NEWSಕೃಷಿನಮ್ಮರಾಜ್ಯ

ವಿಪಕ್ಷ ನಾಯಕನಾಗಿದ್ದಾಗ ರೈತರ ಮೇಲೆ ಇದ್ದ ಕಾಳಜಿ ಸಿಎಂ ಆದಮೇಲೆ ಇಲ್ಲ: ಸಿದ್ದರಾಮಯ್ಯ ವಿರುದ್ಧ ಕುರುಬೂರು ಶಾಂತಕುಮಾರ್‌ ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ

ಮೈಸೂರ್: ನಾನು ರೈತ ಸಂಘದ ಹೋರಾಟಗಾರನಾಗಿದ್ದೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಹೋರಾಟಕ್ಕೆ ಆಸ್ಪದ ನೀಡದೆ ಬಂಧನ ಮಾಡಿಸಿದ್ದು, ಶೋಭೆ ತರುವಂತದ್ದಲ್ಲ ಎಂದು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ರೈತರ ಸಮಸ್ಯೆಗಳು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಇದೇ ನವೆಂಬರ್ 9ರಂದು ಸಿಎಂ ಸಿದ್ದರಾಮಯ್ಯನವರ ಮನೆ ಮುಂದೆ ಕಬ್ಬು ಬೆಳೆಗಾರ ರೈತರು ಧರಣಿ ನಡೆಸಲು ಆಸ್ಪದ ನೀಡದೆ ಬಂಧನ ಮಾಡಿದ ಪೊಲೀಸ್ ವರ್ತನೆ ಖಂಡನೀಯ. ಮುಖ್ಯಮಂತ್ರಿಗಳ ಮುಂದಿನ ಮೈಸೂರು ಪ್ರವಾಸದ ವೇಳೆ ರೈತ ಮುಖಂಡರ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನುತ್ ಬಂಧಿತರಾಗಿದ್ದ ಚಳವಳಿ ನಿರತ ರೈತರ ಬಳಿ ಬಂದು ಭರವಸೆ ನೀಡಿದ್ದಾರೆ. ಇದು ಮುಖ್ಯಮಂತ್ರಿಗಳ ಕ್ಷೇತ್ರದ ಸಮಸ್ಯೆಯಾಗಿರುವ ಕಾರಣ ಸಮಸ್ಯೆ ಬಗೆಹರಿಸಲು ಜಿಲ್ಲಾ ಮಂತ್ರಿಗಳು ವಿಶೇಷ ಗಮನಹರಿಸಬೇಕು ನಿರ್ಲಕ್ಷ್ಯ ಮಾಡಿದರೆ ರೈತರ ಗಂಭೀರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇನ್ನು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2023- 24 ನೇ ಸಾಲಿಗೆ ಕಬ್ಬಿನ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚುರಿಯಾಗಿ ದರ ನೀಡಲು ಒಪ್ಪಿ ರೈತರಿಂದ ಕಬ್ಬು ಖರೀದಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಕಬ್ಬು ದರದ ಬಗ್ಗೆ ಮಾಹಿತಿ ನೀಡಿದ ಅವರು, ಬೆಳಗಾವಿ ಜಿಲ್ಲೆಯ ಶಿರಗುಪ್ಪಿ ಶುಗರ್ ಲಿಮಿಟೆಡ್ ಕಟಾವು ಸಾಗಾಣಿಕೆ ವೆಚ್ಚ ಹೊರತುಪಡಿಸಿ ಪ್ರತಿ ಟನ್‌ಗೆ 3025 ರೂಪಾಯಿ ನಿಗದಿ ಮಾಡಿದೆ.

ಅದರಂತೆ ರೇಣುಕಾ ಶುಗರ್ ಲಿಮಿಟೆಡ್ ಬುರ್ಲಟ್ಟಿ ಕಟಾವು ಸಾಗಾಣಿಕೆ ಹೊರತು ಪಡಿಸಿ ಟನಗೆ 3000 ರೂ. ಹರ್ಷ ಶುಗರ್ಸ್ ಲಿಮಿಟೆಡ್ ಬೆಳಗಾವಿ ಕಟಾವು ಸಾಗಾಣಿಕೆ ಹೊರತುಪಡಿಸಿ 3000 ರೂ. ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಅಥಣಿ
ಕಬ್ಬು ಕಟಾವು ಸಾಗಾಣಿಕೆ ಹೊರತುಪಡಿಸಿ 3000 ರೂ. ರೇಣುಕಾ ಶುಗರ್ ಲಿಮಿಟೆಡ್ ರಾಯಭಾಗ ಕಟಾವು ಸಾಗಾಣಿಕೆ ವೆಚ್ಚ ಹೊರತುಪಡಿಸಿ 3000 ರೂ. ಉಗರ್ ಶುಗರ್ ಲಿಮಿಟೆಡ್ ಬೆಳಗಾವಿ ಜಿಲ್ಲೆ ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಹೊರತು ಪಡಿಸಿ 3000 ರೂ.

ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಬಾಗಲಕೋಟೆ ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಹೊರತುಪಡಿಸಿ 3000 ರೂ. ಸಮೀರ್ವಾಡಿ ಸಕ್ಕರೆ ಕಾರ್ಖಾನೆ ಬಾಗಲಕೋಟೆ ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಹೊರತುಪಡಿಸಿ 3000 ರೂ. ನಿರಾಣಿ ಶುಗರ್ಸ್ ಲಿಮಿಟೆಡ್ ಮುಧೋಳ್, ಶ್ರೀ ಪ್ರಿಯ ಕಾರ್ಖಾನೆ ಕಟಾವು ಕೂಲಿ ಸಾಗಾಣಿಕೆ ವೆಚ್ಚ ಹೊರತುಪಡಿಸಿ 3000 ರೂ.ಗಳನ್ನು ನಿಗದಿ ಪಡಿಸಿವೆ.

ಇನ್ನು ಅದಕ್ಕೂ ಕಡಿಮೆ ಅಂದರೆ, ನಿರಾಣಿ ಶುಗರ್ಸ್ ಎಂಆರ್‌ಎನ್ ಕಾರ್ಖಾನೆ ಕಟಾವ್ ಕೂಲಿ ಸಾಗಾಣಿಕೆ ವೆಚ್ಚ ಹೊರತುಪಡಿಸಿ 2900 ರೂ. ಬಸವೇಶ್ವರ ಸಕ್ಕರೆ ಕಾರ್ಖಾನೆ, ಬಿಜಾಪುರ ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಹೊರತುಪಡಿಸಿ 2900 ರೂ. ಕೆಪಿಆರ್ ಸಕ್ಕರೆ ಕಾರ್ಖಾನೆ ಬಿಜಾಪುರ ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಹೊರತುಪಡಿಸಿ 2650 ರೂ. ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಹಳಿಯಾಳ ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಹೊರತುಪಡಿಸಿ 2810 ರೂ.ಗಳನ್ನು ನಿಗದಿ ಮಾಡಿವೆ ಎಂದು ಈ ರೀತಿ ವ್ಯತ್ಯಾಸ ಏಕೆ ಮಾಡಬೇಕು ಎಂದು ಕಿಡಿಕಾರಿದರು.

ಹಾವೇರಿ ಜಿಲ್ಲೆಯ ಸಂಗೂರ್ ಸಕ್ಕರೆ ಕಾರ್ಖಾನೆ ಕಟಾವು ಕೂಲಿ ಸಾಗಾಣಿಕೆ ವೆಚ್ಚ ಸೇರಿ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚುವರಿ 130 ರೂ. ನಿಡುತ್ತಿದ್ದಾರೆ. ಗದಗ್ ಜಿಲ್ಲೆಯ ವಿಜಯನಗರ ಸಕ್ಕರೆ ಕಾರ್ಖಾನೆ ಎಫ್ ಆರ್ ಪಿ ದರಕ್ಕಿಂತ ಹೆಚ್ಚುವರಿ 200 ನಿಡುತ್ತಿದ್ದಾರೆ, ಕಟಾವು ಕೂಲಿ ಸಾಗಾಣಿಕೆ ವೆಚ್ಚ ಹೊರತುಪಡಿಸಿ 2410 ಕೊಡುತ್ತಿದ್ದಾರೆ. ಗುಲ್ಬರ್ಗ ಜಿಲ್ಲೆಯ ರೇಣುಕಾ ಸಕ್ಕರೆ ಕಾರ್ಖಾನೆ ಕಟಾವು ಕೂಲಿ ಸಾಗಾಣಿಕೆ ವೆಚ್ಚ ಹೊರತುಪಡಿಸಿ ಟನ್ ಗೆ 2650 ರೂ. ಕೊಡುತ್ತಿದ್ದಾರೆ. ಇದು ರೈತರ ಮೇಲೆ ಚಪ್ಪಡಿ ಎಳೆಯುವ ಕೆಲಸವಲ್ಲವೇ ಎಂದು ಆಕ್ರೋಶ ಹೊರಹಾಕಿದರು.

ಈ ನಡುಡವೆ ಕಳೆದ ಒಂದು ವರ್ಷ ಡಿಸೆಂಬರ್‌ನಲ್ಲಿ ವಿಪಕ್ಷದ ನಾಯಕನಾಗಿದ್ದಾಗ ಈ ಸಿಎಂ ಬೆಳಗಾವಿ ಅಧಿವೇಶನದಲ್ಲಿ ಕಬ್ಬು ಬೆಳೆಗಾರರಿಗೆ ಉತ್ಪಾದನಾ ವೆಚ್ಚವು ಸಿಗುತ್ತಿಲ್ಲ ಟನ್‌ಗೆ 4500 ರೂ.ಗಳನ್ನು ನಿಗದಿ ಮಾಡಬೇಕು ಎಂದು ಸುದೀರ್ಘ ಭಾಷಣ ಮಾಡಿದ ಸಿದ್ದರಾಮಯ್ಯನವರು ಈಗ ಯಾಕೆ ಮರೆತು ಸುಮ್ಮನಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರುಣ ಕ್ಷೇತ್ರದಲ್ಲಿರುವ ಮೈಸೂರು ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಟಾವು ಕೂಲಿ ಸಾಗಾಣಿಕೆ ವೆಚ್ಚ ಕಳೆದು 2200 ರೂ. ಕೊಡುತ್ತಿದ್ದಾರೆ. ಈ ಕಾರ್ಖಾನೆಗೆ ವರುಣ ಕ್ಷೇತ್ರದ ಸುಮಾರು 25 ಸಾವಿರ ರೈತರು ಕಬ್ಬು ಸರಬರಾಜು ಮಾಡುತ್ತಿದ್ದಾರೆ. ಜಿಲ್ಲಾ ಮಂತ್ರಿ ಎಚ್.ಸಿ. ಮಹದೇವಪ್ಪ ಕ್ಷೇತ್ರದಲ್ಲಿ 25000 ಕಬ್ಬು ಬೆಳೆಗಾರರು ಈ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುತ್ತಿದ್ದಾರೆ ಇಂತಹ ರೈತರಿಗೆ ಕ್ಷೇತ್ರದ ಜನಪ್ರತಿನಿಧಿಯಾಗಿ ನ್ಯಾಯ ಕೊಡಿಸುವ ಬಗ್ಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ನಾವು ರೈತರ ಪರ ಎಂದು ಹೇಳುವ ಇವರಿಗೆ ರೈತರು ಮಾಡಿರುವ ಅನ್ಯಾಯವಾದರೂ ಏನು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ 220 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತ ಕುಳಿತರೆ ರೈತರ ಕಷ್ಟ ನಿವಾರಣೆಯಾಗುವುದಿಲ್ಲ ರಾಜಕೀಯ ಬದಿಗೊತ್ತಿ ರೈತರ ಸಂಕಷ್ಟಕ್ಕೆ ಪರಿಹಾರ ನೀಡಿ. ರಾಜ್ಯದ ರೈತರು ಬರಗಾಲದ ಸಂಕಷ್ಟದಲ್ಲಿದ್ದು ಸಾಲ ತೆಗೆದುಕೊಂಡು ಬೆಳೆ ಬೆಳೆಯಲು ಹೂಡಿಕೆ ಮಾಡಿರುವ ಕಾರಣ ಯಾವುದೇ ಬ್ಯಾಂಕಿನ ಸಹಕಾರ ಸಂಘದ ಸಾಲ ವಾಪಸ್ ತುಂಬಲು ಸಾಧ್ಯವಿಲ್ಲ. ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ಹೊಸ ಸಾಲ ಕೊಟ್ಟರೆ ಮಾತ್ರ ಆಹಾರ ಉತ್ಪಾದನೆ ಸಾಧ್ಯ ಎಂಬುದನ್ನು ಅರಿಯಲಿ, ಕೈಗಾರಿಕೆ ಉದ್ದಿಮೆಗಳಿಗೆ ಸಂಕಷ್ಟ ಕಾಲದಲ್ಲಿ ಸಾಲ ಮನ್ನಾ ಮಾಡಿ ಸಂಕಷ್ಟ ನೆರವು ನೀಡುವ ರೀತಿಯಲ್ಲಿ ರೈತರಿಗೂ ನೆರವು ನೀಡಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆರೆಹುಂಡಿ ರಾಜಣ್ಣ, ಲಕ್ಷ್ಮಿಪುರ ವೆಂಕಟೇಶ್, ನೀಲಕಂಠಪ್ಪ , ವಾಜಮಂಗಲ ಮಹಾದೇವ ಇದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ