ವಿಜಯಪುರ: ಬಳ್ಳಾರಿಯಿಂದ ಇದೇ ಅ.10ರಿಂದ ಆರಂಭವಾಗಿರುವ ಸಾರಿಗೆ ನೌಕರರ ಕೂಟದ ಬೃಹತ್ ಸೈಕಲ್ ಜಾಥಾ ಇಂದು 20ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ವಿಜಯಪುರ ಜಿಲ್ಲೆಯನ್ನು ಪ್ರವೇಶಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
KSRTC ಕೂಟದ ಸೈಕಲ್ ಜಾಥಾ 12ನೇ ದಿನ – ನೂರಾರು ನೌಕರರಿಂದ ರ‍್ಯಾಲಿ- ಬೀದರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಬಳ್ಳಾರಿ- ಹೊಸಪೇಟೆ – ಕೊಪ್ಪಳ – ರಾಯಚೂರು – ಯಾದಗಿರಿ – ಬೀದರ್ ಮತ್ತು ಕಲಬುರಗಿ ಮತ್ತು ಇಂದು ವಿಜಯಪುರವನ್ನು ಜಾಥಾ ಆರಂಭವಾದ ಈ 20 ದಿನದಲ್ಲಿ ಸುತ್ತಿದ್ದು, ಈ ಮೂಲಕ ಸರ್ಕಾರಕ್ಕೆ ನಮ್ಮ ಹೋರಾಟ ಸರ್ಕಾರದ ವಿರುದ್ಧವಲ್ಲ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಬೇಕು ಎಂಬುದನ್ನು ತಿಳಿಸಲಾಗುತ್ತಿದೆ.
ಸಾರಿಗೆ ನೌಕರರ ಸೈಕಲ್ ಜಾಥಾ ಯಶಸ್ಸು ಸಹಿಸದೆ ನೌಕರರನ್ನು ಎತ್ತಿಕಟ್ಟುವ ಕೆಲಸ – ಕೂಟದ ಅಧ್ಯಕ್ಷರ ವಿರುದ್ಧ ಅಪಪ್ರಚಾರ
ಅಲ್ಲದೆ ನಾವು ಶಾಂತಿಯುತವಾಗಿ ಈ ಜಾಥಾ ನಡೆಸುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕರ್ತವ್ಯ ನಿರತ ನೌಕರರನ್ನು ಕರೆಯುತ್ತಿಲ್ಲ ಎಂದು ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಯಾದಗಿರಿಯಿಂದ 190 ಕಿಮೀ ಕ್ರಮಿಸಿದ ಸಾರಿಗೆ ನೌಕರರ ಸೈಕಲ್ ಜಾಥಾ – ನಾಳೆ ಬೀದರ್‌ನಲ್ಲಿ ಸಮಾವೇಶ
ಇಂದು 90ಕಿಮೀ ಕ್ರಮಿಸಿದ ಸಾರಿಗೆ ನೌಕರರ ಸೈಕಲ್ ಜಾಥಾ- ಮಾನ್ವಿಯಲ್ಲಿ ವಾಸ್ತವ್ಯ
ಅ.27ರಂದು ಕಲಬುರಗಿಯಲ್ಲಿ ಮಹಾ ಸಮಾವೇಶ ಆಯೋಜಿಸಿದ ಬಳಿಕ ಜಾಥಾವು ವಿಜಯಪುರದತ್ತ ಹೊರಟಿತ್ತು. ಕೇವಲ ಎರಡೆ ದಿನದಲ್ಲಿ 160 ಕಿಮಿ ಕ್ರಮಿಸಿದ್ದು, ಈವರೆಗೂ 700ಕ್ಕೂ ಹೆಚ್ಚು ಕಿಮೀ ಸೈಕಲ್ ಜಾಥಾ ಕ್ರಮಿಸಿದೆ. ಸದ್ಯ ವಿಜಯಪುರದಲ್ಲಿ ಇದ್ದು, ನಾಳೆ ಬಾಗಲಕೋಟೆಯತ್ತ ಜಾಥಾ ಹೊರಡಲಿದೆ.
ಇನ್ನು ಯಾದಗಿರಿ ಜಿಲ್ಲೆಯಿಂದ ಅ.17ರಂದು 190 ಕಿಮೀ ದೂರದ ಬೀದರ್‌ನತ್ತ ಜಾಥಾ ಹೊರಟಿತ್ತು. ಅ.20ರಂದು ಬೀದರ್ ತಲುಪಿತ್ತು. ಅ.21ರಂದು ಬೀದರ್‌ನಲ್ಲಿ ಜಾಗೃತಿ ಸಮಾವೇಶ ಮಾಡಿ ಬಳಿಕ ಬೀದರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ರಾಯಚೂರು: ಸಾರಿಗೆ ನೌಕರರ ಸೈಕಲ್ ಜಾಥಾ – ಡಿಸಿಗೆ ಮನವಿ, ಯಾದಗಿರಿಯತ್ತ ಪಯಣ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಮ್ಮಿಕೊಂಡಿರುವ ಈ ಬೃಹತ್ ಸೈಕಲ್ ಜಾಥಾ ಇಂದಿಗೆ 20ನೇ ದಿನ ಪೂರೈಸಿದೆ. ಇನ್ನು ಈಗಾಗಲೇ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಜಾಥಾ ಯಶಸ್ವಿಯಾಗಿದ್ದು, ಮುಂದೆ ಸಾಗುತ್ತಿದೆ.
6ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಸೈಕಲ್ ಜಾಥಾ – ಇಂದು ರಾಯಚೂರು ಡಿಸಿ ಮೂಲಕ ಸರ್ಕಾರಕ್ಕೆ ಮನವಿ