ಕೊಳ್ಳೇಗಾಲ: ಕೇವಲ ಸೌತೆಕಾಯಿಗಾಗಿ ಅಣ್ಣನೊಬ್ಬ ತನ್ನ ತಂಗಿಯ ಕುತ್ತಿಗೆಯನ್ನು ಕತ್ತಿಯಿಂದ ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲದಲ್ಲಿ ನಡೆದಿದೆ.
ಐಮನ್ ಬಾನು ಹತ್ಯೆಯಾದ ಯುವತಿ. ಆಕೆಯನ್ನು ಹತ್ಯೆಗೈದ ಹಂತಕ ಸೋದರ ಫರ್ಮಾನ್ ಪಾಷಾ ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಅಣ್ಣನ ಮಗನಿಗೆ ಕೊಲೆ ಆರೋಪಿ ಫರ್ಮಾನ್ ಪಾಷಾ ಸೌತೆಕಾಯಿ ತಿನಿಸುತ್ತಿದ್ದ. ಮಗನಿಗೆ ಜ್ವರ ಇದೆ ತಿನ್ನಿಸಬೇಡ ಎಂದು ಆತನ ಅತ್ತಿಗೆ ಹೇಳಿದ್ದಾಳೆ. ಇದೆ ವಿಚಾರವಾಗಿ ಅಣ್ಣ ಫರ್ಮಾನ್ ಪಾಷಾಗೆ ತಂಗಿ ಐಮನ್ ಬಾನು ಬೈದಿದ್ದಾಳೆ. ಇದರಿಂದ ಕೋಪಗೊಂಡ ಆತ ಕತ್ತಿ ತೆಗೆದುಕೊಂಡು ತಂಗಿಯ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ.
ಇನ್ನು ಬಿಡಿಸಲು ಬಂದ ಅತ್ತಿಗೆ ಹಾಗೂ ತಂದೆಯ ಮೇಲು ಕೂಡ ಆತ ಹಲ್ಲೆ ನಡೆಸಿದ್ದಾನೆ. ಸದ್ಯ ಇಬ್ಬರೂ ಗಾಯಾಳುಗಳನ್ನು ಚಾಮರಾಜನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತಂತೆ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.