ಹುಬ್ಬಳ್ಳಿ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿಗೆ ಸಿಎಂ ಒತ್ತಾಯಿಸಿ: ಸಚಿವರಿಗೆ ವಾಯವ್ಯ ವಲಯ ನೌಕರರ ಕೂಟ ಮನವಿ
ಹುಬ್ಬಳ್ಳಿ: ಚುನಾವಣಾ ಪೂರ್ವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗ ಮಾದರಿಯಲ್ಲಿ) ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಬೇಕು ಎಂದು ರ‍್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಪದಾಧಿಕಾರಿಗಳು ಕರ‍್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹಾಗೂ ಬೆಂಗಳೂರು ಕೊಳಚೆ ನರ‍್ಮೂಲನ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರನ್ನು ಭೇಟಿಮಾಡಿ ಮನವಿ ಮಾಡಿತು.
ನೌಕರರು ಹುಬ್ಬಳ್ಳಿಯ ಮನೆಯಲ್ಲಿ ಭೇಟಿಯಾದ ವೇಳೆ ಪ್ರಸಾದ ಅಬ್ಬಯ್ಯನವರು ಮಾತನಾಡಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗಮನಕ್ಕೆ ತರುವುದಾಗಿಯೂ ಹಾಗೂ ಮುಂಬರುವ ದಿನದಲ್ಲಿ ನಮ್ಮ ನಿಯೋಗವನ್ನು ಮುಖ್ಯಮಂತ್ರಿ ಬಳಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸುವ ಮೂಲಕ ಬೇಡಿಕೆ ಈಡೇರಿಸುವುದಕ್ಕೆ ಆದ್ಯತೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಸಚಿವ ಸಂತೋಷ ಲಾಡ್ ಅವರು ಕೂಡ ತಮ್ಮ ಮನೆಯಲ್ಲಿ ಜ.12ರಂದು ಭೇಟಿ ಮಾಡಿದ ನೌಕರರ ಉದ್ದೇಶಿಸಿ ಮಾತನಾಡಿ, ಸರಿ ಸಮಾನ ವೇತನ ಕೊಡುವತ್ತ ನಾವು ಇದ್ದೇವೆ ಎಂದು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಅಲ್ಲದೆ ಸ್ವತಃ “ನಗದು ರಹಿತ ಚಿಕಿತ್ಸೆ” ಯೋಜನೆಯನ್ನು ಶೀಘ್ರವಾಗಿ ನಮ್ಮ ವಾಯವ್ಯ ರ‍್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಜಾರಿ ತರುವುದಾಗಿ ಭರವಸೆ ನೀಡಿದರು ಎಂದು ವಾಯುವ್ಯ ವಲಯ ಮಟ್ಟದ ನೌಕರರ ಕೂಟದ ಕರ‍್ಯಾಧ್ಯಕ್ಷ ವಿ.ಜಿ.ಪೂಜಾರ ತಿಳಿಸಿದ್ದಾರೆ.
ಮನವಿ ಸಲ್ಲಿಸಿದ ಕೂಟ ಬೇಡಿಕೆಗಳು ಏನು?: ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಪ್ರತಿದಿನ ಒಂದು ಕೋಟಿಗೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡಲು ಸರಿಸುಮಾರು 1.15 ಲಕ್ಷ (ಒಂದು ಲಕ್ಷ ಹದಿನೈದು ಸಾವಿರ) ನೌಕರರು ಕರ್ತವ್ಯ ನಿರ್ವಾಹಿಸುತ್ತಿದ್ದು. ನಾವೆಲ್ಲ ಹಬ್ಬ-ಹರಿದಿನಗಳಲ್ಲಿ ಕುಟುಂಬ ಸದಸ್ಯರೊಂದಿಗೆ ಇರಲು ಆಗದೆ, ಮಳೆ-ಗಾಳಿ-ಬಿಸಿಲು ಎನ್ನದೆ ಅತೀ ಒತ್ತಡದಲ್ಲಿ ಕಷ್ಟಪಟ್ಟು ದುಡಿಯುವ ವರ್ಗವಾಗಿದೆ.
ಹೀಗಿದ್ದರೂ ನಮಗೆ ಸರ್ಕಾರಿ ಮತ್ತು ಇತರೆ ನಿಗಮ ಮಂಡಳಿಗಳ ನೌಕರರ ವೇತನಕ್ಕೆ ಹೋಲಿಕೆ ಮಾಡಿದರೆ ಸಿಗುವ ವೇತನ ಅತೀ ಕಡಿಮೆ ಮತ್ತು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಆದರು ನಾವು ಕಾಯ-ವಾಚ -ಮನಸ ದುಡಿಯುವ ಕಾರಣದಿಂದಲೇ ಸಂಸ್ಥೆಗೆ ಅನೇಕ ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಪ್ರಶಸ್ತಿಗಳು ಒಲಿದು ಬಂದಿರುವುದು.
ಕಳೆದ 40 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಪ್ರತಿ ನಾಲ್ಕು ವರ್ಷಕ್ಕೆ ಒಮ್ಮೆ ನಡೆಯುತ್ತಿರುವ ಅವೈಜ್ಞಾನಿಕ ವೇತನ ಪರಿಷ್ಕರಣೆಯಿಂದ ಬೇಸತ್ತ ಸಾರಿಗೆ ನೌಕರರು ಬುದ್ದ-ಬಸವಣ್ಣ-ಅಂಬೇಡ್ಕರ್ ವಿಚಾರದಂತೆ ಸಂವಿಧಾನ ಅಡಿಯಲ್ಲಿ ಬರುವ ಸಮಾನ ಕೆಲಸಕ್ಕೆ, ಸಮಾನ ವೇತನ ಮತ್ತು ಸೌಲಭ್ಯಗಳಿಗಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಹೋರಾಟ ಮಾಡಿದ ಸಂದರ್ಭದಲ್ಲಿ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸುವ ಬದಲು ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಗುಬ್ಬಿಯ ಮೇಲೆ ಬ್ರಹ್ಮಾಸ್ತç ಉಪಯೋಗಿಸುವಂತೆ ಸಾವಿರಾರು ನೌಕರರನ್ನು ವಜಾ, ವರ್ಗಾವಣೆ ಮತ್ತು ಅಮಾನತ್ತು ಮಾಡಿ ಹೋರಾಟವನ್ನು ಹತ್ತಿಕ್ಕಲಾಯಿತ್ತು.
ಅದರೂ ನಾವು ಸಾರಿಗೆ ನೌಕರರು ಎದೆಗುಂದದೆ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು. ಅವರ ಅಧಿಕಾರವಧಿ ಮುಗಿದ ತಕ್ಷಣ ಯಾವಾಗ ಕಾಂಗ್ರೆಸ್ ಪಕ್ಷ ಸಾರಿಗೆ ನೌಕರರಿಗೆ, ಸರ್ಕಾರಿ ನೌಕರರಿಗೆ ಇರುವ ಸರಿಸಮಾನ ವೇತನ ಮತ್ತು ಸೌಲಭ್ಯಗಳನ್ನು ನೀಡುವ ಪ್ರಣಾಳಿಕೆ ಭರವಸೆಯನ್ನು ನೀಡಿದಾಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಹಲವು ವರ್ಷಗಳ ನ್ಯಾಯಯುತ ಬೇಡಿಕೆಗಳು ಈಡೇರುವ ಭರವಸೆಯಿಂದ ನಾವು ನಮ್ಮ ಕುಟುಂಬ ಸದಸ್ಯರು, ಬಂಧು ಬಳಗ ಮತ್ತು ಕರ್ತವ್ಯ ಸಮಯದಲ್ಲಿ ಪ್ರಯಾಣಿಕರಿಗೂ ಸಹ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ವಿನಂತಿಸಿ ಸಾರಿಗೆ ನೌಕರರು ಮಾಡಿದ ಅಳಿಲು ಪ್ರಯತ್ನದಿಂದ ನಮ್ಮೆಲ್ಲರ ಮಹಾದಾಸೆಯಂತೆ ಪಕ್ಷ ಅಧಿಕಾರಕ್ಕೆ ಬಂದಾಗ ಸಾರಿಗೆ ನೌಕರರು ಪಟ್ಟ ಖುಷಿಗೆ ಮಿತಿಯೇ ಇರಲಿಲ್ಲ.
ಅರ್ಥಿಕ ಅಧಃಪತನಕ್ಕೆ ಹೋಗಿದ್ದ ಸಾರಿಗೆ ನಿಗಮಗಳನ್ನು ಅರ್ಥಿಕವಾಗಿ ಸದೃಢ ಮಾಡಲು ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ನೀಡುವ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸಾಕಷ್ಟು ಬಸ್ಸುಗಳ ಮತ್ತು ನೌಕರರ ಕೊರತೆ ಇದ್ದರೂ ಸಾರಿಗೆ ನೌಕರರು ಕಷ್ಟವಾದರು, ಇಷ್ಟ ಪಟ್ಟು ದುಡಿದ ಪರಿಣಾಮ ಈ ದಿನ ಸರ್ಕಾರಕ್ಕೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಗ್ಯಾರಂಟಿ ಯೋಜನೆ ಎಂದರೆ ಶಕ್ತಿ ಯೋಜನೆ ಎಂದರೆ ಸುಳ್ಳಾಗಲಾರದು.
ಆದ್ದರಿಂದ ಕಳೆದ ಬಾರಿ ತಮ್ಮ ಸರ್ಕಾರ ನೀಡಿದ ಪ್ರಣಾಳಿಕೆ ಭರವಸೆಯಲ್ಲಿ 97/100 ರಷ್ಟು ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎಂದು ಸಾಬೀತು ಮಾಡಿದ್ದು, ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ನೌಕರರ ಮತ್ತು ಅಧಿಕಾರಿಗಳ ಬೇಡಿಕೆಯಂತೆ ಹಾಗೂ ಸರ್ಕಾರದ ಪ್ರಣಾಳಿಕೆ ಭರವಸೆಯಂತೆ ಈ ಬಾರಿ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ನೀಡಬೇಕು, ಈ ಮೂಲಕ ಸಾರಿಗೆ ಸಂಸ್ಥೆಯಲ್ಲಿ ಒಂದು ಇತಿಹಾಸ ನಿರ್ಮಾಣ ಮಾಡಬೇಕು ಎಂದು ತಾವು ಮುಖ್ಯ ಮಂತ್ರಿಗಳಿಗೆ ಹಾಗೂ ಸಾರಿಗೆ ಸಚಿವರಿಗೆ ನಮ್ಮ ಪರವಾಗಿ ಪತ್ರ ಬರೆದು, ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಕೋರಬೇಕೆಂದು ಸಮಸ್ತ ಸಾರಿಗೆ ನೌಕರರ ಪರವಾಗಿ ವಿನಂತಿಸುತ್ತೇವೆ ಎಂದು ಮನವಿ ಮಾಡಿದರು.
ಮನವಿ ಸಲ್ಲಿಸುವ ವೇಳೆ ಗ್ರಾಮಾಂತರ ವಿಭಾಗದ ಅಧ್ಯಕ್ಷ ವಿನಾಯಕ ಕಲ್ಲಣ್ಣವರ್, ಉಪಾಧ್ಯಕ್ಷ R.S.ಮಾವಿನಕಾಯಿ, ಖಜಾಂಚಿಗಳಾದ ಮಂಜುನಾಥ ಮಡಿವಾಳರ, ರಿಯಾಝ್, ವಿನಾಯಕ ಡೊಂಬರ, M1 ಘಟಕದ ಅಧ್ಯಕ್ಷ ವೀರಯ್ಯ ಕರಣ್ಣವರ, ರಾಜೂರ, ಪ್ರಾದೇಶಿಕ ಕಾರ್ಯಾಗಾರದ ಅಧ್ಯಕ್ಷ ಸದಾನಂದಗೌಡರ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಚವಾಣ್, ಉಪಾಧ್ಯಕ್ಷ ದೇವರಾಜ್ ಹಿರೇಮನಿ ಹಾಗೂ ವಿರೂಪಾಕ್ಷ ನಾಯ್ಕರ್, ಶಿವಾನಂದ ಬಾಲಣ್ಣವರ್, ವಿಜಯಗೌಡ ಕೆಂಚನಗೌಡ್ರ, ಸುನಿಲ್ ದಿವಟೆ ಹಾಗೂ ಹೊಸವಾಡ, ಚಂದ್ರಪ್ಪ ಹರಿಂದ್ರಾಲ್, ಹನಮಪ್ಪ ನಾಗೇಂದ್ರಗಡ್, ಸುರೇಶ್ ಚಂದಾಪುರ, ಜಾವೇದ್ ಖೋಜೆ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದರು.