NEWSಸಂಸ್ಕೃತಿ

ಜು.14ರಂದು ಧಾರವಾಡದಲ್ಲಿ ಪಂ.ಪಂಚಾಕ್ಷರ ಗವಾಯಿಗಳ ಪುಣ್ಯಸ್ಮರಣೆ ‘ಗುರು ಗುಣಗಾನ’

ವಿಜಯಪಥ ಸಮಗ್ರ ಸುದ್ದಿ

ಧಾರವಾಡ: ಉತ್ತರದ ಸಂಗೀತವನ್ನು ದಕ್ಷಿಣಕ್ಕೆ ತಂದ ಪ್ರಮುಖರಲ್ಲಿ ಒಬ್ಬರಾದ ಮತ್ತು ತಮ್ಮ ಶಿಷ್ಯ ಪರಂಪರೆಯ ಮೂಲಕ ಧಾರವಾಡಕ್ಕೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ತವರು ಎನ್ನುವ ಖ್ಯಾತಿ ತಂದುಕೊಡುವಲ್ಲಿ ತಮ್ಮದೆಯಾದ ಕೊಡುಗೆಯನ್ನು ನೀಡಿದ, ಗಾನಯೋಗಿ ಪಂಚಾಕ್ಷರ ಗವಾಯಿಗಳವರ ಪುಣ್ಯಸ್ಮರಣೆಯನ್ನು ಜುಲೈ 14ರಂದು ಹಮ್ಮಿಕೊಳ್ಳಲಾಗಿದೆ.

ಈ ಪುಣ್ಯಸ್ಮರಣೆ ಅಂಗವಾಗಿ ‘ಗುರು ಗುಣಗಾನ’ ಕವಿಗೋಷ್ಠಿ, ಕಾವ್ಯಗಾಯನ ಮತ್ತು ನೃತ್ಯ ನಮನವನ್ನು ಒಳಗೊಂಡ ಸಮಾರಂಭವನ್ನು ಇದೇ ಜುಲೂ 14ರ ಸಂಜೆ 4ಗಂಟೆಗೆ ಧಾರವಾಡದ ರಂಗಾಯಣದಲ್ಲಿ ಗದುಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದೆ.

ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕರಾದ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಗದಗ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮೃಣಾಲ ಜೋಶಿ ಅಧ್ಯಕ್ಷರು, ಸಂಸ್ಕೃತಿ ಶಿಶು ಮಂದಿರ, ಧಾರವಾಡ, ಪ್ರಕಾಶ ಬಾಳಿಕಾಯಿ ವ್ಯವಸ್ಥಾಪಕರು, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ ಡಾ. ಎ. ಎಲ್ ದೇಸಾಯಿ, ಸಹಾಯಕ ಉಪನ್ಯಾಸಕರು ಕ.ವಿ.ವಿ. ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯ, ಧಾರವಾಡ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಡಾ. ಪಂ. ಪು. ಸೇವಾ ಸಮಿತಿಯ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಡಾ. ಸುಮಾ ಬಸವರಾಜ ಹಡಪದ, ಹಳಿಯಾಳ ಸೇವಾ ಸಮಿತಿಯ ಮಹಿಳಾ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಹೊಸಪೇಟೆಯ ಶ್ರೀಮತಿ ದೇವಿಕಾ ಜೋಗಿ, ಸಮಿತಿಯ, ಕಲಘಟಗಿ ತಾಲೂಕಾ ಘಟಕದ ಅದ್ಯಕ್ಷರಾದ ಡಾ. ಸುರೇಶ ಕಳಸಣ್ಣವರ, ಹಾವೇರಿ ತಾಲೂಕಾ ಘಟಕ, ಕಾರ್ಯದರ್ಶಿ ಶಶಿಕಲಾ ಅಕ್ಕಿ ಉಪಸ್ಥಿತರಿರುವರು.

ಸಭಾ ಕಾರ್ಯಕ್ರಮಮದ ನಂತರ, ಧಾರವಾಡದ ಶ್ರೀಗುರು ಪುಟ್ಟರಾಜ ಸಂಗೀತ ಶಾಲೆ, ವೀರಶೈವ ಜಾಗೃತಿ ಮಹಿಳಾ ಸಮಿತಿ, ‘ಮಾಸ್ಟರ್’ ಸಾತ್ವಿಕ್ ಜಿ. ಮಹಾಮನೆ ಇವರುಗಳು ಸಂಗೀತ ನಮನ ಸಲ್ಲಿಸುವರು. ಹುಬ್ಬಳಿಯ ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್, ಧಾರವಾಡದ ರತಿಕಾ ನೃತ್ಯ ನಿಕೇತನ ಮತ್ತು ಉಪಾಧ್ಯ ನೃತ್ಯ ವಿಹಾರ, ತಾಳಿಕೊಟೆಯ ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ, ಮುಂಡರಗಿಯ ನಾಟ್ಯಬಿಂದು ಡ್ಯಾನ್ಸ್ ಅಕಾಡೆಮಿ, ಸಂಸ್ಥೆಯ ಶಿಷ್ಯರು ನೃತ್ಯ ನಮನ ಸಲ್ಲಿಸಲಿದ್ದಾರೆ.

ಪೂಜ್ಯಗುರು ಪಂಚಾಕ್ಷರ ಗವಾಯಿಗಳವರ ಕುರಿತು ಬರೆದ ಕಲೆಗೆ ಕಣ್ಣಿತ್ತ ಪೂಜ್ಯರು ಕವಿಗೋಷ್ಠಿಯಲ್ಲಿ ಮೃತ್ಯುಂಜಯ ಹಿರೇಮಠ, ಮಾಗಡಿ ಪ್ರೊ ಜಯಶ್ರೀ ಹಿರೇಮಠ, ಧಾರವಾಡ ಪದ್ಮಾ ಜೆ. ಕಬಾಡಿ, ಗದಗ ವೀರಯ್ಯ ಸಂಕಿನಮಠ, ಹಾವೇರಿ, ಬಸವರಾಜ ಹಡಪದ, ಹಳಿಯಾಳ ವಿಮಲಾ ಮಲ್ಲಪ್ಪ, ಹುಬ್ಬಳ್ಳಿ.

ಸಂಧ್ಯಾ ದೀಕ್ಷಿತ, ಹುಬ್ಬಳ್ಳಿ ಸುಲೋಚನ ಮಾಲಿಪಾಟೀಲ್, ಧಾರವಾಡ ರೇಖಾ ಜೋಶಿ, ಧಾರವಾಡ ವೀರೇಶರಡ್ಡಿ ಟಿ. ಕಾಮರಡ್ಡಿ, ಕನಕವಾಡ ದಾನಮ್ಮ ವೀ ಅಂಗಡಿ, ಬೆಲ್ಲದ ಬಾಗೇವಾಡಿ ಮಧುಮತಿ ಸಣಕಲ್, ಧಾರವಾಡ ಸೀತಾ ಛಪ್ಪರ, ಧಾರವಾಡ ಶಾರದಾ ಕೆಲಸಂಗದ, ಧಾರವಾಡ ಶಾಂತಕ್ಕ ಹೊಂಬಳ, ಧಾರವಾಡ ಇಂದಿರಾ ಮೋಟೆಬೆನ್ನೂರ, ಬೆಳಗಾವಿ ಇವರುಗಳು ತಮ್ಮ ಕವನದ ಮೂಲಕ ಗುರು ಗುಣಗಾನ ಮಾಡಲಿದ್ದಾರೆ.

ಸುಧಾ ಕಬ್ಬೂರ ಅವರು ಕಾರ್ಯಕ್ರಮದ ನಿರೂಪಣೆ ಮಾಡುವರು ಎಂದು ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ಡಾ. ಸುಮಾ ಹಡಪದ, ಹಳಿಯಾಳ ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ