CrimeNEWSನಮ್ಮರಾಜ್ಯ

ಭೂಸ್ವಾಧೀನ ಪರಿಹಾರ ಪಡೆಯಲು ಸರ್ಕಾರ ಕೋರ್ಟ್‌ಅನ್ನೇ ವಂಚಿಸಿದ ವಕೀಲರ ವಿರುದ್ಧ FIR

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ವಕೀಲರು- ವಕೀಲರ ನಡುವಿನ ಜಟಪಟಿಯಿಂದ ಲಕ್ಷಾಂತರ ರೂಪಾಯಿಯ ಹರಗರಣವೊಂದು ಬಯಲಾಗಿರುವ ಘಟನೆ ಜಿಲ್ಲೆಯ ಮದ್ದೂರಿನಲ್ಲಿ ಜರುಗಿದೆ.

ನಾಲೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನಿನ ಲೆಕ್ಕಾಚಾರವನ್ನೇ ಬದಲಿಸಿ ನ್ಯಾಯಾಲಯ ಮತ್ತು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಲಕ್ಷಾಂತರ ರೂಪಾಯಿ ಕಬಳಿಸಲು ಯತ್ನಿಸಿದ ಪ್ರಕರಣ ಬಯಲಾಗಿದೆ. ಪ್ರಕರಣದಲ್ಲಿ ವಕೀಲರಾದ ಎ.ಎನ್. ರಮೇಶ್ ವಿದ್ಯಾ ಡಿ. ಸರ್ಕಾರಿ ವಕೀಲರಾದ ಎಲ್. ಉಮಾ ಹಾಗೂ ಭೂಮಿಯ ಒಡತಿ ಸಂಜೀವಮ್ಮ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮದ್ದೂರು ತಾಲೂಕಿನ ಹೆಬ್ಬೆರಳು ಮತ್ತು ಅಂಕನಾಥಪುರ ಗ್ರಾಮಗಳಿಗೆ ಸೇರಿದ ಕೆಲ ಜಮೀನು ಮುತ್ತುರಾಯನಕೆರೆ ಪೋಷಕ ನಾಲಾ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದರು.

ಅದರಂತ ಹೆಬ್ಬೆರಳು ಗ್ರಾಮಕ್ಕೆ ಸೇರಿದ ಮಂಚಯ್ಯ ಬಿನ್ ಮೋಟಯ್ಯ ಎಂಬವರ ಹೆಸರಿನಲ್ಲಿ ಭೂಸ್ವಾಧೀನವಾಗಿದ್ದ ಅರ್ಧ ಗುಂಟೆ ಜಮೀನನ್ನು ಸ್ವಾಈನ ಪಡಯಬಕಿತ್ತು. ಆದರ, ಈ ಅರ್ಧಗುಂಟೆ ಜಮೀನು ಬಲಿಗ ಎಂಟು ಗುಂಟೆ ಎಂದು ತಪ್ಪಾಗಿ ನಮೂದಿಸಿ, ದುರುದ್ದೇಶ ಪೂರಕವಾಗಿ ಹಣವನ್ನು ಲಪಟಾಯಿಸುವ ಸಂಚಿನ ರೂಪವಾಗಿ ಎಂಟು ಗುಂಟೆಗೆ 24,52,871 ಲಕ್ಷ ರೂಪಾಯಿ ಪರಿಹಾರವನ್ನು ಪಡೆದಿದ್ದು, ಸಂಜೀವಮ್ಮ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ನಂತರ ಈ ಜಾರಿ ಪ್ರಕರಣವನ್ನು ಲೋಕ ಅದಾಲತ್ ಮುಂದೆ ಮುಕ್ತಾಯಗೊಳಿಸಲು ಸಲ್ಲಿಸಿದ ಮೆಮೋ ಮೇರೆಗೆ ನ್ಯಾಯಾಲವುಪ್ರಕರಣವನ್ನು ಮುಕ್ತಾಯಗೊಳಿಸಿತ್ತು.

ಬಳಿಕ 2023ರ ಫೆಬ್ರುವರಿ 20ರಂದು ವಿಶೇಷ ಭೂಸ್ವಾಧೀನಾಧಿಕಾರಿಗಳು ನಿಗದಿತ ಪ್ರಮಾಣಕ್ಕಿಂತ ಸುಮಾರು 20 ಲಕ್ಷ ರೂ. ಹೆಚ್ಚುವರಿಯಾಗಿ ಪಾವತಿ ಮಾಡಿದ ತಪ್ಪಿನ ಅರಿವಾಗಿ ಸರ್ಕಾರಿ ವಕೀಲರಾದ ಎಲ್.ಉಮಾ ಅವರಿಗೆ ಪತ್ರ ಬರೆದು. ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಅದಾದ ಬಳಿಕ ನಾಲ್ಕೈದು ತಿಂಗಳ ಕಾಲ ಯಾವುದೇ ಕ್ರಮ ಕೈಗೊಳ್ಳದೆ ಇದ್ದರಿಂದ ಜಿಲ್ಲಾ ಸರ್ಕಾರಿ ವಕೀಲರಾದ ಎಲ್.ಉಮಾ ಅವರು ಮೇಲ್ಕಂಡ ಎಲ್ಲ ಪತ್ರಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ನ್ಯಾಯಾಲಯದ ಆದೇಶವನ್ನು ತಿದ್ದುಪಡಿ ಮಾಡಿಸಲು ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದರು ಎಂಬುದು ವಕೀಲ ಟಿ. ಬಾಲರಾಜು ಅವರ ಆರ್‌ಟಿಐ ಅರ್ಜಿಯಿಂದ ಬಯಲಾಗಿದೆ.

ಈ ಹಿನ್ನೆಲೆಯಲ್ಲಿ ವಕೀಲರಾದ ಎ.ಎನ್. ರಮೇಶ, ಡಿ.ವಿದ್ಯಾ ಜಮೀನಿನ ಮಾಲೀಕರಾದ ಮಂಚಯ್ಯ ಅವರ ನಿಧನದ ಬಳಿಕ ಅವರ ಪತ್ನಿ ಸಂಜೀವಮ್ಮ ಅಪರಾಧಿಕ ಒಳಸಂಚನ್ನು ರೂಪಿಸಿ ಕೊಡಬೇಕಾಗಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕಾಗಿ ಮೋಸದಿಂದ ಡಿಗ್ರಿ ಪಡೆದು ಜಾರಿ ಮಾಡಿಸಿದ ಹಾಗೂ ಸುಳ್ಳು ಎಂದು ಗೊತ್ತಿದ್ದು ಕೂಡ ಅಂತಹ ದಸ್ತಾವೇಜನ್ನು ಅಪ್ರಾಮಾಣಿಕವಾಗಿ ಬಳಸಿ ಹಿತಾಸಕ್ತಿ ಕಾಪಾಡಲು ಅಕ್ರಮ ಹಣ ಗಳಿಸುವ ಉದ್ದೇಶದಿಂದ ಸಾರ್ವಜನಿಕರ ತೆರಿಗೆ ಹಣವನ್ನು ನಷ್ಟ ಉಂಟು ಮಾಡಿದ್ದಲ್ಲದೆ ನ್ಯಾಯಾಲಯ ಹಾಗೂ ಸರ್ಕಾರವನ್ನು ವಂಚಿಸಿದ ಆರೋಪದಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆರ್‌ಟಿಐ ಕಾರ್ಯಕರ್ತ ಟಿ.ಬಾಲರಾಜು ಅವರು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಈ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ವಕೀಲರ ಜಟಾಪಟಿ ಹಗರಣ ಹೊರಕ್ಕೆ ಬಿತ್ತು: ಮಂಡ್ಯ ಜಿಲ್ಲೆಯಲ್ಲಿ ಭೂ ಸ್ವಾಧೀನ ಪ್ರಕರಣಗಳಲ್ಲಿ ಈ ರೀತಿಯ ಗೋಲ್‌ಮಾಲ್‌ಗಳು ಸಾಕಷ್ಟು ನಡೆದಿದ್ದು ಅವುಗಳು ಆಚೆಗೆ ಬಂದಿಲ್ಲ. ಈ ಪ್ರಕರಣ ಆಚೆಗೆ ಬರಲು ವಕೀಲರ ನಡುವಿನ ಜಟಾಪಟಿಯೆ ಕಾರಣ ಎನ್ನಲಾಗಿದೆ.

ಒಬ್ಬರ ಬಳಿಯಿಂದ ಮತ್ತೊಬ್ಬ ವಕೀಲರ ಬಳಿಗೆ ಪ್ರಕರಣ ಹೋದುದೆ ಈ ಪ್ರಕರಣ ಆಚೆಗೆ ಬರಲು ಕಾರಣವಾಗಿದೆ. ಸರಿಯಾದೊಂದು ತನಿಖೆ ನಡೆದರೆ ಬೆಂಗಳೂರು ಮೈಸೂರು ರಾಷ್ಟೀಯ ಹೆದ್ದಾರಿ ಸೇರಿದಂತೆ ನಡೆದಿರುವ ಹಲವು ಹಗರಣಗಳು ಬಯಲಾಗಲಿವೆ. ಇದನ್ನು ತನಿಖೆಗೆ ಒಳಪಡಿಸುವ ರಾಜಕೀಯ ನಿರ್ಧಾರ ಹೊರಬೀಳಬೇಕಿದೆ. ಆದರೆ, ರಾಜಕೀಯ ವ್ಯಕ್ತಿಗಳು ಪ್ರಭಾವ ಬೀರಿ ದಿಕ್ಕು ತಪ್ಪಿಸುತ್ತಾರೋ ಇಲ್ಲ ಹಗರಣ ಬಯಲಿಗೆಳೆಯಲು ಸಹಕರಿಸುತ್ತಾರೋ ಕಾದು ನೋಡಬೇಕಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ