CrimeNEWSನಮ್ಮಜಿಲ್ಲೆ

ಕಬ್ಬು ಬೆಂಕಿಗಾಹುತಿಯಾದ ನೋವಿನಲ್ಲಿದ್ದ ರೈತನಿಂದ ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು 400 ರೂ. ಪಡೆದಿದ್ದ ASI ಅಮಾನತು

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ತಾನು ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದ್ದ ನೋವಿನಲ್ಲಿದ್ದ ಬಡಪಾಯಿ ರೈತನಿಂದ ಬೀದರ್​ನ ಎಎಸ್​ಐ ಒಬ್ಬ 1000 ರೂಪಾಯಿ ಲಂಚಕ್ಕೆ ಕೈ ಚಾಚಿ ಈಗ ಅಮಾನತು ಶಿಕ್ಷಗೆ ಒಳಗಾಗಿದ್ದಾನೆ.

ಭ್ರಷ್ಟ ಈ ಪೊಲೀಸನ ಬಗ್ಗೆ ಲಂಚಾವತಾರವನ್ನು ಕಾತರಿಪಡಿಸಿಕೊಂಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಲಂಚಬಾಕ ಎಎಸ್​ಐ ಶೌರಾಜ್‌ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಬೀದರ್​ನಲ್ಲಿ ಅಸಹಾಯಕ ರೈತನೆದುರು ಚಿಲ್ಲರೆ ಕಾಸಿಗೆ ಈ ಪೊಲೀಸಪ್ಪ ಕೈಚಾಚಿದ್ದ. ಕಬ್ಬು ಸುಟ್ಟು ಕರಕಲಾಗಿದ್ದ ಜಮೀನಿನ ಪಂಚನಾಮೆಗೆ ಬಂದಿದ್ದ ಎಎಸ್‌ಐ ಶೌರಾಜ್, ಈ ಹೀನ ಕೃತ್ಯಕ್ಕೆ ಇಳಿದಿದ್ದ. ಜಿಲ್ಲೆಯ ಬೇಲೂರು ಗ್ರಾಮದ ರೈತನಿಂದ ಮಾನವೀಯತೆಯೇ ಇಲ್ಲದೇ ಎಎಸ್‌ಐ ಶೌರಾಜ್, ಹಣ ವಸೂಲಿ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಒಂದು ಸಾವಿರ ರೂಪಾಯಿಗೆ ರೈತನ ಬಳಿ ಬೇಡಿಕೆ ಇಟ್ಟಿದ್ದ ಹುಲಸೂರು ಠಾಣೆಯ ASI ಶೌರಾಜ್ ಕಡೆಗೂ 400 ರೂಪಾಯಿ ಪಡೆದೇ ತೀರಿದ್ರು. ಅನ್ನದಾತನ ಬಳಿ ಚಿಲ್ಲರೆ ಹಣಕ್ಕೆ ಕೈ ಚಾಚಿದ ಈತನ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು, ಆ ವರದಿ ಮಂದ ಕೆಲವೇ ಗಂಟೆಗಳಲ್ಲಿ ಎಎಸ್​ಐಯನ್ನು ಆಮಾನತು ಮಾಡಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಬರದ ಛಾಯೆ ಆವರಿಸಿಕೊಂಡು ಮೊದಲೇ ಅನ್ನದಾತರು ಸಂಕಷ್ಟದಲ್ಲಿದ್ದರೆ. ಹಾಕಿರುವ ಫಸಲು ಕೈ ಸೇರದೆ ಬಳಲಿಹೊತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮಾನವೀಯತೆ ಬಿಟ್ಟು ಇಂತಹ ಪರಿಸ್ಥಿತಿಯಲ್ಲಿ ರೈತರಿಂದ ಹಣ ಪೀಕುವ ಕೆಲಸವನ್ನು ಭ್ರಷ್ಟ ಅಧಿಕಾರಿಗಳು ಮಾಡುತ್ತಿರುವುದು ಭಾರಿ ನೋವಿನ ಸಂಘತಿ. ಇನ್ನಾದರೂ ಇದನ್ನು ಬಿಟ್ಟು ನೇಗಿಲ ಯೋಗಿಯ ನೆರವಿಗೆ ಬರಬೇಕಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ