ಜಾಲಪ್ಪ ಓದಿದ ಶಾಲೆಯಲ್ಲೇ ಕುಡಿಯುವ ನೀರಿಗೆ ಪರದಾಟ- ಕೇಳುವವರೆ ಇಲ್ಲ ಸರ್ಕಾರಿ ಶಾಲೆ ಮಕ್ಕಳ ಸಮಸ್ಯೆ
ತೂಬಗೆರೆ: ಸರ್ಕಾರಿ ಶಾಲೆ ಅಂದರೆ ಕೀಳಾಗಿ ನೋಡುವ ಮನೋಭವನೆ ಈ ಹಿಂದಿನಿಂದಲೂ ಇದೆ. ಅದೇರೀತಿ ಜಾಲಪ್ಪ ನವರಿಂದ ಹಿಡಿದು ಅನೇಕ ಘಟಾನುಘಟಿಗಳು, ಗಣ್ಯವ್ಯಕ್ತಿಗಳು ಕಲಿತ ಶಾಲೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ.
ಹೌದು ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಸರ್ಕಾರಿ ಪ್ರಾಥಮಿಕ ಈಗ ಮೂಲಭೂತ ಸೌಲಭ್ಯದಿಂದ ವಂಚಿತವಾಗಿರುವ ಶಾಲೆಯಾಗಿದೆ. ಈ ಶಾಲೆಯಲ್ಲಿ 170 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಸುಮಾರು 20 ದಿನಗಳಿಂದ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲವಾಗಿದೆ.
ಈ ಹಿಂದೆ ತೂಬಗೆರೆ ಸರ್ಕರಿ ಶಾಲೆ ಎಂದರೆ ಪರಿಸರ ಸ್ವಚ್ಛತೆಗಳಿಂದ ಕೂಡಿದ ಶಾಲೆ ಎಂಬ ಹೆಮ್ಮೆಯಿತ್ತು. ಆದರೆ ಇಂದು ಮಕ್ಕಳಿಗ ಕುಡಿಯುವ ನೀರನ್ನು ಒದಗಿಸಲಾಗದ ಶಾಲೆ ಜತೆಗೆ ಕೊಠಡಿಗಳಲ್ಲಿ ಹಾವುಗಳು ಸೇರಿಕೊಂಡಿವೆ
ಪಂಚಾಯಿತಿಯವರನ್ನು ಕೇಳಿದರೆ ಬೋರ್ವೆಲ್ ವೈರ್ ಕಟ್ಟಾಗಿದ್ದು ಅದನ್ನು ಸರಿಪಡಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಾರೆ, ಏನೇಹೇಳಿ ಜನಪ್ರತಿನಿಧಿಗಳಾಗಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಲಿ ಮಕ್ಕಳ ಜತೆ ಚೆಲ್ಲಾಟ ಆಡುತ್ತಿದ್ದಾರೆ.
ಇನ್ನು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಬಳಿಕ ಏನಾಗಿದೆ ನೋಡೋಣ ಎಂದು ಉದಾಸೀನ ಮಾತುಗಳು ಹೇಳುತ್ತಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸುಮಾರು 15 ದಿನಗಳಿಂದ ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿಲ್ಲ, ವಿದ್ಯಾರ್ಥಿಗಳಿಗೆ ನೀರಿಲ್ಲ ಎಂದು ಪಂಚಾಯಿತಿಗೆ ಹಲವುಬಾರಿ ಹೇಳಿದರೂ ಸಹ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ.
l ಹನುಮಂತರಾಜು ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ
ಸರ್ಕಾರಿ ಸೇವೆಗಳೆಂದರೆ ಸಾಕು ಅಧಿಕಾರಿಗಳು ನಿರ್ಲಕ್ಷ ತೋರುತ್ತಾರೆ. ಸರ್ಕಾರಿ ವಿದ್ಯಾರ್ಥಿಗಳಿಗೆ ಕುಡಿಯ ನೀರಿಲ್ಲದೆ ಪರದಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸಬೂಬು ಹೇಳಿ ಜಾರಿಕೊಳ್ಳುತ್ತಾರೆ. ಇನ್ನಾದರೂ ಇದನ್ನು ಬಿಟ್ಟು ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡಬೇಕು.
l ಮುನಿರಾಜ್ ದಲಿತ ಮುಖಂಡ