NEWSನಮ್ಮಜಿಲ್ಲೆನಮ್ಮರಾಜ್ಯ

ನಮ್ಮ ಸರ್ಕಾರ ಒಳ ಮೀಸಲಾತಿ ಅನುಷ್ಠಾನ ಮಾಡಿಯೇ ತೀರುತ್ತದೆ: ಮುನಿಯಪ್ಪ ಭರವಸೆ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಪಕ್ಷಾತೀತವಾದ ಬೆಂಬಲವಿರುವುದರಿಂದ ನಮ್ಮ ಸರ್ಕಾರ  ಪರಿಶಿಷ್ಟರ  ಒಳ ಮೀಸಲಾತಿಯನ್ನು ಅನುಷ್ಠಾನ ಮಾಡಿಯೇ ತೀರುತ್ತದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದ್ದಾರೆ.

ಬೆಳಗಾವಿಯ ಮಾಲಿನಿ ಗ್ರೌಂಡ್ ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಹಂತ ಹಂತವಾಗಿ ವರದಿ ಪಡೆದು ಕಾನೂನು ತೊಡಕು ಅಗದೇ ಇರುವ ಆಗೆ ನೋಡಿ ಕೂಡಲೇ ಜಾರಿಗೊಳಿಸುತ್ತೇವೆ ಎಂದರು..

ಒಳಮೀಸಲಾತಿ ಜಾರಿಗೊಳಿಸಲು ಹಕ್ಕೋತ್ತಾಯ ಸಮಾವೇಶದಲ್ಲಿ ಪಕ್ಷಾತೀತವಾಗಿ ಭಾಗವಹಿಸಿರುವ ಎಲ್ಲ ಸಮುದಾಯದ ನಾಯಕರು, ಸ್ವಾಮೀಜಿಗಳು ಹಾಗೂ ಬಾಂಧವರೇ ನಾನು 40 ವರ್ಷಗಳಿಂದ ಈ ಹೋರಾಟಗಳನ್ನು ಮಾಡುತ್ತಿದ್ದು ನಮಗೆ ಒಂದು ಸಂತಸದ ತೀರ್ಪು ಸುಪ್ರೀಂಕೋರ್ಟ್ ನಿಂದ ಬಂದಿದ್ದು ಉಷಾ ಮೆಹ್ತಾ ಅವರ ವರದಿಯನ್ನು ಜಾರಿಗೊಳಿಸಲು ಯಾರು ಮುಂದಾಗಲಿಲ್ಲಾ 2014 ರಿಂದ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರವಿಲ್ಲದ ಕಾರಣ ಈ ಒಂದು ಮೀಸಲಾತಿಯ ಅನುಷ್ಠಾನ ವಾಗಲಿಲ್ಲಾ.

ನೊಂದು ಬೆಂದ ಸಮುದಾಯ ಯಾವ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಯಾಗಿಲ್ಲಾ ಸರ್ಕಾರಿ ನೌಕರಿ ಇರಬಹುದು , ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯ ವಾಗಿಯೂ ಅಭಿವೃದ್ಧಿ ಕಾಣದ ಸಮುದಾಯವೆಂದರೆ ಅದು ಈ ಮಾದಿಗ ಸಮುದಾಯ ನಮ್ಮ ಸರ್ಕಾರ ಈಗಾಗಲೇ ಹೈಕೋರ್ಟ್ ನ ನ್ಯಾಯಾಧೀಶ ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಏಕ ಸದಸ್ಯ ಪೀಠವನ್ನು ರಚಿಸಿ 3 ತಿಂಗಳಲ್ಲಿ ವರದಿಯನ್ನು ಪಡೆದು ಜಾರಿಗೊಳಿಸಲು ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹ ಈ ಒಳ ಮೀಸಲಾತಿ ಜಾರಿಗೊಳಿಸಲು ಬದ್ದರಾಗಿದ್ದು ಪಕ್ಷಾತೀತವಾಗಿ ಎಲ್ಲ ನಾಯಕರು ಬೆಂಬಲವನ್ನು ನೀಡಿದ್ದು ಆದಷ್ಟು ಬೇಗ ಜಾರಿಗೊಳಿಸುತ್ತೇವೆ ಎಂದರು.

ನಮ್ಮ ರಾಜ್ಯದ ಪರಿಶಿಷ್ಟಜಾತಿ ಯಲ್ಲಿ ಸುಮಾರು 101 ಉಪ ಜಾತಿಗಳಿದ್ದು ಆಂಧ್ರಪ್ರದೇಶದಲ್ಲಿ ಎಸ್ಸಿ ಸಮುದಾಯದಲ್ಲಿ 57 ಉಪ ಜಾತಿಗಳಿದ್ದು ಈ ಎಲ್ಲ ಉಪ ಜಾತಿಗಳಿಗೂ ಕಾನೂನಿ ಪ್ರಕಾರವೇ ಮೀಸಲಾತಿಯನ್ನು ನೀಡಬೇಕಾಗುತ್ತದೆ. ಯಾವ ಜಾತಿಯವರಿಗೂ ತೊಂದರೆಯಾಗದಂತೆ ಎಲ್ಲಾರಿಗೂ ಸಮ ಪಾಲು ಸಮಬಾಳು ಎಂಬ ವಾಖ್ಯದಂತೆ ಒಳ ಮೀಸಲಾತಿಯನ್ನು ನಮ್ಮ ಸರ್ಕಾರ ಅನುಷ್ಠಾನ ಮಾಡುತ್ತದೆ ಎಂದರು.

ಒಳಮೀಸಲಾತಿ ಕುರಿತು ಮೊದಲ ಮೂರು ಸಚಿವ ಸಂಪುಟದ ಸಭೆಯಲ್ಲಿಯೂ ಮಹದೇವಪ್ಪ ಅವರು ಇದರ ಜಾರಿಯ ಕುರಿತು ದ್ವನಿಗೂಡಿಸಿದ್ದಾರೆ. ಹಂತ ಹಂತವಾಗಿ ಕಾನೂನಿನ ತೊಡಕು ಆಗದಂತೆ ವರದಿ ಪಡೆದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಸದನದಲ್ಲಿ ಚರ್ಚಿಸಿ ಇದನ್ನು ಅನುಷ್ಠಾನ ಮಾಡಬೇಕಾಗುತ್ತದೆ.

ಈ ರೀತಿಯಾಗಿ ಹಂತ ಹಂತವಾಗಿ ಮಾಡಬೇಕಾಗುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ತಾವು ತಾಳ್ಮೆಯಿಂದ ಇರಬೇಕು ನಮ್ಮ ಸರ್ಕಾರ ಶತಾಯ ಗತಾಯ ಜಾರಿಗೊಳಿಸಲು ಬದ್ದವಾಗಿದೆ ಯಾವುದೇ ಹೋರಾಟಗಳ ಅಗತ್ಯವಿಲ್ಲಾ ತಾವು ಶಾಂತವಾಗಿರಿ ಎಂದರು.

ಈ ಸಂದರ್ಭದಲ್ಲಿ ಶ್ರೀ ಶ್ರೀ ಮಾದಾರ ಚನ್ನಯ್ಯಸ್ವಾಮೀಜಿ, ಆನಂದಮುನಿ‌ ಸ್ವಾಮೀಜಿ, ಸಚಿವರಾದ ಮಹದೇವಪ್ಪ, ಆರ್.ಬಿ.ತಿಮ್ಮಪುರ,ಸತೀಶ್ ಜಾರಕಿಹೋಳಿ,ವಿರೋಧ ಪಕ್ಷದ ನಾಯಕರಾದ ಆರ್ ಆಶೋಕ್,ಅರವಿಂದ್ ಬೆಲ್ಲದ್, ಸಂಸದ ಗೋವಿಂದ ಕಾರಜೋಳ,ಎ.ನಾರಾಯಣಸ್ವಾಮಿ ಹಾಗೂ ಶಾಸಕರು,ಸಮುದಾಯದ ಮುಖಂಡರು, ಉಪಸ್ಥಿತರಿದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ