VIJAYAPATHA.IN > ವಿಜಯಪಥ > NEWS > Crime > ಯುವಕನೊಬ್ಬನ ಮೇಲೆ ಮನಸ್ಸೋ ಇಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ- ಪರಾರಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊಲೆ, ಸುಲಿಗೆ, ದರೋಡೆಗಳು ದಿನದಿಂದ ದಿನಕ್ಕೆ ಎಲ್ಲೆ ಮೀರಿದ್ದು, ಮಟ್ಟಹಾಕಲು ಪೊಲೀಸರು ಮೀನಮೇಷ ಎಣಿಸದಂತೆ ಕಾಣುತ್ತಿದೆ. ಆ ಕಾರಣದಿಂದಲೂ ಏನೋ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬನ ಮೇಲೆ ಮನಸ್ಸೋ ಇಚ್ಚೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ನಾಲ್ಕು ಜನ ಯುವಕರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅವರ ಹಿಂದೆ ಬೈಕ್ ಮೇಲೆ ಇಬ್ಬರು ಯುವಕರು ಬಂದಿದ್ದಾರೆ. ಹೀಗೆ ಬಂದವರೇ ನಡುರಸ್ತೆಯಲ್ಲೇ ಓರ್ವ ಅಮಾಯಕನನ್ನು ಹಿಡಿದು ಮನಸ್ಸೋ ಇಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ನಾಲ್ಕು ಜನರಲ್ಲಿ ಮೂವರು ಅಲ್ಲಿಂದ ಓಡಿ ಹೋಗಿದ್ದಾರೆ. ಒಬ್ಬನನ್ನು ಹಿಡಿದು ಇಬ್ಬರು ಪುಂಡರು ಥಳಿಸಿದ್ದಾರೆ. ಅಸ್ಸಾಂ ಮೂಲದ ಮನೋಜ್, ಹೋಟೆಲ್ವೊಂದರಲ್ಲಿ ಕೆಲಸ ಮುಗಿಸಿ ತೆರಳುತ್ತಿದ್ದ ವೇಳೆ ಆರೋಪಿಗಳು, ದರೋಡೆಗೆ ಯತ್ನಿಸಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
Related
Deva