NEWSನಮ್ಮಜಿಲ್ಲೆನಮ್ಮರಾಜ್ಯ

ಬಜೆಟ್‌ನಲ್ಲಿ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಘೋಷಣೆ ಮಾಡಿ ನುಡಿದಂತೆ ಸರ್ಕಾರ ನಡೆಯಬೇಕು: ಒಕ್ಕೂಟ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸರ್ಕಾರ ಚುನಾವಣೆ ಪೂರ್ವ ನೀಡಿದ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ (7 ನೇ ವೇತನ ಆಯೋಗ) ನೀಡಲು ಬರುವ ಫೆಬ್ರವರಿಯಲ್ಲಿ ಸರ್ಕಾರ ಮಂಡಿಸುವ 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಇಂದು (ಜ.25) ಸಾರಿಗೆ ಸಚಿವರಿಗೆ ಒಕ್ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಶನಿವಾರ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ ಸಾರಿಗೆ ನೌಕರರ ಒಕ್ಕೂಟದ ಪದಾಧಿಕಾರಿಗಳು ಈ ಸಂಬಂಧ ಬಹಳ ವರ್ಷಗಳಿಂದ ಸಾರಿಗೆ ಸಂಸ್ಥೆಗಳಲ್ಲಿ ನಡೆದುಕೊಂಡು ಬರುತ್ತಿರುವ ಅವೈಜ್ಞಾನಿಕ ಚೌಕಸಿ ವೇತನ ಪರಿಷ್ಕರಣೆಯಿಂದ ಸಾರಿಗೆ ನೌಕರರಿಗೂ ಸರ್ಕಾರಿ ಮತ್ತು ಇತರೆ ನಿಗಮಗಳ ನೌಕರರಿಗೆ ಇರುವ ವೇತನಕ್ಕೆ ಹೋಲಿಕೆ ಮಾಡಿದರೆ ಸುಮಾರು 45% ರಷ್ಟು ವೇತನ ವ್ಯತ್ಯಾಸವಿದೆ.

ಹೀಗಾಗಿ ಇದರಿಂದ ಬೇಸತ್ತ ಸಾರಿಗೆ ನೌಕರರು ಕಳೆದ 4 ವರ್ಷಗಳಿಂದ ಹಿಂದಿನ ಸರ್ಕಾರದ ಮುಂದೆ ಹಲವು ಹೋರಾಟಗಳನ್ನು ಮಾಡಿ, ಮನವಿ ಪತ್ರಗಳನ್ನು ನೀಡಿ ಎಷ್ಟೇ ಗೋಗರೆದರು, ಸಾರಿಗೆ ನೌಕರರಿಗೆ ನೀಡಿದ ಲಿಖಿತ ಭರವಸೆಯನ್ನು ಅಂದಿನ ಬಿಜೆಪಿ ಸರ್ಕಾರ ಈಡೇರಿಸಲಿಲ್ಲ. ಅದೇ ಸಮಯ ವಿಧಾನಸಭೆ ಚುನಾವಣೆ ಘೋಷಣೆಯಾಗಿ ತಮ್ಮ ಪಕ್ಷ ಪ್ರಣಾಳಿಕೆಯಲ್ಲಿ ಸಾರಿಗೆ ನೌಕರರಿಗೂ ಕೂಡ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ಮತ್ತು ಸೌಲಭ್ಯಗಳನ್ನು ನೀಡುವ ಭರವಸೆಯನ್ನು ನಂಬಿ ನಾವು ಮತ್ತು ಕುಟುಂಬ ಸದಸ್ಯರು ಮತ ನೀಡಿದ್ದೇವೆ.

ಈ ಎಲ್ಲವನ್ನು ಗಮನದಿಲ್ಲಿಟ್ಟುಕೊಂಡು ನುಡಿದಂತೆ ನಡೆಯುವ ತಮ್ಮ ಸರ್ಕಾರ ಕಳೆದ ಬಾರಿ ತಮ್ಮ ಪಕ್ಷ ನೀಡಿದ 165 ಪ್ರಣಾಳಿಕೆ ಭರವಸೆಯಲ್ಲಿ 158 ಭರವಸೆಗಳನ್ನು ಈಡೇರಿಸಿರುವ ಸರ್ಕಾರ, ಈ ಬಾರಿ ಸಾರಿಗೆ ನೌಕರರಿಗೆ ನೀಡಿರುವ ಪ್ರಣಾಳಿಕೆ ಭರವಸೆಯನ್ನು ಈಡೇರಿಸುತ್ತೀರಿ ಎಂಬ ಅಚಲವಾದ ನಂಬಿಕೆಯಿಂದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಅವೈಜ್ಞಾನಿಕ ಚೌಕಸಿ ವೇತನ ಪರಿಷ್ಕರಣೆ ಬದಿಗೊತ್ತಿ ವೇತನ ಆಯೋದಂತೆ ಸರಿಸಮಾನ ವೇತನ ಕೊಡಬೇಕು ಎಂದು ಒತ್ತಾಯಿಸಿದರು.

ಇನ್ನು ಕೆಲ ಸಂಘಟನೆಗಳು ಅವೈಜ್ಞಾನಿಕ ಚೌಕಸಿ ವೇತನ ಪರಿಷ್ಕರಣೆಗಾಗಿಯೇ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರಕ್ಕೆ ಕರೆ ನೀಡಿದಾಗ, ಬಹುತೇಕ ನೌಕರರು ಮತ್ತು ಅಧಿಕಾರಿಗಳು ಅವರ ಮುಷ್ಕರದ ಕರೆಗೆ ಪ್ರಮುಖ್ಯತೆ ನೀಡಲಿಲ್ಲ. ಆದರಿಂದ ಈಗಾಗಲೇ ಸಾರಿಗೆ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಹಲವಾರು ನೌಕರರು ಸಂಘಟನೆಗಳು ಮತ್ತು ಅಧಿಕಾರಗಳ ಸಂಘಗಳು ಸರ್ಕಾರಿ ನೌಕರರ ಸರಿ ಸಮಾನ ವೇತನಕ್ಕಾಗಿ (7 ನೇ ವೇತನ ಆಯೋಗಕ್ಕೆ) ಮನವಿ ಪತ್ರಗಳನ್ನು ತಮಗೆ ಸಲ್ಲಿಸಲಾಗಿದೆ.

ಅಲ್ಲದೆ ಎರಡನೇ ಬಾರಿಗೆ ಸಾರಿಗೆ ಮಂತ್ರಿಗಳಾಗಿರುವ ತಮಗೆ ಸಾರಿಗೆ ನೌಕರರ ನಿಜವಾದ ಕಷ್ಟ-ನಷ್ಟಗಳ ಆರಿವಿರುವ ತಾವು ಮುಖ್ಯಮಂತ್ರಿಗಳ ಬಳಿಯಲ್ಲಿ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆ ಬಗ್ಗೆ ಚರ್ಚೆ ಮಾಡಿ ಸರ್ಕಾರದ 2025-26ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಚುನಾವಣೆ ಪೂರ್ವ ನೀಡಿದ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ನೀಡಬೇಕೆಂದು ಹಾಗೂ ಈ ಎಲ್ಲ ವಿಚಾರಗಳನ್ನು ಚರ್ಚೆ ಮಾಡಲು ಶೀಘ್ರವಾಗಿ ನೌಕರರ ಸಂಘಟನೆಗಳ ಸಭೆ ಕರೆಯಬೇಕೆಂದು ಸಮಸ್ತ ಸಾರಿಗೆ ನೌಕರರು ಮತ್ತು ಅವರ ಕುಟುಂಬ ಸದಸ್ಯರ ಪರವಾಗಿ ವಿನಂತಿಸುತ್ತೇವೆ.

ಇದರ ಜತೆಗೆ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಒಂದೇ ಕಂತಿನಲ್ಲಿ 38 ತಿಂಗಳ ವೇತನದ ಹಿಂಬಾಕಿಯನ್ನು ಪಾವತಿಸುವುದು. ಅದರಂತೆ ನಿವೃತ್ತ ನೌಕರರಿಗೆ ಮೊದಲ ಆದ್ಯತೆಯಲ್ಲಿ 38 ತಿಂಗಳ ವೇತನದ ಹಿಂಬಾಕಿ ಮತ್ತು ಇತರೆ ಅರ್ಥಿಕ ಸೌಲಭ್ಯಗಳನ್ನು ನೀಡಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ