NEWSಕೃಷಿದೇಶ-ವಿದೇಶನಮ್ಮರಾಜ್ಯ

ನ್ಯೂಡೆಲ್ಲಿ: ದಲೈವಾಲ ಪ್ರಾಣಕ್ಕೆ ಕುತ್ತು ಬಂದರೆ ದೇಶದ ರೈತರು ಕೇಂದ್ರ ಸರ್ಕಾರದ ಮರಣ ಶಾಸನ ಬರೆಯಬೇಕಾಗುತ್ತದೆ ಎಚ್ಚರ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಅವರ ಉಪವಾಸ ಸತ್ಯಾಗ್ರಹ 41ನೇ ದಿನವು ಮುಂದುವರಿದಿದೆ.

ಈ ಸಂಬಂಧ ಪಂಜಾಬ್ ಗಡಿಯ ಕನೋರಿ ಕಿಸಾನ್ ಮಹಾ ಪಂಚಾಯತ್‌ನಲ್ಲಿ ಭಾಗವಹಿಸಿ ಮಾತನಾಡಿ ದಕ್ಷಿಣ ಭಾರತ ರಾಜ್ಯಗಳು ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೆತರ) ಕರ್ನಾಟಕ ಸಂಚಾಲಕ ಕುರುಬೂರ್ ಶಾಂತಕುಮಾರ್, ದೇಶದ ರೈತರೆಲ್ಲ ನಾವೆಲ್ಲ ರೈತ ಮುಖಂಡ ದಲೈವಾಲ ಹೋರಾಟ ಬೆಂಬಲಿಸಲು ಬಂದಿದ್ದೇವೆ ಅವರ ಜೀವಕ್ಕೆ ಅಪಾಯವಾದರೆ ಸ್ವಾತಂತ್ರ್ಯ ಪೂರ್ವ ಸಿಪಾಯಿ ದಂಗೆ ಈಗ ದೇಶದಲ್ಲಿ ರೈತರ ದಂಗೆಯಾದಿತು ಎಂದು ಎಚ್ಚರಿಕೆ ಸಂದೇಶ ನೀಡುತ್ತಿದ್ದೇವೆ ಎಂದತು.

ದೇಶದಲ್ಲಿರುವ 70ರಷ್ಟು ಜನಸಂಖ್ಯೆಯ ರೈತ ಸಮುದಾಯದ ಬೇಡಿಕೆ ಎಂಎಸ್‌ಪಿ ಗ್ಯಾರಂಟಿ ಕಾನೂನು ಈಡೇರಿಸಲು ಸಾಧ್ಯವಿಲ್ಲವೆ. ಈ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಲೇಬೇಕು. ಕಾರಣ ದೇಶದಲ್ಲಿರುವ ಉದ್ಯಮಿಗಳು ಸಾಲ ಮನ್ನಾ ಮಾಡಿ ಎಂದು ಕೇಳಲೇ ಇಲ್ಲ ಆದರೂ ಸರ್ಕಾರ 14 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ.

ಇನ್ನು ದೇಶದಲ್ಲಿ ಯಾರೂ ಕೇಳದೆ ಇರುವ ಒಂದು ದೇಶ ಒಂದು ಚುನಾವಣೆ ಒಂದು ದೇಶ ಒಂದು ಪಡಿತರ ಕಾರ್ಡ್ ಇವೆಲ್ಲವನ್ನು ತರಾತುರಿಯಲ್ಲಿ ಜಾರಿಗೆ ತರುತ್ತಿದೆ. ಆದರೆ, ದೇಶದಲ್ಲಿರುವ ಶೇ.80ರಷ್ಟು ರೈತರು ವರ್ಷಗಟ್ಟಲೆ ಹೋರಾಟ ಮಾಡಿ ಕೇಳುವ ಎಂಎಸ್‌ಪಿ ಕಾನೂನು ಮಾಡಲು ಏನು ಕಷ್ಟ ಈ ಸರ್ಕಾರದ ಪ್ರಧಾನ ಮಂತ್ರಿಗಳಿಗೆ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಯವರು ಅಧಿಕಾರಕ್ಕೆ ಬಂದು ಹತ್ತು ವರ್ಷಗಳು ಮುಗಿದಿದೆ. ಅಧಿಕಾರಕ್ಕೆ ಬರುವ ಮೊದಲು ಹೇಳಿದಂತೆ ಸ್ವಾಮಿನಾಥನ್ ವರದಿಯನ್ನೂ ಈವರೆಗೂ ಜಾರಿ ಮಾಡಿಇಲ್ಲ. 2022ಕ್ಕೆ ರೈತರ ಆದಾಯ ದ್ವಿಗುಣ ಮಾಡಿಲ್ಲ. ಎಂಎಸ್‌ಪಿ ಗ್ಯಾರಂಟಿ ಕಾನೂನು ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ರೈತರ ಉತ್ಪನ್ನಗಳಿಗೆ ಜಿಎಸ್‌ಟಿ ಬರೆ ಹಾಕಿದರು ಎಂದು ಕಿಡಿಕಾರಿದರು.

ನಾವು ರೈತರು ಹೇಡಿಗಳಲ್ಲ. ಸ್ವಾತಂತ್ರ್ಯ ಚಳವಳಿಯ ಮಾದರಿಯ ಚಳವಳಿ ಪಂಜಾಬ್ ಹರಿಯಾಣ ರೈತರು ಮಾಡುತ್ತಿದ್ದಾರೆ. ಇಡೀ ದೇಶದ ರೈತರು ಅವರ ಜತೆ ಬೆಂಗಾವಲಾಗಿದ್ದೇವೆ. ದಲೈವಾಲ ಪ್ರಾಣಕ್ಕೆ ಕುತ್ತು ಬಂದರೆ ದೇಶದ ರೈತರು ಕೇಂದ್ರ ಸರ್ಕಾರದ ಮರಣ ಶಾಸನ ಬರೆಯಬೇಕಾಗುತ್ತದೆ ಎಚ್ಚರ ಎಂದು ಎಚ್ಚರಿಸಿದರು.

ಎಂಎಸ್‌ಪಿ ಗ್ಯಾರಂಟಿ ಕಾನೂನು ಜಾರಿಗಾಗಿ ದೇಶದ ರೈತರ ಹಿತಕ್ಕಾಗಿ ದಲೈವಾಲ ಕಳೆದ 41ದಿನದಿಂದ ಉಪವಾಸ ನಡೆಸುತ್ತಿದ್ದಾರೆ. ಈ ಸತ್ಯಾಗ್ರಹ ಬೆಂಬಲಿಸಿ ಕರ್ನಾಟಕದಲ್ಲಿ ನಿರಂತರವಾಗಿ ಹೋರಾಟ ಮುಂದುವರಿಯುತ್ತಿದೆ. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಮೇಣದಬತ್ತಿ ಉರಿಸಿ ಪ್ರತಿಭಟನೆ ಮಾಡಿದ್ದೇವೆ. ಕಳೆದ ಡಿ.31ರಂದು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪಂಜಿನ ಮೆರವಣಿಗೆ ಮಾಡಿದ್ದೇವೆ.

ಈಗ ಕರ್ನಾಟಕದ ರೈತರ ತಂಡ ಕನೋರಿ ಬಾರ್ಡರ್‌ಗೆ ಬಂದಿದ್ದೇವೆ. ಇನ್ನೂ ಸಾವಿರಾರು ರೈತರು ಇಲ್ಲಿಗೆ ಬರಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಎಚ್ಚರಿಸಿದರು 2 ಲಕ್ಷಕ್ಕೂ ಹೆಚ್ಚು ರೈತರು ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸಿದದಾರೆ. ಈ ಕೊರೆಯುವ ಚಳಿಯನ್ನು ಲೆಕ್ಕಿಸದೆ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

ಎರಡು ಮೂರು ಜಿಲ್ಲೆಗಳಲ್ಲಿ ರಸ್ತೆ ಬಂದಾಗಿತ್ತು ಸಮಾವೇಶಕ್ಕೆ ಆಗಮಿಸುತ್ತಿದ್ದ ಎರಡು ಬಸ್ಸುಗಳು ಭೀಕರ ಅಪಘಾತವಾಗಿ ಸಣ್ಣ ಪುಟ್ಟ ಗಾಯಗಳಾಗಿವೆ. ಕೆಲವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಮಾವೇಶದ ವೇದಿಕೆಗೆ ಉಪವಾಸದಲ್ಲಿ ಇರುವ ಜಗಜಿತ್ ಸಿಂಗ್ ದಲೈವಾಲ ಅವರನ್ನು ವೈದ್ಯರ ನಿಗ ವಹಿಸಿ ವೇದಿಕೆಗೆ ಕರೆತಂದರು ಅವರು ಎಲ್ಲರಿಗೂ ಕೈ ಮುಗಿದು ಮನವಿ ಮಾಡಿದರು ಮಾತನಾಡಲು ಸಾಧ್ಯವಾಗಲಿಲ್ಲ.

ಯಾವುದೇ ಪೋಲಿಸ್ ಬಂದುಬಸ್ತ್‌ ಇಲ್ಲದೆ ಶಾಂತಿಯುತವಾಗಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಭಾಗವಹಿಸಿದ ಬೇರೆ ಬೇರೆ ರಾಜ್ಯಗಳ ರೈತ ಮುಖಂಡರು ಮಾತನಾಡಿದರು ಪಂಜಾಬಿನ ಸುಖಜಿತ್ ಸಿಂಗ್ ಹರಿಯಾಣದ ಅಭಿಮನ್ಯು ಕೂಹರ್, ಲಕ್ವಿಂದರ್ ಸಿಂಗ್, ತಮಿಳುನಾಡಿನ ಪಿ.ಆರ್. ಪಾಂಡ್ಯನ್, ಬಿಹಾರದ ಅರುಣ್ ಸಿನ್ಹ, ಉತ್ತರ ಪ್ರದೇಶದ ಹರಪಾಲ ಬಿಲಾರಿ ಮುಂತಾದವರು ಮಾತನಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ