VIJAYAPATHA.IN > ವಿಜಯಪಥ > NEWS > Crime > ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಬರುತ್ತಿದ್ದ ಉದ್ಯಮಿಯ 5 ಲಕ್ಷ ರೂ.ದೋಚಿದ ಕದೀಮರು
ಧಾರವಾಡ: ಉದ್ಯಮಿಯ ಗಮನ ಬೇರೆಡೆ ಸೆಳೆದ ಕಳ್ಳರು 5 ಲಕ್ಷ ರೂಪಾಯಿ ದೋಚಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಅಬೀದ್ ನಾಲತವಾಡ ಎಂಬುವರೆ ಹಣ ಕಳೆದುಕೊಂಡ ಉದ್ಯಮಿಯಾಗಿದ್ದಾರೆ. ನಾಲತವಾಡ ಅವರು ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಹೊರಟಾಗ ಅದನ್ನು ಗಮನಿಸಿದ ಕದೀಮರು ಅವರನ್ನು ಹಿಂಬಾಲಿಸಿಕೊಂಡು ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
ಸಿಬಿಟಿ ಬಳಿ ಇರುವ ಬ್ಯಾಂಕ್‌ವೊಂದರಿಂದ ಅಬೀದ್ 5 ಲಕ್ಷ ರೂಪಾಯಿಯನ್ನು ಡ್ರಾ ಮಾಡಿಕೊಂಡು ಹೊರಟಿದ್ದರು. ಆದರೆ ಈ ವೇಳೆ ಕಾರನ್ನು ಹಿಂಬಾಲಿಸಿಕೊಂಡು ಬಂದು ಕಾರ್ನ ಗ್ಲಾಸ್ ಒಡೆದು ಕಳವು ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)
Related
Deva