NEWSವಿಜ್ಞಾನ-ತಂತ್ರಜ್ಞಾನ

ವಿಶೇಷ ಮಕ್ಕಳ ಹಾರೈಕೆಯಲ್ಲಿ ಕಾಳಜಿ ವಹಿಸಿ : ಡಾ.ಎಂ.ಪುಷ್ಪಾವತಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಫೇಸ್‌ಬುಕ್ ಪೇಜ್ ಲೈವ್‌ನಲ್ಲಿ ಸಲಹೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ನಿಷೇಧಾಜ್ಞೆ ಜಾರಿಮಾಡಲಾಗಿದ್ದು, ಈ 21 ದಿನಗಳಲ್ಲಿ ವಿಶೇಷ ಮಕ್ಕಳನ್ನು ನಿಭಾಯಿಸಲು ಪೋಷಕರು ಸಹಕರಿಸಬೇಕೆಂದು ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ತಿಳಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಫೇಸ್‌ಬುಕ್ ಪೇಜ್ ಲೈವ್‌ನಲ್ಲಿ ಮಾತನಾಡಿದ ಅವರು, ಮನೆಯಲ್ಲಿಯೇ ವಿಶೇಷ ಮಕ್ಕಳ ಹಾರೈಕೆಯನ್ನು ಪೋಷಕರು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ದೇಶಾದ್ಯಂತ ನಿಷೇಧಾಜ್ಞೆ ಜಾರಿಮಾಡಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲೇ ಇರುವುದು ಅನಿವಾರ್ಯವಾಗಿದೆ. ಈ ಸಮಯದಲ್ಲಿ ವಿಶೇಷ ಮಕ್ಕಳನ್ನು ಮನೆಯಲ್ಲಿ ನಿಭಾಯಿಸುವುದು ಪೋಷಕರ ಕರ್ತವ್ಯ. ಮನೆಯಲ್ಲಿನ ಎಲ್ಲಾ ಸದಸ್ಯರು ವಿಶೇಷ ಮಗುವಿನೊಂದಿಗೆ ಕಾಲ ಕಳೆಯುವುದು ಮುಖ್ಯ ಎಂದರು.

ಮಕ್ಕಳಿಗೆ ಭಾಷೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮನೆಯಲ್ಲಿನ ಕೆಲವು ವಸ್ತುಗಳನ್ನು ಉಪಯೋಗಿಸಿಕೊಳ್ಳಬೇಕು. ಟೂತ್‌ಬ್ರಶ್‌ಗೆ ಪೇಸ್ಟ್ ಹಾಕುವುದರಿಂದ ಹಿಡಿದು ರಾತ್ರಿ ಮಲಗುವಾಗ ಮಾಡಬೇಕಾದ ಸಣ್ಣಪುಟ್ಟ ಕೆಲಸಗಳನ್ನು ನಿಧಾನವಾಗಿ ಹೇಳಿಕೊಡುವುದು ಅಗತ್ಯವಾಗಿರುತ್ತದೆ. ಪ್ರತಿಯೊಂದು ವಿಷಯವನ್ನು ಸ್ಪಷ್ಟವಾಗಿ ನಿಧಾನವಾಗಿ ಮಗುವಿಗೆ ಅರ್ಥಮಾಡಿಸಲು ಮನೆಯ ಸದಸ್ಯರು ಸಹಕರಿಸಿಬೇಕು ಎಂದು ಹೇಳಿದರು.

ಮಕ್ಕಳಿಗೆ ಕೇವಲ ಮೊಬೈಲ್ ಅಥವಾ ಟಿ.ವಿ ಮುಂದೆ ಕೂರಿಸುವುದು ಸೂಕ್ತವಲ್ಲ. ಬದಲಿಗೆ ಅವರಿಗೆ ಭೌದ್ಧಿಕ ಬೆಳವಣಿಗೆ ಆಗುವಂತಹ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಎಲ್ಲವನ್ನು ತಾಳ್ಮೆಯಿಂದ ಅರ್ಥಮಾಡಿಸುವ ಪ್ರಯತ್ನ ಮಾಡಬೇಕು. ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಆಟಿಕೆಯಾಗಿ ನೀಡಿ ಅದಕ್ಕೆ ವಿನೂತನ ರೂಪ ನೀಡುವಂತೆ ಹೇಳಬೇಕು. ಇದರಿಂದ ಅವರ ಮೆದುಳು ಚುರುಕುಗೊಳ್ಳುತ್ತದೆ ಎಂದು ಸಲಹೆ ನೀಡಿದರು.

ಎಲ್ಲರಿಗೂ ರಜೆ ಇರುವ ಹಿನ್ನೆಲೆ ಸದಸ್ಯರೆಲ್ಲಾ ಮನೆಯಲ್ಲಿಯೇ ಇರುವುದರಿಂದ ತಾಯಿಗೆ ಅಡಿಗೆ, ಮನೆ ಕೆಲಸ ಹೀಗೆ ಹಲವು ಕೆಲಸಗಳು ಇರುತ್ತದೆ. ಇದರ ಮಧ್ಯೆ ತನ್ನ ಮಗುವನ್ನು ನಿಗಾ ವಹಿಸಿ ನೋಡಿಕೊಳ್ಳುವುದು ಕಷ್ಟವಾಗಿರುತ್ತದೆ. ಹೀಗಾಗಿ  ವಿಶೇಷ ಮಗುವನ್ನು ನಿಭಾಯಿಸುವುದರಲ್ಲಿ ತಂದೆ ಪಾತ್ರ ಅತೀ ಮುಖ್ಯವಾಗಿರುತ್ತದೆ. ಸಾಕಷ್ಟು ಸಮಯ ಇರುವುದರಿಂದ ತಂದೆಯೇ ಮಗುವಿನೊಂದಿಗೆ ಸದಾಕಾಲ ಇದ್ದು, ಪ್ರತಿಯೊಂದು ವಸ್ತು ಅಥವಾ ದಿನನಿತ್ಯದ ಸಣ್ಣಸಣ್ಣ ಕೆಲಸವನ್ನು ಆಗಾಗ್ಗೆ ಹೇಳುತ್ತಾ ಪ್ರಾಯೋಗಿಕವಾಗಿ ಕಲಿಸುವಂತೆ ಹೇಳಿದರು.

ಒಂದುವೇಳೆ ವಿಶೇಷ ಮಕ್ಕಳನ್ನು ನಿಭಾಯಿಸುವಲ್ಲಿ ಕಷ್ಟವಾಗುತ್ತಿದ್ದಲ್ಲಿ ವ್ಯಾಟ್ಸ್ಆಪ್ ಮೂಲಕ ಸಂಪರ್ಕಿಸಿ ಸಲಹೆ ಪಡೆಯಿರಿ. ಯಾವ ರೀತಿಯಲ್ಲಿ ಮಕ್ಕಳನ್ನು ಸಮಾಧಾನ ಪಡಿಸಬಹುದೆಂದು ಕೆಲವು ಮಾಹಿತಿಯನ್ನು ವಿವರವಾಗಿ ನೀಡುವುದಾಗಿ ತಿಳಿಸಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ