NEWSಉದ್ಯೋಗನಮ್ಮಜಿಲ್ಲೆನಮ್ಮರಾಜ್ಯ

ಟ್ಯಾಕ್ಸಿ, ಗೂಡ್ಸ್, ಪ್ಯಾಸೆಂಜರ್ ಆಟೋರಿಕ್ಷಾ ಖರೀದಿ ಮಾಡಲು 3 ಲಕ್ಷ ರೂ. ಸಹಾಯಧನಕ್ಕೆ ಅರ್ಜಿ ಸಲ್ಲಿಸಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಟ್ಯಾಕ್ಸಿ, ಗೂಡ್ಸ್, ಪ್ಯಾಸೆಂಜರ್ ಆಟೋರಿಕ್ಷಾ ಖರೀದಿಸಬೇಕು. ಈ ಮೂಲಕ ನಾವು ಸ್ವಾವಲಂಬಿ ಜೀವನ ಸಾಗಿಸಬೇಕು ಅಂತ ಯೋಚನೆ ಮಾಡುತ್ತಿದ್ದರೆ ತಡ ಮಾಡದೆ ಸರ್ಕಾರ ಕಲ್ಪಿಸಿರುವ ಈ ಯೋಜನೆಯ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಿರಿ.

ಹೌದು! ಸರ್ಕಾರ ನಿಮಗಾಗಿ ಒಂದು ಹೊಸ ಯೋಜನೆಯನ್ನು ತಂದಿದೆ. ಈ ಯೋಜನೆ ಅಡಿಯಲ್ಲಿ ನೀವು ಸರ್ಕಾರದಿಂದ ಮೂರು ಲಕ್ಷ ರೂಪಾಯಿವರೆಗೆ ಸಹಾಯಧನವನ್ನು ಪಡೆದು ನಿಮ್ಮ ಆಸೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.

ಈ ಯೋಜನೆ ಹೆಸರೇನು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಕೆ ಹೇಗೆ?: ಯೋಜನೆಯ ಹೆಸರು ಸ್ವಾವಲಂಬಿ ಸಾರಥಿ ಯೋಜನೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಸೆಪ್ಟಂಬರ್ 25 ಕೊನೆ ದಿನಾಂಕವಾಗಿದೆ. ಮೊದಲು ನೀವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ವೆಬ್ ಸೈಟಿಗೆ ಭೇಟಿ ನೀಡಿ. https://kmdc.karnataka.gov.in/.

ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://kmdconline.karnataka.gov.in/Portal/login ಇನ್ನು ಯೋಜನೆಯ ಸಂಪೂರ್ಣ ಮಾಹಿತಿಗಾಗಿ ನಾವು ಕೆಳಗೆ ಅಧಿಕೃತವಾಗಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಈ ಯೋಜನೆಯ ಸಂಪೂರ್ಣ ಮಾಹಿತಿಯು ನಿಮಗೆ ಕೇವಲ ಒಂದು ನಿಮಿಷದಲ್ಲಿ ದೊರೆಯಲಿದದೆ. https://kmdc.karnataka.gov.in/23/subsidy-/kn

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: 1.ಆನ್‍ಲೈನ್ ಅರ್ಜಿ. 2.ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ. 3.ಜಾತಿ, ಆದಾಯ ಪ್ರಮಾಣ ಪತ್ರ. 4.ಆಧಾರ್ ಕಾರ್ಡ್ ಪ್ರತಿ. 5.ವಾಹನ ಚಾಲನ ಪರವಾನಿಗೆ ಪ್ರಮಾಣ ಪತ್ರ. 6.ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಣ ಪತ್ರ. 7.ಈ ಯೋಜನೆಯಡಿ ಪಡೆದ ವಾಹನವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ

ಅರ್ಜಿ ಸಲ್ಲಿಸಲು ಮಾರ್ಗಸೂಚಿಗಳು: 1.ಈ ಯೋಜನೆಯನ್ನು ನಿಗಮದ ವತಿಯಿಂದ ರಾಷ್ಟ್ರೀಕೃತ/ಷೆಡ್ಯೂಲ್ಡ್ ಬ್ಯಾಂಕ್‍ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ. 2.ಬ್ಯಾಂಕುಗಳಿಂದ ಸಾಲ ಮಂಜೂರಾತಿ ನೀಡಿದ/ಪಡೆದ ಫಲಾನುಭವಿಗಳಿಗೆ ಆಟೋರಿಕ್ಷ / ಗೂಡ್ಸ್ ವಾಹನ /ಟ್ಯಾಕ್ಸಿ ಖರೀದಿಸಲು ವಾಹನದ ಮೌಲ್ಯದ ಶೇ.50 ರಷ್ಟು ಸಹಾಯಧನ ಗರಿಷ್ಠ ರೂ.3.00 ಲಕ್ಷವನ್ನು ನೀಡಲಾಗುವುದು.

3.ಮಹಿಳೆಯರಿಗೆ ಆದ್ಯತೆಯನ್ನು ನೀಡಲಾಗುವುದು. 4.ಈ ಯೋಜನೆಯಡಿ ಖರೀದಿಸಲಾಗಿರುವ ವಾಹನವನ್ನು ಫಲಾನುಭವಿಗಳು ಸಾಲದ ಅವಧಿಯಲ್ಲಿ ಇತರರಿಗೆ ಪರಭಾರೆ ಮಾಡಬಾರದು. 5.ಫಲಾನುಭವಿಯು ಈ ವಾಹನದಿಂದ ಲಭ್ಯವಾಗುವ ವಾರ್ಷಿಕ ಆದಾಯದ ವಿವರ, ಖರೀದಿ ಮಾಡಿದ ತಕ್ಷಣ ತೆರಿಗೆಯನ್ನು ಪಾವತಿಸಿರುವ ಮತ್ತು ವಿಮೆಯನ್ನು ಪಾವತಿಸಿರುವ ಬಗ್ಗೆ ವಿವರಗಳನ್ನು ದಾಖಲೆಗಳ ಪ್ರತಿಯೊಂದಿಗೆ ಜಿಲ್ಲಾಕಛೇರಿಗೆ ಮಾಹಿತಿಯನ್ನು ಸಲ್ಲಿಸುವುದು.

6.ಯಾವುದಾದರೂ ಮೊದಲು ಕ್ಲೇಮ್ ಮಾಡಿದಲ್ಲಿ ಖರೀದಿಸಿದ ವಿವರವನ್ನು ನಿಗಮಕ್ಕೆ ನೀಡತಕ್ಕದ್ದು. 7.ನಿಗಮದ ಸಹಾಯಧನದಿಂದ ಪಡೆದ ವಾಹನ ಮೇಲೆ “ಕೆ ಎಂ ಡಿ ಸಿ ವತಿಯಿಂದ ಸಹಾಯಧನ” ಎಂದು ನಮೂದಿಸತಕ್ಕದ್ದು. 8.ನಿಗಮದಿಂದ ಪಡೆದ ವಾಹನದ ಜೊತೆಯಲ್ಲಿ ಫಲಾನುಭವಿ ಭಾವಚಿತ್ರವನ್ನು ಕಡ್ಡಾಯವಾಗಿ ಜಿಲ್ಲಾ ವ್ಯವಸ್ಥಾಪಕರು ದೃಡೀಕರಿಸಿ ಕಡತದಲ್ಲಿ ಇಡತಕ್ಕದ್ದು.

ಅರ್ಜಿ ಸಲ್ಲಿಸಲು ಅರ್ಹತೆಗಳು: (ಅ) ಅರ್ಜಿದಾರರು ರಾಜ್ಯದ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು. (ಆ) ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು. (ಇ) ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷಗಳು. (ಈ) ಎಲ್ಲ ಮೂಲಗಳಿಂದ ಕೌಟುಂಬಿಕ ವಾರ್ಷಿಕ ಆದಾಯ ರೂ.4.50 ಲಕ್ಷ ದೊಳಗಿರಬೇಕು.

(ಉ) ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ರಾಜ್ಯ/ ಕೇಂದ್ರ/ ಸಾರ್ವಜನಿಕ ವಲಯದ ಘಟಕ ಸರ್ಕಾರದ ಉದ್ಯೋಗಿಯಾಗಿರಬಾರದು. (ಊ)ಅರ್ಜಿದಾರರು ಆರ್.ಟಿ.ಒ.ಯಿಂದ ನೀಡಲ್ಪಟ್ಟ ಸಂಬಂಧಪಟ್ಟ ವಾಹನ ಚಾಲನಾ ಪರವಾಗಿಯನ್ನು ಹೊಂದಿರಬೇಕು. (ಋ)ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರಬಾರದು. (ಒ) ಅರ್ಜಿದಾರರು ಕೆಎಂಡಿಸಿಯಲ್ಲಿ ಸುಸ್ತಿದಾರಯಾಗಿರಬಾರದು.

ಈ ಎಲ್ಲ ಅರ್ಹತೆ ನಿಮಗಿದ್ದರೆ ಇದೇ ಸೆ.25ರೊಗಳಗೆ ಅರ್ಜಿಸಲ್ಲಿಸುವ ಮೂಲಕ ವಾಹನಗಳನ್ನು ಖರೀದಿಸಲು ಸರ್ಕಾರದ ಸೌಲಭ್ಯಪಡೆದು ಸ್ವಾವಲಂಬಿ ಜೀವನಕ್ಕೆ ಮುಂದಾಗಿ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು