VIJAYAPATHA.IN > ವಿಜಯಪಥ > NEWS > Crime > ಆಸ್ತಿ ವಿಚಾರಕ್ಕೆ ಮೂವರು ಸ್ನೇಹಿತರ ಜತೆ ಸೇರಿ ಅತ್ತಿಗೆಯನ್ನೇ ಕೊಂದ ಪಾಪಿ ಮೈದುನ
ಆಸ್ತಿ ವಿಚಾರಕ್ಕೆ ಮೂವರು ಸ್ನೇಹಿತರ ಜತೆ ಸೇರಿ ಅತ್ತಿಗೆಯನ್ನೇ ಕೊಂದ ಪಾಪಿ ಮೈದುನ
DevaDecember 22, 2023
ಕೋಲಾರ: ಆಸ್ತಿ ವಿಚಾರಕ್ಕೆ ಆರಂಭವಾದ ಗಲಾಟೆ ಅತ್ತಿಗೆಗೆ ಇರಿಯುವ ಮೂಲಕ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೊತ್ತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿದ್ದ ಮೂರು ಎಕರೆ ಜಮೀನಿಗಾಗಿ ಅಣ್ಣ ಮುರುಳಿ ಹಾಗೂ ತಮ್ಮ ಚಲಪತಿ ಮಧ್ಯೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಅದು ತಾರಕಕ್ಕೇರಿದ್ದು, ಮಧ್ಯೆ ಬರುತ್ತಿದ್ದ ಅತ್ತಿಗೆಯನ್ನೇ ಮೈದುನ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಮನೆಯಲ್ಲಿದ್ದ ಮುರುಳಿ ಪತ್ನಿ ತೇಜಸ್ವಿನಿಯನ್ನು ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಮೈದುನ ಚಲಪತಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಇರಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ತೇಜಸ್ವಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆಗೈದ ಪಾಪಿಗಳು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಬೇತಮಂಗಲ ಪೊಲೀಸರು ಪರಿಶೀಲನೆ ನಡೆಸಿ ಹತ್ಯೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
Related
Deva