NEWSದೇಶ-ವಿದೇಶನಮ್ಮರಾಜ್ಯ

ವರುಣನ ಅಬ್ಬರಕ್ಕೆ ದೇಶದ ಉತ್ತರ ತತ್ತರ- 21 ಮಂದಿ ಸಾವು, ತೇಲುತ್ತಿವೆ ಕಾರುಗಳು

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ದೇಶದ ಉತ್ತರ ಭಾಗದಲ್ಲಿ ವರುಣನ ಅಬ್ಬರಕ್ಕೆ 10 ರಾಜ್ಯಗಳು ನಲುಗಿ ಹೋಗಿವೆ. ಇನ್ನು ದಕ್ಷಿಣ ಭಾಗದ ರಾಜ್ಯಗಳು ಮಳೆ ಇಲ್ಲದೆ ತತ್ತರಿಸಿಹೋಗುತ್ತಿವೆ. ಈ ರೀತಿ ಮಳೆಯ ಜೂಟಾಟಕ್ಕೆ ಒಂದು ಕಡೆ ಅತೀವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿಯಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ದಕ್ಷಿಣ ರಾಜ್ಯಗಳು ಮಳೆಯ ಕೊರತೆ ಎದುರಿಸುತ್ತಿವೆ. ಆದರೆ, ಉತ್ತರ ರಾಜ್ಯಗಳಲ್ಲಿ ಮಳೆ.. ಪ್ರವಾಹ.. ಸಾವು.. ನೋವು.. ಆತಂಕ.. ಯಾವಾಗ ಏನ್ ಆಗುತ್ತೋ ಎಂಬ ಭಯದಲ್ಲೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ವರುಣನ ರುದ್ರ ನರ್ತನಕ್ಕೆ ಹಿಮಾಚಲ ಪ್ರದೇಶ, ಉತ್ತರಾಖಂಡ್​, ಹರಿಯಾಣ, ದೆಹಲಿ, ಪಂಜಾಬ್, ರಾಜಸ್ಥಾನ, ಪಂಜಾಬ್ ಸೇರಿದಂತೆ 10 ರಾಜ್ಯಗಳು ಭಾರೀ ಪ್ರವಾಹಕ್ಕೆ ತುತ್ತಾಗಿವೆ. ಡ್ಯಾಂಗಳು ತುಂಬಿವೆ. ನದಿಗಳು ಉಕ್ಕಿ ಹರಿಯುತ್ತಿವೆ. ಬೆಟ್ಟ ಗುಡ್ಡಗಳು. ಪರ್ವತಗಳು ಕುಸಿತಾ ಇವೆ. ವಾಹಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ನದಿಗಳು ಅಕ್ಕ ಪಕ್ಕದ ಭೂಮಿಗಳನ್ನೆಲ್ಲ ಆವರಿಸಿಕೊಳ್ಳುತ್ತಿವೆ.

ಮಳೆಗೆ ದೆಹಲಿ ತತ್ತರ: ರಾಷ್ಟ್ರದ ರಾಜಧಾನಿ ದೆಹಲಿ ಅಕ್ಷರಶಃ ಮುಳುಗಿದೆ. ಯಮುನಾ ನದಿಯ ಪ್ರವಾಹ ಮತ್ತಷ್ಟು ಹೆಚ್ಚಿದ್ದು, ಅನೇಕ ಮನೆಗಳು ಹಾಗೂ ರಸ್ತೆಗಳು ಜಲಾವೃತವಾಗಿವೆ. ಇದರಿಂದ ರಕ್ಷಣೆ ಹಾಗೂ ಪರಿಹಾರ ಚಟುವಟಿಕೆಗಳಿಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡುವುದನ್ನು ಮುಂದುವರಿಸಲಾಗಿದೆ. ಇದರಿಂದ ಬೆಳಗ್ಗ 8 ಗಂಟೆ ಸುಮಾರಿಗೆ ಯಮುನಾ ನದಿ ನೀರಿನ ಮಟ್ಟ 208.48 ಮೀಟರ್‌ಗೆ ತಲುಪಿದೆ. ಈಗಿನ ನೀರಿನ ಮಟ್ಟವು ಅಪಾಯದ ಗುರುತಿಗಿಂತ ಮೂರು ಮೀಟರ್ ಅಧಿಕವಿದೆ.

ಜುಲೈ 16ರವರೆಗೆ ಶಾಲಾ-ಕಾಲೇಜು ರಜೆ: ಕಳೆದ ಕೆಲವು ದಿನಗಳಿಂದ ಉತ್ತರ ಭಾರತದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ವರುಣನ ಆರ್ಭಟ ತಗ್ಗಿದ್ದರೂ, ಪ್ರವಾಹದ ಮಟ್ಟ ಮಾತ್ರ ಏರುತ್ತಲೇ ಇದೆ.

ಯಮುನಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನಲೆ ಶಾಲಾ-ಕಾಲೇಜುಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಜುಲೈ 16ರವರೆಗೂ ರಜೆ ಘೋಷಿಸಲಾಗಿದೆ. ಲೆಫ್ಟಿನೆಂಟ್​ ಗವರ್ನರ್​ ಹಾಗೂ ದೆಹಲಿ ವಿಪತ್ತು ನಿರ್ವಹಣಾ ಮಂಡಳಿ ಸಭೆ ಬಳಿಕ ನಿರ್ಧಾರವನ್ನು ಪ್ರಕಟಿಸಲಾಗಿದ್ದು, ಖಾಸಗಿ ಕಂಪನಿ ಉದ್ಯೋಗಿಗಳಿಗೆ ಜುಲೈ 16ರವರೆಗೂ ವರ್ಕ್ ಫ್ರಮ್​ ಹೋಮ್​ ಮಾಡುವಂತೆ ಸೂಚಿಸಲಾಗಿದೆ.

ಯಮುನಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟವು ನವದೆಹಲಿಯ ಕೆಂಪು ಕೋಟೆಯ ಗಡಿ ಗೋಡೆಯನ್ನು ಮುಟ್ಟಿದೆ. ದೆಹಲಿಯ ಹಲವಾರು ಪ್ರದೇಶಗಳು ತತ್ತರಿಸುತ್ತಿವೆ. ನಗರದಲ್ಲಿ ನದಿ ನೀರು ಪ್ರವೇಶಿಸಿದ ಕಾರಣ ಟ್ರಕ್‌ಗಳು, ಬಸ್ ನೀರಿನಲ್ಲಿ ಮುಳುಗಿವೆ. ಕಾಶ್ಮೀರ ಗೇಟ್ ಬಳಿಯೂ ನೀರು ತುಂಬಿದೆ. ನದಿಯ ನೀರಿನಲ್ಲಿ ದೆಹಲಿ ಮುಳುಗಿರುವುದಕ್ಕೆ ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ಟ್ವೀಟ್​ ಅಸ್ತ್ರ ಪ್ರಯೋಗಿಸಿದ್ದಾರೆ.

ಪಂಜಾಬ್, ಹರಿಯಾಣದಲ್ಲೂ ರುದ್ರ ನರ್ತನ: ಪಂಜಾಬ್‌ನಲ್ಲಿ ಭಾರೀ ಮಳೆಯಿಂದ 14 ಜಿಲ್ಲೆಗಳು ಹಾನಿಗೊಳಗಾಗಿದ್ದರೆ, ಹರಿಯಾಣದ 7 ಜಿಲ್ಲೆಗಳು ಸಹ ತೀವ್ರ ಹಾನಿಗೊಳಗಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈವರೆಗೆ ಪಂಜಾಬ್‌ನಲ್ಲಿ 11, ಹರಿಯಾಣದಿಂದ 10 ಜನರು ಸೇರಿ ಒಟ್ಟು 21 ಮಂದಿ ಸಾವನ್ನಪ್ಪಿದ್ದಾರೆ. ಹವಾಮಾನ ಸುಧಾರಿಸಿದ ಹಿನ್ನೆಲೆಯಲ್ಲಿ ಎರಡು ರಾಜ್ಯದ ಸರ್ಕಾರಗಳು ಸಂತ್ರಸ್ಥರಿಗೆ ಪರಿಹಾರ ನೀಡಿವೆ.

ಉತ್ತರ ಪ್ರದೇಶದಲ್ಲಿ ಮಳೆ ಅಬ್ಬರಕ್ಕೆ 14ಕ್ಕೂ ಹೆಚ್ಚು ಸಾವು: ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ. ಹಲವು ನದಿಗಳು ಅಪಾಯದ ಗಡಿ ದಾಟಿದೆ. ಮಳೆಯ ಅಬ್ಬರಕ್ಕೆ ಸಿಲುಕಿ ಸುಮಾರು 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆಯೂ ಉತ್ತರ ಪ್ರದೇಶ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬುದೌನ್ ಜಿಲ್ಲೆಯ ಕಛ್ಲಾ ಸೇತುವೆಯಲ್ಲಿ ಗಂಗಾನದಿ ಅಪಾಯ ಮಟ್ಟ ತಲುಪಿದೆ ಎಂದು ಕೇಂದ್ರ ಜಲ ಆಯೋಗದ ತಿಳಿಸಿದೆ.

ಧೋ ಅಂತ ಸುರಿದಿದ್ದ ಮಳೆರಾಯ ಹಿಮಾಚಲ ಪ್ರದೇಶದಲ್ಲಿ ಕೊಂಚ ಗ್ಯಾಪ್​ ಕೊಟ್ಟಿದ್ದಾನೆ. ಉತ್ತರ ಭಾರತದ ಜನರಿಗೆ ಮಳೆ ಅಂತ ಹೇಳಿದ್ರೆ ಸಾಕು ಬೆಚ್ಚಿ ಬಿದ್ದು ನಿದ್ರೆಯಿಂದ ಎದ್ದು ಯಾವಾಗ ಏನ್ ಆಗುತ್ತೋ ಅನ್ನೋ ಭಯದಲ್ಲೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು