ತ ಮುನ್ನುಗ್ಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಲ್ಲಯುದ್ಧದಲ್ಲಿ ಚೀನಾದ 43 ಯೋಧರ ಹತ್ಯೆ
ಇನ್ನು ಸೋಮವಾರ ತಡರಾತ್ರಿ ಲಡಾಖ್‌ನ ಗಾಲ್ವಾನ್ ನದಿ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಮಲ್ಲಯುದ್ಧದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ಅಧಿಕೃತ ಮಾಹಿತಿ ನೀಡಿದೆ.
ಈ ಸಂಘರ್ಷದಲ್ಲಿ ಮೂವರು ಯೋಧರು ಹುತಾತ್ಮರಾಗಿ, 17 ಸೈನಿಕರು ಗಂಭೀರ ಗಾಯಗೊಂಡಿದ್ದರು. ಆದರೆ, ಎತ್ತರದ ಪ್ರದೇಶ ಹಾಗೂ ಶೂನ್ಯಕ್ಕಿಂತಲೂ ಕಡಿಮೆ ಉಷ್ಣಾಂಶವಿರುವ ಪ್ರದೇಶವಿದ್ದರಿಂದ ಗಾಯಗೊಂಡ ಸೈನಿಕರು ಹುತಾತ್ಮರಾಗಿದ್ದಾರೆ. ಈ ಮೂಲಕ 20 ಭಾರತೀಯ ಯೋಧರು ಅಸುನೀಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
ಈ ಮಧ್ಯೆ, ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ 43 ಸೈನಿಕರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಉಭಯ ದೇಶದ ಯೋಧರ ನಡುವಿನ ಸಂಘರ್ಷದಲ್ಲಿ ಭಾರತೀಯ ಸೇನೆಯ ಕರ್ನಲ್ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಹೇಳಿತ್ತು.
ಇದೇ ವೇಳೆ ಚೀನಾದ ಕಡೆಯೂ ಸಾವು ನೋವು ಸಂಭವಿಸಿದ್ದು, 100ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ ಎಂದು ಚೀನಾದ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ನ ಹಿರಿಯ ವರದಿಗಾರ್ತಿ ವಾಂಗ್ ವೆನ್ವೆನ್ ಎಂಬುವರು ಟ್ವೀಟ್ ಮಾಡಿದ್ದರು.