ಬೆಂಗಳೂರು: ಅಗ್ರಿಮೆಂಟ್ ಬೇಡ ಸಮಾನ ವೇತನ ಬೇಕು ಎಂಬ ಕೂಗು ಸಾರಿಗೆ ಸಂಘಟನೆಗಳ ಜಂಟಿ ಸಮಿತಿಯಲ್ಲಿ ಕೇಳಿ ಬಂದಿದ್ದು, ಗದ್ದಲದ ನಡುವೆ ಕೂಟದ ಪದಾಧಿಕಾರಿಗಳು ಹೊರ ಬಂದ ಘಟನೆ ನಡೆಯಿತು.
ನಮಗೆ 4 ವರ್ಷಕ್ಕೊಮ್ಮೆ ಅಗ್ರಿಮೆಂಟ್ ಎಂಬ ಭೂತದ ಹೆಸರೇಳಿಕೊಂಡು ನೌಕರರನ್ನು ವಜಾ, ವರ್ಗಾವಣೆ ಮತ್ತು ಅಮಾನತು ಮಾಡುವುದರಿಂದ ನಾವು ಈಗಾಗಲೇ ಬೇಸತ್ತಿಹೋಗಿದ್ದೇವೆ ಆದ್ದರಿಂದ ಅಗ್ರಿಮೆಂಟ್ ಬೇಕು ಎಂದರೆ ನಾವು ಅದನ್ನು ಒಪ್ಪುವುದಿಲ್ಲ ಎಂದು ಕೂಟದ ಪದಾಧಿಕಾರಿಗಳು ಹೇಳಿದರು.
ಹಾಗಿದ್ದರೆ ನೀವು ಜಂಟಿ ಸಮಿತಿಯಿಂದ ಹೊರಹೋಗಬಹುದು ಎಂದು ಉಳಿದ ಕೆಲ ಸಂಘಟನೆಗಳ ಪದಾಧಿಕಾರಿಗಳು ಸಮಲಹೆ ನೀಡಿದರು. ಅದರಿಂದ ಕೂಟದ ಪದಾಧಿಕಾರಿಗಳು ಅಗ್ರಿಮೆಂಟ್ ವಿರೋಧಿ ಹೊರ ನಡೆದರು.