CrimeNEWSಸಿನಿಪಥ

ಕಾರು ಅಪಘಾತ: ತ್ರಿನಯನಿ ಸೀರಿಯಲ್‌ನ ತಿಲೊತ್ತಮ ಮಂಡ್ಯದ ಕಿರುತೆರೆ ನಟಿ ಪವಿತ್ರಾ ಇನ್ನಿಲ್ಲ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ತೆಲುಗಿನ ತ್ರಿನಯನಿ ಸೀರಿಯಲ್‌ ಮೂಲಕವೇ ಹೆಚ್ಚು ಹೆಸರು ಮಾಡಿದ್ದ, ಕಿರುತೆರೆಯ ಖ್ಯಾತ ನಟಿ ಪವಿತ್ರಾ ಜಯರಾಮ್‌ (45) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಪವಿತ್ರಾ ಅವರು ಭಾನುವಾರ ಬೆಳಗ್ಗೆ ಆಂಧ್ರ ಪ್ರದೇಶದ ಮೆಹಬೂಬ ನಗರದ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೆಲುಗಿನ ತ್ರಿನಯಿನಿ ಸೀರಿಯಲ್‌ನಿಂದಲೇ ಹೆಚ್ಚು ಜನಪ್ರಿಯತೆ ಪಡೆದಿದ್ದ ಪವಿತ್ರಾ, ಮೂಲತಃ ಕರ್ನಾಟಕದ ಮಂಡ್ಯ ಜಿಲ್ಲೆ, ತಾಲೂಕಿನ ಹನಕೆರೆಯವರು.

ಹುಟ್ಟೂರಿಗೆ ಆಗಮಿಸುತ್ತಿದ್ದಾಗ ಘಟನೆ: ಆಂಧ್ರದ ಮಹೆಬೂಬ್‌ನಗರ ಜಿಲ್ಲೆಯ ಭೂತ್‌ಪುರ ಪುರಸಭೆ ವ್ಯಾಪ್ತಿಯ ಶೇರಿಪಲ್ಲಿ (ಬಿ) ಗ್ರಾಮದ ಬಳಿ ಪವಿತ್ರಾ ಚಲಿಸುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿಹೊಡೆದ ಬಳಿಕ ಬಳಿಕ ಹೈದರಾಬಾದ್‌ನಿಂದ ವನಪರ್ತಿಗೆ ಹೋಗುತ್ತಿದ್ದ ಬಸ್ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಪವಿತ್ರಾ ಜಯರಾಮ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ಹನಕೆರೆಯವರಾದ ಪವಿತ್ರಾ ಜಯರಾಮ್‌ ಜಯರಾಮ್‌ ಸ್ವ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಪವಿತ್ರಾ ಜಯರಾಮ್ ಅವರ ಸೋದರ ಸಂಬಂಧಿ ಅಪೇಕ್ಷಾ, ಚಾಲಕ ಶ್ರೀಕಾಂತ್ ಮತ್ತು ಸಹ ನಟ ಚಂದ್ರಕಾಂತ್ ಅವರಿಗೂ ಗಂಭೀರ ಗಾಯಗಳಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದರು.

ಕನ್ನಡ ಸೀರಿಯಲ್‌ಗಳಲ್ಲಿ ನಟನೆ: ಪವಿತ್ರಾ ಜಯರಾಮ್‌ ತೆಲುಗಿನಿ ತ್ರಿನಯನಿ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿ ಕನ್ನಡಕ್ಕೆ ಡಬ್‌ ಆಗಿ ಜೀ ಕನ್ನಡದಲ್ಲೂ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್‌ಗೂ ಮುನ್ನ ಕನ್ನಡದ ಕೆಲವು ಧಾರಾವಾಹಿಗಳಲ್ಲೂ ಪವಿತ್ರ ಬಣ್ಣ ಹಚ್ಚಿದ್ದರು. ಜೋಕಾಲಿ, ರೋಬೋ ಫ್ಯಾಮಿಲಿ, ರಾಧಾ ರಮಣ, ನೀಲಿ ಸೀರಿಯಲ್‌ನಲ್ಲೂ ನಟಿಸಿದ್ದರು. ಇದೀಗ ದುರಂತ ಅಪಘಾತದಲ್ಲಿ ನಟಿ ಕಣ್ಮುಚ್ಚಿದ್ದಾರೆ.

ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿರುವ ಕಿರುತೆರೆ ನಟಿ ಪವಿತ್ರ ಜಯರಾಮ್ ಅವರ ಅಂತಿಮ ದರ್ಶನ ನಡೆಯುತ್ತಿದೆ. ಉಮ್ಮಡಹಳ್ಳಿಯಲ್ಲಿ ಪವಿತ್ರ ಜಯರಾಂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ ಕಿರುತೆರೆ ನಟ ಚಂದುಗೌಡ ಅವರು ಅಗಲಿದ ನಟಿಯ ಅಂತಿಮ ದರ್ಶನ ಪಡೆದುಕೊಂಡರು.

ಚಂದು ಗೌಡ ರಸ್ತೆ ಅಪಘಾತದ ವೇಳೆ ಪವಿತ್ರಾ ಅವರ ಜತೆ ಇದ್ದರು. ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಪವಿತ್ರ ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಎಲ್ಲರೊಡನೆ ಉತ್ತಮ‌ ಒಡನಾಟ ಹೊಂದಿದ್ದರು. ಮೊನ್ನೆಯಷ್ಟೆ ಮದರ್ಸ್ ಡೇ‌ಗೆ ಕಾರ್ಯಕ್ರಮ ಮಾಡಲಾಗಿತ್ತು. ಈಗ ಈ ಘಟನೆ ಜರುಗಿರೋದು ನೋವು ತಂದಿದೆ. ಅಪಘಾತದಲ್ಲಿ‌ ಯಾರದ್ದು ತಪ್ಪು ಎಂದು ಹೇಳೋಕೆ‌ ಆಗಲ್ಲ. ಘಟನೆ ನಡೆದು ಹೋಗಿದೆ. ಪವಿತ್ರ ಅವರ ಆತ್ಮಕ್ಕೆ ಶಾಂತಿ‌ ದೊರಕಲಿ ಎನ್ನುತ್ತ ಭಾವುಕರಾದರು.

ಆಂಬುಲೆನ್ಸ್ ಸಿಗದಿರೋದೇ ಪವಿತ್ರಾ ಸಾವಿಗೆ ಕಾರಣ: ಅಪಘಾತದ ಬಗ್ಗೆ ವಿವರಿಸಿದ ಸ್ನೇಹಿತ ಚಂದು, ಪವಿತ್ರಾ ಜತೆ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದೇವು. ನಾವು ಹೈದ್ರಾಬಾದ್‌ನಿಂದ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸುತ್ತಿದ್ದೇವು. ಪ್ರಯಾಣದ ವೇಳೆ ಭಾರೀ ಮಳೆ ಸುರಿಯುತ್ತಿತ್ತು. ಮಳೆಯಿಂದ ಮೂರು ಗಂಟೆಗಳ ಕಾಲ ಟ್ರಾಫಿಕ್ ಉಂಟಾಗಿತ್ತು‌. ಇದರಿಂದ ಸುಸ್ತು ಆಗಿತ್ತು, ನಿದ್ರೆಯೂ ಬರುತ್ತಿತ್ತು.

ನಾವೂ ಕಾರಿನಲ್ಲಿ ನಾಲ್ಕು ಮಂದಿ ಇದ್ವಿ. ಪವಿತ್ರಾ ಅವರ ಸೋದರಿಯ ಮಗಳು, ನಾನು, ಪವಿತ್ರಾ, ಡ್ರೈವರ್ ಕಾರಿನಲ್ಲಿದ್ದೇವು. ನಮ್ಮ ಕಾರಿನ ಬಳಿ ವೇಗವಾಗಿ ಬಸ್ ಬಂತು‌. ಈ ವೇಳೆ ಎದರುಗಡೆಯಿಂದ ಬಂದ ಸ್ಕಾರ್ಪಿಯೋಗೆ ಕಾರು ಡಿಕ್ಕಿ ಆಯ್ತು‌. ಬ್ರೇಕ್ ಹಾಕಿದ ಹಿನ್ನೆಲೆ ಬಲಗಡೆಗೆ ಕಾರು ವಾಲಿತು. ಇದರಿಂದ ಎದುರುಗಡೆ ಇದ್ದ ಬಸ್​ಗೆ ನಮ್ಮ ಕಾರು ಡಿಕ್ಕಿ ಹೊಡೆದಿದೆ. ನನಗೆ ಕೈ ಪೆಟ್ಟಾಗಿತ್ತು, ಪವಿತ್ರಾ ಬಿಟ್ಟು ಬೇರೆಯಾರಿಗೂ ಏಟಾಗಿರಲಿಲ್ಲ.

ಆ ವೇಳೆ ಪವಿತ್ರಾ ಉಸಿರುಗಟ್ಟಿ ಏನಾಯ್ತು, ಏನಾಯ್ತು ಎಂದು ಕೇಳಿದ್ರು. ಆಗಲೇ ಪವಿತ್ರಾ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ರು‌. ಆಗ ನಮಗೆ ಯಾವುದೇ ಆಂಬುಲೆನ್ಸ್ ಸಿಗಲಿಲ್ಲ. ಆಂಬುಲೆನ್ಸ್ ಸಿಗದಿರೋದೇ ಪವಿತ್ರಾ ಸಾವಿಗೆ ಕಾರಣ. 20 ನಿಮಿಷ ತಡವಾಗಿ ಆಂಬುಲೆನ್ಸ್ ಬಂತು. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ವಿ. ಬ್ರೈನ್ ಸ್ಟ್ರೋಕ್ ಆಗಿರುವುದಾಗಿ ವೈದ್ಯರು ಹೇಳಿದರು ಎಂದು ತೆಲುಗು ನಟ ಚಂದು ತಿಳಿಸಿದ್ದಾರೆ.

ಪವಿತ್ರಾ ಜಯರಾಮ್‌ ಅವರ ಅಪಘಾತದ ಸುದ್ದಿ ತಿಳಿದ ಸೀರಿಯಲ್‌ ಟೀಮ್‌ ಕಂಬನಿ ಮಿಡಿಯುತ್ತಿದ್ದರೆ, ಅವರ ಅಪಾರ ಅಭಿಮಾನಿ ಬಳಗ ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಫೋಟೋ ಶೇರ್‌ ಮಾಡಿ ಸಂತಾಪ ಸೂಚಿಸುತ್ತಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ