NEWSನಮ್ಮಜಿಲ್ಲೆನಮ್ಮರಾಜ್ಯ

ಯಾವಾಗ ಸ್ವಾಮಿ ತಾವು ಸರಿ ಸಮಾನ ವೇತನ ಕೊಡಿಸುವುದು 2024ರ ಅಗ್ರಿಮೆಂಟ್‌ ಆದ ಮೇಲಾ: ಒಕ್ಕೂಟಕ್ಕೆ ಸಾರಿಗೆ ನೌಕರರ ಪ್ರಶ್ನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುತ್ತೇವೆ ಎಂದು 1/1/2020ರ ವೇತನ ಅಗ್ರಿಮೆಂಟ್‌ ಬೇಡ ಎಂದು ‌ ಮುಷ್ಕರ ಮಾಡಿಸಿದ್ದೀರಾ, ಮುಷ್ಕರ ಫೇಲಾದ ನಂತರ ಸರಿಸಮಾನ ವೇತನ ಕೊಡಿಸುತ್ತೇನೆ ಎಂದು ಹೋರಾಟಗಳನ್ನು ಮಾಡುತ್ತೀರಾ. ನಿಮ್ಮ ಕಡೆ ವೇತನ ಹೆಚ್ಚಾಗದೆ ಇದ್ದ ಕಾರಣ ಜಂಟಿ ಸಮಿತಿ ಮಧ್ಯ ಪ್ರವೇಶ ಮಾಡಿತು.

ಆ ಬಳಿಕ ಸಾರಿಗೆ ನೌಕರರಿಗೆ ಸರ್ಕಾರ ಶೇ.15ರಷ್ಟು ವೇತನ ಹೆಚ್ಚಳ ಮಾಡಿತ್ತು. ಜಂಟಿ ಹೋರಾಟದಿಂದಲೇ ಇದು ಆಯಿತು ಎಂದು ಹೇಳಲೇಬೇಕು. ಏಕೆಂದರೆ ನೀವು ಅಗ್ರಿಮೆಂಟ್‌ ಬೇಡ ಎಂದು ಹೋರಾಟ ಮಾಡುತ್ತಲೇ ಬಂದಿದ್ದೀರಿ ಹಾಗಾಗಿ ಅಗ್ರಿಮೆಂಟ್‌ ವೇಳೆ ಶೇ. 15ರಷ್ಟು ವೇತನ ಹೆಚ್ಚಳವಾಗಿರುವುದರಲ್ಲಿ ನಿಮ್ಮ ಕೂಟದ ಹೋರಾಟ ಸೊನ್ನೆಯೇ ಆಗಿದೆ.

ಇನ್ನು ಶೇ.15ರಷ್ಟು ವೇತನ ಹೆಚ್ಚಳ 2020ರ ಜ.1ರಿಂದ ಜಾರಿಗೆ ಬರುವಂತೆ ಸರ್ಕಾರ ಘೋಷಣೆ ಮಾಡಿದ್ದು 2023ರ ಮಾರ್ಚ್‌ನಲ್ಲಿ. ಆ ಬಳಿಕ ಸರ್ಕಾರ ಮಾಡಿರುವ ಹೆಚ್ಚಳದ ಹಿಂಬಾಕಿ ಕೊಡಿಸುವುದಕ್ಕಾದರೂ ಹೋರಾಟ ಮಾಡಬಹುದಿತ್ತು. ಅದಕ್ಕೂ ಸಮರ್ಪಕವಾಗಿ ನಿಮ್ಮ ಕೂಟ ತೊಡಗಿಸಿಕೊಳ್ಳಲಿಲ್ಲ. ಈಗಲೂ ಆ ಬಗ್ಗೆ ತೊಡಗಿಸಿಕೊಂಡಿಲ್ಲ ಎಂದೇ ಹೇಳಬಹುದು.

ಸರಿ ಆದರೂ ನೌಕರರು ನಿಮ್ಮ ಕೂಟವನ್ನು ನಂಬಿಕೊಂಡು ಈಗಲೂ ನಮಗೆ ಸರಿ ಸಮಾನ ವೇತನ ಆಗುತ್ತದೆ ಎಂದು ಚಾತಕಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದರೆ ತಾವು ಏನು ಮಾಡಿದ್ಧೀರಿ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಸರಿ ಸಮಾನ ವೇತನ ಕೊಡಿಸುವುದಕ್ಕೆ ಮುಂದಾದರ ಇಲ್ಲ. ಅದೂ ಹೋಗಲಿ 2020ರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯೂ ಈವರೆಗೂ ಬಂದಿಲ್ಲ ಏನು ಮಾಡುತ್ತಿದ್ದೀರಿ?

ಇನ್ನು ತಾವು ಸರ್ಕಾರ ಬದಲಾದ ಬಳಿಕ ಸರಿ ಸಮಾನ ವೇತನ ಆಗುತ್ತದೆ ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವುದನ್ನು ನಮಗೆ ಕೊಡುತ್ತದೆ ಎಂದು ಹೇಳಿಕೊಂಡೇ ಕಳೆದ ಒಂದೂವರೆ ವರ್ಷದಿಂದಲೂ ನೌಕರರ ಸೊಸೈಟಿ ಚುನಾವಣೆ, ಆಟೋಟ ಹಾಗೂ ಇನ್ನಿತ ನಿಮ್ಮ ಒಕ್ಕೂಟದ ಕೆಲಸಗಳಲ್ಲಿ ಬ್ಯುಸಿ ಆಗಿ ವೇತನದ ಬಗ್ಗೆ ಎಲ್ಲೂ ಮಾತನಾಡಲಿಲ್ಲ. ಆದರೂ ನೌಕರರು ಕೂಟ ಮತ್ತು ಒಕ್ಕೂಟವನ್ನು ನಂಬಿಕೊಂಡೆ ಈಗಲೂ ಇದ್ದಾರೆ.

ಹೀಗಾಗಿ ತಾವು ಈಗಲಾದರೂ ನೌಕರರಿಗೆ ಅತೀ ಶೀಘ್ರದಲ್ಲೇ ಸಿಹಿ ಸುದ್ದಿಕೊಡಲು ಸರ್ಕಾರ ಮುಂದಾಗುತ್ತಿದೆ ಎಂದೋ ಅಥವಾ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದೋ ಹೇಳಿಲ್ಲ. ಹೇಳಿದ್ದರೂ ಅದಕ್ಕೆ ಯಾವುದೆ ಸಮಯದ ಗಡಿ ನಿರ್ಧಾರವಾಗಿಲ್ಲ. ಏಕೆ ಹೀಗೆ ನೌಕರರ ದಿಕ್ಕು ತಪ್ಪಿಸಿಕೊಂಡೇ ಬರುತ್ತಿದ್ದೀರಿ?

2024ರ ಜನವರಿ 1ರಿಂದ ಅಗ್ರಿಮೆಂಟ್ ಮಾಡುವುದಕ್ಕೋ ಇಲ್ಲ ನಿಮ್ಮ ಹೇಳಿಕೆಯಂತೆ ಸರಿ ಸಮಾನವೇತನ ಮಾಡುವುದಕ್ಕೋ ಈ 11 ತಿಂಗಳಿಂದ ಏಕೆ ಸಾಧ್ಯವಾಗಿಲ್ಲ. ಸರ್ಕಾರದ ಖಜಾನೆಯಲ್ಲಿ ನೌಕರರಿಗೆ ಕೊಡಲು ಹಣವಿಲ್ಲವೇ? ಈ ಕಾಲವಕಾಶದಲ್ಲಿ ಅಂದರೆ ಕಳೆದ 11 ತಿಂಗಳಲ್ಲಿ ತಾವು ನೌಕರರಿಗೆ ಸರಿ ಸಮಾನ ವೇತನ ಕೊಡಿಸ ಬಹುದಾಗಿತ್ತು. ಆದರೆ ಇದರ ಬಗ್ಗೆ ಈವರೆಗೂ ದೃಢ ನಿರ್ಧಾರ ತೆಗೆದುಕೊಂಡಿಲ್ಲ.

ಬದಲಿಗೆ ಕೆಎಸ್‌ಆರ್‌ಟಿಸಿ ಸೊಸೈಟಿ ಎಲೆಕ್ಷನ್ ಗಾಗಿ ವಿನೂತನವಾಗಿ ಹೋರಾಟ ಮಾಡಿ ಜಯಶೀಲರಾಗಿ ಇದ್ದೀರಾ ಒಳ್ಳೆಯದಾಗಲಿ. ಆದರೆ, ಈಗ ಜಂಟಿ ಸಮಿತಿ ಅವರು ವೇತನ ಹೆಚ್ಚಳ ಮಾಡಿಸುವುದಕ್ಕಾಗಿ ಹೋರಾಟ ಮಾಡಲು ಮುಂದೆ ಬಂದ ಬಳಿಕ ಈಗ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಹೇಳಿಕೆ ಕೊಡುವ ಮೂಲಕ ಯಾಕೆ ನೌಕರರನ್ನು ದಾರಿ ತಪ್ಪಿಸುತ್ತಿದ್ದೀರಾ?

ಇನ್ನು ತಮಗೆ ಡಿ.31ರವರೆಗೂ ಅಂದರೆ 16 ದಿನಗಳ ಸಮಯವಿದೆ. ಈ ಸಮಯದಲ್ಲಾದರೂ ತಾವು ಸರಿ ಸಮಾನ ವೇತನ ಕೊಡಿಸಿ ನೌಕರರಿಗೆ ಒಳ್ಳೆ ಸುದ್ದಿ ಕೊಡಬೇಕು ಅಲ್ಲವೇ? ಅದನ್ನು ಬಿಟ್ಟು ಈಗಲೂ ತಾವು ಆ ನಿಟ್ಟಿನಲ್ಲಿ ಹೇಳಿಕೆ ಕೊಡದೆ ಡಿ.31ರ ಹೋರಟಕ್ಕೆ ಬೆಂಬಲವಿಲ್ಲ ಎಂದರೆ ತಾವು ಏನು ಮಾಡಲು ಹೊರಟಿದ್ದೀರಿ ಹೇಳುತ್ತೀರಾ?

ಇಲ್ಲ ನಮ್ಮ ಕೂಟ ಹಾಗೂ ಒಕ್ಕೂಟದಿಂದ ಸರಿ ಸಮಾನ ವೇತನ ಕೊಡಿಸಲು ಆಗುವುದಿಲ್ಲ ಎಂದಾದರೆ ತಾವು ಮೌನವಾಗಿ ಇದ್ದುಬಿಡಿ. ಸಂಬಳ ಹೆಚ್ಚಾಗಲಿ ಇಲ್ಲ ಆಗದೆ ಇರಲಿ ಅದನ್ನು ನಾವು ಅಧಿಕಾರಿಗಳ ಜತೆ ಸೇರಿ ನೋಡಿಕೊಳ್ಳುತ್ತೇವೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಸಂಬಂಧ ಹೋರಾಟ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರೊಂದಿಗೆ ನಾವು ಸೇರಿ ಹೋರಾಟ ಮಾಡುತ್ತೇವೆ ಎಂದು ನೊಂದ ನೌಕರರು ಪ್ರಶ್ನಿಸುವ ಮೂಲಕ ಸ್ಪಷ್ಟ ಸಂದೇಶ ನೀಡಿ  ಎಚ್ಚರಿಕೆ ಕೊಟ್ಟಿದ್ದಾರೆ.

ಇನ್ನು ತಾವು ಉತ್ತರನ ಪೌರುಷ ಒಲೆಮುಂದೆ  ಎಂಬಂತೆ ನೌಕರರಿಗೆ ದಾರಿ ತಪ್ಪಿಸುವ ಕೆಲಸ ಬಿಟ್ಟು ಸರಿ ಸಮಾನ ವೇತನ ಕೊಡಿಸುವತ್ತ ಮುಂದಾಗಿ ಇಲ್ಲ ಅದೂ ಕೂಡ ಈ 16 ದಿನದಲ್ಲೇ ಆಗಬೇಕು. ಇಲ್ಲ ಸರ್ಕಾರ ಇದಕ್ಕೆ ಒಪ್ಪಲಿಲ್ಲ ಎಂದಾದರೆ ಜಂಟಿ ಸಮಿತಿಯವರಂತೆ  ಹೋರಾಟದ ದಿನಾಂಕ ಘೊಷಿಸಿ ನೌಕರರು ಅಧಿಕಾರಿಗಳಿಗೆ ಮನವಿ ಮಾಡಿ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ