NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ 2020ರ ಪರಿಷ್ಕೃತ ಮೂಲ ವೇತನ ಏಪ್ರಿಲ್‌ನಿಂದಲೇ ಅನುಷ್ಠಾನ: ಎಂಡಿ ಅನ್ಬುಕುಮಾರ್‌

KSRTC MD ಅನ್ಬುಕುಮಾರ್‌
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ನೌಕರರ/ ಅಧಿಕಾರಿಗಳು (ಪೂರ್ವ ಕಿಂಕೋ ನೌಕರರ/ಅಧಿಕಾರಿಗಳು ಸೇರಿದಂತೆ) ದಿನಾಂಕ 31.12.2019 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ.15 ರಷ್ಟು ಹೆಚ್ಚಿಸಿ, ಅದರಂತೆ ವೇತನ ಶ್ರೇಣಿ ಪರಿಷ್ಕರಿಸಿ, ದಿನಾಂಕ 01.03.2023 ರಿಂದ ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರವು 17.03.2023ರಲ್ಲಿ ಆದೇಶಿಸಿರುತ್ತದೆ.

ಹೀಗಾಗಿ ಕರ್ನಾಟಕ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳು ಅಂದರೆ ಕರಾರಸಾ ನಿಗಮ, ಬೆಂಮಸಾ, ವಾಕರಸಾ ಹಾಗೂ ಕಕರಸಾ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಮತ್ತು ನಿಗಮಗಳ ಮನಶ್ಚೇತನಕ್ಕಾಗಿ ರಚಿಸಿರುವ ಏಕಸದಸ್ಯ ಸಮಿತಿ ವರದಿಯನ್ನು ಪರಿಶೀಲಿಸಿ ನೌಕರರ ವೇತನವನ್ನು ಪರಿಷ್ಕರಿಸಲು ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿತ್ತು.

ಅದರನ್ವಯ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ನಿಗದಿ ಮಾಡಲಾಗಿದೆ. ಅದು ಈ ಕೆಳಕಂಡಂತೆ ನಿಗದಿ ಮಾಡಲಾಗಿದೆ.

1. ದಿನಾಂಕ: 31-12-2019 ರಲ್ಲಿದ್ದ ಮೂಲ ವೇತನಕ್ಕೆ ಶೇ.15 (ಹದಿನೈದು) ರಷ್ಟು ಮೊತ್ತವನ್ನು ಕೂಡಿಸುವುದು (ಕುಟುಂಬ ಯೋಜನೆ ವಿಶೇಷ ಭತ್ಯೆ ಹೊರತುಪಡಿಸಿ).

2. ಕರಾಸಾ/ಕೇಕ/ಲೆಪ/ಪಾವತಿ/1918/I8-19 ದಿನಾಂಕ: 13.08.2018 ರ ಸುತ್ತೋಲೆ ಸಂಖ್ಯೆ: 07/2018 ರನ್ವಯ ನಿಗದಿಪಡಿಸಿರುವ ಮೂಲ ತುಟ್ಟಿಭತ್ಯೆಯ ಮೊತ್ತವನ್ನು ಕೂಡಿಸುವುದು ಹಾಗೂ ವಿಶೇಷ ಸಂದರ್ಭಗಳಲ್ಲಿ ಮೂಲ ತುಟ್ಟಿಭತ್ಯೆ ನಿಗದಿಪಡಿಸುವ ಬಗ್ಗೆ ಸುತ್ತೋಲೆಯಲ್ಲಿನ ಮಾರ್ಗದರ್ಶನ ಪಾಲಿಸುವುದು.

3. ದಿನಾಂಕ: 01.01.2020 ರಂದು ವಾರ್ಷಿಕ ವೇತನ ಬಡ್ತಿ ಲಭ್ಯವಿದ್ದಲ್ಲಿ ವಾರ್ಷಿಕ ವೇತನ ಬಡ್ತಿ (ಪ್ರಸಕ್ತ ವೇತನ ಶ್ರೇಣಿ) ಯಲ್ಲಿ ಮೊತ್ತವನ್ನು ಕೂಡಿಸಬೇಕು.

4. ಕ್ರಮ ಸಂಖ್ಯೆ 01, 02 ಮತ್ತು 03 ರಲ್ಲಿ ಲೆಕ್ಕ ಹಾಕಲಾದ ಒಟ್ಟು ಮೊತ್ತವು ಸದರಿ ಹುದ್ದೆಯ ಪರಿಷ್ಕೃತ ವೇತನ ಶ್ರೇಣಿಯ ಕನಿಷ್ಠ ಮೂಲ ವೇತನಕ್ಕಿಂತ ಕಡಿಮೆ ಇದ್ದಲ್ಲಿ ಕನಿಷ್ಠ ಮೂಲ ವೇತನ ನಿಗದಿಗೊಳಿಸುವುದು, ಒಟ್ಟು ಮೊತ್ತವು ಹುದ್ದೆಯ ಪರಿಷ್ಕೃತ ವೇತನ ಶ್ರೇಣಿಯ ಹಂತದಲ್ಲಿದ್ದರೆ ಅದೇ ಹಂತದಲ್ಲಿ ಮತ್ತು ಎರಡು ಹಂತಗಳ ಮಧ್ಯದಲ್ಲಿದ್ದರೆ ಪರಿಷ್ಕೃತ ವೇತನ ಶ್ರೇಣಿಯ ಮುಂದಿನ ಹಂತದಲ್ಲಿ ನಿಗದಿಗೊಳಿಸಬೇಕು.

5. ಉದ್ಯೋಗಿಯ/ ಅಧಿಕಾರಿಯ ವಾರ್ಷಿಕ ವೇತನ ಬಡ್ತಿಯು ದಿನಾಂಕ 02.01.2020 ಮತ್ತು ನಂತರದ ಅವಧಿಯಲ್ಲಿ ಲಭ್ಯವಿದ್ದು ಈ ದಿನಾಂಕದಂದು ಚಾಲ್ತಿ ವೇತನ ಶ್ರೇಣಿಯಲ್ಲಿದ್ದ ವಾರ್ಷಿಕ ವೇತನ ಬಡ್ತಿ ಮೊತ್ತವನ್ನು ಕೂಡಿಸಿ ಲಾಭದಾಯಕವಾಗುವಂತಿದ್ದಲ್ಲಿ ಪರಿಷ್ಕೃತ ಶ್ರೇಣಿಯಲ್ಲಿ ಮೂಲ ವೇತನವನ್ನು ಮರು ನಿಗದಿಗೊಳಿಸಬೇಕು.

6. ಉದ್ಯೋಗಿ/ ಅಧಿಕಾರಿಯ ಮುಂದಿನ ವಾರ್ಷಿಕ ವೇತನ ಬಡ್ತಿಯನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ ದಿನಾಂಕ: 01.01.2021 ರಿಂದ ಅಥವಾ ಕ್ರಮ ಸಂಖ್ಯೆ 5 ರಂತೆ ಮೂಲ ವೇತನ ಮರು ನಿಗದಿಗೊಳಿಸಿದ ದಿನಾಂಕದಿಂದ ಒಂದು ವರ್ಷದ ನಂತರ ನೀಡಬೇಕು.

7. ಮುಂಬಡ್ತಿ ಅವಕಾಶಗಳಿಲ್ಲದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ದಿನಾಂಕ: 01.01.2020 ರಂದು ಅಥವಾ ನಂತರದ ದಿನಗಳಲ್ಲಿ 15 ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿ ಉನ್ನತ ವೇತನ ಶ್ರೇಣಿಗೆ ಅರ್ಹರಾಗಿ ಸಿಬ್ಬಂದಿ ಅದೇಶ ಹೊರಡಿಸಿದಲ್ಲಿ ಪರಿಷ್ಕೃತ ಉನ್ನತ ವೇತನ ಶ್ರೇಣಿಯಲ್ಲಿ ಮೂಲ ವೇತನ ನಿಗದಿಪಡಿಸುವುದು. ಈ ಸೌಲಭ್ಯವು ಉದ್ಯೋಗಿಗಳ ಸೇವಾವಧಿಯಲ್ಲಿ ಒಮ್ಮೆ ಮಾತ್ರ ದೊರೆಯುತ್ತದೆ.

8. ಮುಂಬಡ್ತಿ ಅವಕಾಶವಿರುವ ಹುದ್ದೆಯಲ್ಲಿ 15 ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿ ಮುಂಬಡ್ತಿ ದೊರೆಯದೆ ಇದ್ದು ಆಯ್ಕೆ ಶ್ರೇಣಿಗೆ ಅರ್ಹರಾಗಿ ಸಿಬ್ಬಂದಿ ಆದೇಶ ಹೊರಡಿಸಿದಲ್ಲಿ (ಕರಾರಸಾ/ಪೂರ್ವ ಕಿಂಕೋ) ಪರಿಷ್ಕೃತ ಮಧ್ಯವರ್ತಿ ವೇತನ ಶ್ರೇಣಿಯಲ್ಲಿ ಮೂಲ ವೇತನ ನಿಗದಿಪಡಿಸುವುದು. ಈ ಸೌಲಭ್ಯವು ಉದ್ಯೋಗಿಗಳ ಸೇವಾವಧಿಯಲ್ಲಿ ಒಮ್ಮೆ ಮಾತ್ರ ದೊರೆಯುತ್ತದೆ.

9, ಅಧಿಕಾರಿ ವರ್ಗದವರಿಗೆ ಹಾಗೂ ಉದ್ಯೋಗಿಗಳಿಗೆ (ಸದರಿಯವರುಗಳ ನೇಮಕಾತಿ/ಸೇವಾ ನಿಬಂಧನೆಗಳ ಅನ್ವಯ) ಅವರುಗಳ ಮುಂದಿನ ವೇತನ ಬಡ್ತಿ/ ಸ್ಥಗಿತ ವೇತನ ಬಡ್ತಿಯನ್ನು ದಿನಾಂಕ: 01.01.2021 ರಿಂದ ಅಥವಾ ಮೂಲ ವೇತನ ಪುನರ್ ನಿಗದಿಗೊಳಿಸಿದ ದಿನಾಂಕದಿಂದ ಒಂದು ವರ್ಷದ ನಂತರ ವಾರ್ಷಿಕ ವೇತನ ಬಡ್ತಿ/ ಸ್ಥಗಿತ ವೇತನ ಬಡ್ತಿ ಮಂಜೂರಾತಿ/ ಕೆಸಿಎಸ್‌ಆರ್ ನಿಯಮದ ಪ್ರಕಾರ ಅರ್ಹ ಪ್ರಕರಣಗಳಲ್ಲಿ ವಾರ್ಷಿಕ ವೇತನ ಬಡ್ತಿಗಳನ್ನು ನೀಡಬೇಕು.

10. ಶಿಕ್ಷಾದೇಶಗಳು ಜಾರಿಯಲ್ಲಿರುವ ಪ್ರಕರಣಗಳಲ್ಲಿ ವೇತನ ನಿಗದಿಗೊಳಿಸುವಾಗ ಸುತ್ತೋಲೆ ಸಂಖ್ಯೆ 1586/2016-17 ದಿನಾಂಕ 12.04.2016 ರ ಕಂಡಿಕೆ II (3) ರಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು.

11 ದಿನಾಂಕ 01.01,2020 ರಿಂದ ದಿನಾಂಕ 28,02,2023 ರವರೆಗೆ ಈಗಾಗಲೇ ನೀಡಿರುವ ವಾರ್ಷಿಕ ವೇತನ ಬಡ್ತಿ, ಶಿಕ್ಷಾದೇಶಗಳು ಮತ್ತು ಇತರೇಗಳನ್ನು ಪರಿಷ್ಕೃತ ವೇತನ ಶ್ರೇಣಿಯೊಂದಿಗೆ ಕಾಲ್ಪನಿಕವಾಗಿ (Notional) ನಿಗದಿಗೊಳಿಸಿ ಪರಿಷ್ಕರಿಸಬೇಕು.

12. ಪರಿಷ್ಕೃತ ಮೂಲ ವೇತನವನ್ನು ದಿನಾಂಕ 01.03.2023 ರಿಂದ ಜಾರಿಗೊಳಿಸಿ, ಏಪ್ರಿಲ್-2023 ರ ಮಾಹೆಯಿಂದ ಮತ್ತು ಮುಂದಕ್ಕೆ ವೇತನದಲ್ಲಿ ಅನುಷ್ಠಾನಗೊಳಿಸಿ ಪಾವತಿಸಬೇಕು.

13. ಮಾರ್ಚ್‌ 23 ಮಾಹೆಯ ವೇತನ ವ್ಯತ್ಯಾಸವನ್ನು ಏಪ್ರಿಲ್-2023 ರ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸಬೇಕು.

14. ಮಾರ್ಚ್-2023 ರ ಮಾಹೆಯಲ್ಲಿ ಸೇವಾ ವಿಮುಕ್ತಿ ಹೊಂದಿದ ನೌಕರರಿಗೆ, ಮಾರ್ಚ್-2023 ರ ಮಾಹೆಯ ಪರಿಷ್ಕತ ವೇತನ ವ್ಯತ್ಯಾಸವನ್ನು ದಿನಾಂಕ 15.05.2023 ರಂದು ಪಾವತಿಸುವುದು ಎಂದು ಎಲ್ಲ ನಿಗಮಗಳ ಮುಖ್ಯ ಲೆಕ್ಕಾಧಿಕಾರಿಗಳಿಗೆ ಕೆಎಸ್‌ಆರ್‌ಟಿಸಿ ವರಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ.

CIRCULAR 16-03292023110121ಇನ್ನು ಪರಿಷ್ಕತ ವೇತನ ಯಾವ ಹುದ್ದಗೆ ಮತ್ತು ಸೇವಾವಧಿಗೆ ಎಷ್ಟು ಹೆಚ್ಚಳವಾಗಲಿದೆ ಎಂಬುದರ ಪೂರ್ಣ ಮಾಹಿತಿ ಕೆಳಗಿನ ಕೋಷ್ಠಗಳನ್ನು ನೋಡಿ ತಿಳಿದುಕೊಳ್ಳಬಹುದು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ