VIJAYAPATHA.IN > ವಿಜಯಪಥ > NEWS > ಆರೋಗ್ಯ > ಸಿಎಂ ಫೋನ್ ಕರೆಗೆ ಸ್ಪಂದಿಸಿ ಮಹಿಳೆಗೆ ಕ್ಯಾನ್ಸರ್ ಚಿಕಿತ್ಸೆ
ಸಿಎಂ ಫೋನ್ ಕರೆಗೆ ಸ್ಪಂದಿಸಿ ಮಹಿಳೆಗೆ ಕ್ಯಾನ್ಸರ್ ಚಿಕಿತ್ಸೆ
ಚಿಕಿತ್ಸೆ ಸಿಗದೇ ಪರದಾಡುತ್ತಿದ್ದ ಬೆಳಗಾವಿ ಜಿಲ್ಲೆಯ ಕುಡಚಿ ಮಹಿಳೆ
admin.savhnApril 13, 2020
ಧಾರವಾಡ: ಕೋವಿಡ್ 19 ರ ಲಾಕ್ ಡೌನ್ ಹಿನ್ನೆಲೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದ ಬೆಳಗಾವಿ ಜಿಲ್ಲೆ ಕುಡಚಿಯ 50 ವರ್ಷದ ಮಹಿಳೆಯೊಬ್ಬರ ನೋವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದಾರೆ.
ಕುಡಚಿಯ ಮಹಿಳೆಯ ತೊಂದರೆ ಗಮನಕ್ಕೆ ಬಂದ ತಕ್ಷಣ ಭಾನುವಾರ ರಾತ್ರಿ 8 ಗಂಟೆಯ ಹೊತ್ತಿಗೆ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್ ಅವರಿಗೆ ಕರೆ ಮಾಡಿದ ಮುಖ್ಯಮಂತ್ರಿಗಳು , ಮಹಿಳೆಯ ಚಿಕಿತ್ಸೆಗೆ ಏರ್ಪಾಡು ಮಾಡಲು ಸೂಚಿಸಿದರು.
ತಕ್ಷಣ ಕಾರ್ಯಪ್ರವೃತ್ತರಾದ ಡಿ ಎಚ್ ಓ ಹುಬ್ಬಳ್ಳಿ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಸಂಶೋಧನಾ ಕೇಂದ್ರದ ಆಡಳಿತ ಮಂಡಳಿ ಸಂಪರ್ಕಿಸಿ ಇಂದು( ಏ.13) ಚಿಕಿತ್ಸೆಗೆ ಸಮಯ ನಿಗದಿಪಡಿಸಿಕೊಟ್ಟಿದ್ದಾರೆ.
ಕೊರೊನಾ ನಿಯಂತ್ರಣದ ಕಾರ್ಯದೊತ್ತಡದ ನಡುವೆಯೂ ಸ್ಪಂದಿಸಿರುವ ಮುಖ್ಯಮಂತ್ರಿಗಳ ನಡೆ ಮಾನವೀಯತೆಗೆ ದ್ಯೋತಕವಾಗಿದೆ. ಇದು ಸಿಎಂ ಯಡಿಯೂರಪ್ಪ ಅವರ ಜನಪರಕಾಳಜಿಯನ್ನು ತೋರುತ್ತದೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Related
admin.savhn