ಬೆಂಗಳೂರು: ಎರಡು-ಮೂರು ತಿಂಗಳಿನಿಂದ ಉಂಟಾಗಿರುವ ನಷ್ಟದಲ್ಲಿ ಶೇ.50 ರಷ್ಟು ತುಂಬಿಕೊಳ್ಳುವಷ್ಟು ಮದ್ಯದಾಸ್ತಾನು ಇದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.
ಮದ್ಯದಿಂದ ಬರಬೇಕಿದ್ದ ಆದಾಯಕ್ಕೆ ಕೊರೊನಾ ಸೋಂಕಿನಿಂದ ಕತ್ತರಿ ಬಿದ್ದಿತ್ತು. ಅದನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಅದರಂತೆ ಗ್ರೀನ್, ಆರೆಂಜ್ ಮತ್ತು ರೆಡ್ ಜೋನ್ಗಳಲ್ಲಿ ಕೆಲ ನಿಯಮಗಳನ್ನು ಹೇರುವ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಮಾತನಾಡಿರುವ ಸಚಿವರು ಈ ಹಿಂದಿನಿಂದ ಆಗಿರುವ ನಷ್ಟವನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಇದರ ಮಧ್ಯೆ ಮದ್ಯಕ್ಕೆ ಬೆಲೆ ಏರಿಕೆ ಮಾಡಿದ್ದು, ಅದು ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ. ಇದರಿಂದ ಕುಡುಕರಿಗೆ ಶಾಕ್ ಆಗಿದ್ದು, ಆದರೂ ಪರವಾಗಿಲ್ಲ ಒಟ್ಟಾರೆ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ಸಿಕ್ಕಿದೆಯಲ್ಲ ಈಗ ಬ್ಲಾಕ್ ನಲ್ಲಿ ದುಬಾರಿ ಬೆಲೆ ತೆತ್ತು ಪಡೆಯುತ್ತಿದ್ದಕ್ಕಿಂತ ಕೊಂಚ ಬೆಲೆ ಹೆಚ್ಚಾದರೂ ಕೊಂಡುಕೊಳ್ಳೋಣ ಎಂಬ ಲೆಕ್ಕಚಾರದಲ್ಲಿದ್ದಾರೆ.