VIJAYAPATHA.IN > ವಿಜಯಪಥ > NEWS > Crime > ನಾಲ್ಕನೇ ಮಹಡಿಯಿಂದ ಹಾರಿಬಿದ್ದು ಯುವಕ ಆತ್ಮಹತ್ಯೆ
ಬೆಂಗಳೂರು: ಯುವಕನೊಬ್ಬ ನಾಲ್ಕನೇ ಮಹಡಿಯಿಂದ ಹಾರಿಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್.ಆರ್.ನಗರದ ಹಲಗೇವಡೆರಹಳ್ಳಿಯಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಮದನ್ (25) ಮೃತ ಯುವಕ. ಮಲ್ಲೇಶ್ವರ ಅರಣ್ಯ ಭವನದಲ್ಲಿ ಚಾಲಕನಾಗಿದ್ದ ಮದನ್, ಆರ್.ಆರ್. ನಗರದಲ್ಲಿ ಬಾಡಿಗೆಗಿದ್ದ ಮನೆಯ ನಾಲ್ಕನೇ ಮಹಡಿಯ ಮೇಲಿಂದ ಜಿಗಿದು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಆದರೆ, ಸ್ನೇಹಿತರೊಂದಿಗಿನ ಜಗಳವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆರ್.ಆರ್.ನಗರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Related
Deva