ಮದ್ಯಪ್ರಿಯರಿಗೂ ಯಮನಾದ ಕೊರೊನಾ
ವೈನ್ ಸಿಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡರೆ ವ್ಯಸನಿಗಳು?
ಬೆಂಗಳೂರು: ಮದ್ಯ ಸರಬರಾಜು ಮಾಡಿ ಎಂದು ಮದ್ಯಪ್ರಿಯರು ಸರ್ಕಾರಕ್ಕೆ ದುಂಬಾಲು ಬೀಳುತ್ತಿದ್ದು, ಇನ್ನೊಂದೆಡೆ ಆತ್ಮಹತ್ಯೆಗೂ ಶರಣಾಗಿದ್ದಾರೆ ಎಂದು ಹೇಳಲಾಗುತ್ತದೆ.
vijayapatha.in - ವಿಜಯಪಥ.ಇನ್ ನಿಮಗೆ ವಿಶ್ವಾಸನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅನಿಸಿದರೆ ನಮಗೆ ಆರ್ಥಕವಾಗಿ ಬಲ ನೀಡಿ. ಇನ್ನಷ್ಟು ಸತ್ಯನಿಷ್ಠ ವರದಿಗಳನ್ನು ಮಾಡುವುದಕ್ಕೆ ಬೆಂಬಲ ನೀಡಿ. ಕನಿಷ್ಠ 100 ರೂ. ಒಮ್ಮೆಗೆ ಹಾಕಿ. ನಮ್ಮನ್ನು ಪ್ರೋತ್ಸಾಹಿಸಿ.
ಇಡೀ ವಿಶ್ವವನ್ನೇ ಕೊರೊನಾ ಎಂಬ ಹೆಮ್ಮಾರಿ ಕಾಡುತ್ತಿದ್ದರೆ ಇತ್ತ ನಮಗೆ ವೈನ್‌ಕೊಡಿ ಎಂದು ಮದ್ಯವ್ಯಸನಿಗಳು ಕುಡಿತವನ್ನು ತಾತ್ಕಾಲಿಕವಾಗಿ ತ್ಯೆಜಿಸಲಾರದೆ. ಹುಚ್ಚರಂತೆ ನಡೆದುಕೊಳ್ಳುತ್ತಿದ್ದಾರೆ. ಇತ್ತ ಕೊರೊನಾ ಭೀತಿ ದೇಶ ಮತ್ತು ರಾಜ್ಯವನ್ನು ಕಾಡುತ್ತಿದ್ದು, ಜನರು ಮನೆಯಿಂದ ಹೊರ ಬಾರದಂತೆ ಸರ್ಕಾರ ಕರ್ಫ್ಯೂ ವಿಧಿಸಿದೆ.
ಆದರೂ ಮದ್ಯವೆಸನಿಗಳು ನಮಗೆ ಮದ್ಯಬೇಕು ಎಂದು ಪತ್ರವನ್ನು ಬರೆದಿದ್ದಾರೆ. ಇನ್ನೊಂದೆಡೆ ಕೊರೊನಾ ವೈರಸ್‌ಗೆ ತುತ್ತಾಗುತ್ತಿರುವವರ ಸಂಖ್ಯೆ ಏರುತ್ತಿರುವುದು ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಮಂಗಳಮುಖಿಯರ ಕಣ್ಣೀರು
ಕೊರೊನಾ ಬಾಧೆಯಿಂದ ಮನೆಯಿಂದ ಹೊರಬಾರದಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನೀಡಿರುವ ಆದೇಶವನ್ನು ಪಾಲಿಸುತ್ತಿದೆ. ಅದಕ್ಕೆ ರಾಜ್ಯದ ಜನತೆಯು ಬೆಂಬಲ ನೀಡಿದ್ದಾರೆ. ಈ ನಡುವೆ ಮಂಗಳಮುಖಿಯರು ನಮಗೆ ಆಹಾರ ಸಿಗುತ್ತಿಲ್ಲ. ನಮಗೆ ಹಣಬೇಡ ಅನ್ನಹಾಕಿ ಎಂದು ಸರ್ಕಾರದ ಮೊರೆ ಹೋಗುತ್ತಿದ್ದಾರೆ. ಇನ್ನು ಭಿಕ್ಷುಕರನ್ನು ಹಲವು ಸಂಘಸಂಸ್ಥೆಗಳು ಗುರುತಿಸಿ ಆಹಾರವನ್ನು ನೀಡುತ್ತಿದ್ದು, ಅವರ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಸೌಲಭ್ಯವನ್ನು ಒದಗಿಸುತ್ತಿವೆ.
ಸರ್ಕಾರವು ಸಂಘಸಂಸ್ಥೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಹಲವು ಉದ್ಯಮಿಗಳು, ಸಿನಿಮಾ ತಾರೆಯರು, ನಾಗರಿಕರು ಸರ್ಕಾರಕ್ಕೆ ದೇಣಿಗೆಯನ್ನು ನೀಡುತ್ತಿದ್ದಾರೆ. ಆದರೆ ಒಂದಿಬ್ಬರು ರಾಜಕಾರಣಿಗಳನ್ನು ಬಿಟ್ಟರೆ ಉಳಿದ ರಾಜಕಾರಣಿಗಳು ಯಾವುದೇ ಸಹಾಯ ಮಾಡಲು ಮುಂದಾಗುತ್ತಿಲ್ಲ. ಇದು ರಾಜ್ಯದ ಜನತೆಯ ದೌರ್ಭಾಗ್ಯ. ಇನ್ನು ಮೇಲಾದರು ತಮ್ಮ ಕ್ಷೇತ್ರಗಳಲ್ಲಾದರೂ ನಿರ್ಗತಿಕ ಜನರಿಗೆ ನೆರವಾಗಬೇಕಿದೆ.
![](https://vijayapatha.in/wp-content/uploads/2024/02/QR-Code-VP-1-1-300x62.png)