ಮೈಸೂರು : ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರಿಗೆ ಜಿಲ್ಲಾ ನ್ಯಾಯಾಲಯ 1.10 ಲಕ್ಷ ರೂಪಾಯಿ ದಂಡ ವಿಧಿಸಿದ್ದು ಅದನ್ನು ಪಾವತಿಸಲು ವಿಫಲರಾದರೆ 6 ತಿಂಗಳು ಸೆರೆವಾಸ ಅನುಭವಿಸಬೇಕು ಎಂದು ತೀರ್ಪು ನೀಡುವ ಮೂಲಕ ಎಲ್ಲರ ಹುಬ್ಬೇರಿವಂತೆ ಮಾಡಿದೆ !
ಒಂದನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ವಕೀಲ ಟಿ. ಶ್ರೀನಿವಾಸ್ ಎಂಬುವರಿಗೆ ದಂಡ ವಿಧಿಸಿ ಆದೇಶ ನೀಡಿರುವುದು.
ವಯೋವೃದ್ಧರಾದ ಮಹದೇವಪ್ಪ ಎಂಬುವರು ಯಾವುದೇ ಬಡ್ಡಿ ಇಲ್ಲದೆ ವಕೀಲ ಶ್ರೀನಿವಾಸ್ ಅವರಿಗೆ ಒಂದು ಲಕ್ಷ ರೂಪಾತಿ ಸಾಲ ಕೊಟ್ಟಿದ್ದರು. ಅದಕ್ಕಾಗಿ ಶ್ರೀನಿವಾಸ್ ಅವರು ನೀಡಿದ್ದ ಚೆಕ್ಕನು ಬ್ಯಾಂಕಿಗೆ ಹಾಜರುಪಡಿಸಿದಾಗ ಅದು ಬೌನ್ಸ್ ಆಗಿತ್ತು.
ಹಾಗಾಗಿ, ಸಾಲದ ಹಣವನ್ನು ನೀಡುವಂತೆ ನೋಟಿಸ್ ನೀಡಿದಾಗ, ಶ್ರೀನಿವಾಸ ನಾನು ಹಣವನ್ನು ವಾಪಸ್ ಮಾಡಿದ್ದೇನೆ ಎಂದು ಹೇಳಿ ನಕಲಿ ದಾಖಲೆ ಸೃಷ್ಟಿಸಿ, ಮಹದೇವಪ್ಪ ಅವರ ಸಹಿಯನ್ನು ಫೋರ್ಜರಿ ಮಾಡಿದ್ದು, ಆ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೂ ಸಲ್ಲಿಸಿದ್ದರು.
ಆದರೆ ಅವುಗಳನ್ನು ರುಜುವಾತು ಮಾಡಲು ವಕೀಲ ಟಿ. ಶ್ರೀನಿವಾಸ್ ವಿಫಲರಾದರು. ಅಲ್ಲದೇ, ಶ್ರೀನಿವಾಸ ಅವರು ನೀಡಿರುವ ಯಾವುದೇ ದಾಖಲೆಗಳು ಸಮಂಜಸವಾಗಿಲ್ಲ ಎಂದು ನಿರ್ಧರಿಸಿ, ನ್ಯಾಯಾಲಯ ಶ್ರೀನಿವಾಸ ಅವರಿಗೆ 1.10 ಲಕ್ಷ ರೂ ದಂಡ ವಿಧಿಸಿದೆ. ದಂಡವನ್ನು ಪಾವತಿಸದಿದ್ದರೆ ಆರು ತಿಂಗಳ ಸರಳ ಸೆರೆವಾಸ ಅನುಭವಿಸಬೇಕೆಂದು ಆದೇಶ ನೀಡಿದೆ.
ಕಕ್ಷಿದಾರರ ವಯೋವೃದ್ಧರಾದ ಮಹದೇವಪ್ಪ ಅವರ ಪರವಾಗಿ ವಕೀಲ ಪ್ರಸಾದ್ ವಾದ ಮಂಡಿಸಿದ್ದರು.