NEWSನಮ್ಮಜಿಲ್ಲೆನಮ್ಮರಾಜ್ಯ

ಹುತಾತ್ಮ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರವೂ ಇಲ್ಲ, ಇರುವವರಿಗೆ ಕಾನೂನಾತ್ಮಕ ಪಗಾರವೂ ಇಲ್ಲ- ಇವು ಕಿತ್ತುತಿನ್ನುವ ರಣಹದ್ದುಗಳಲ್ಲದೆ ಮತ್ತೇನು..!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಹೀಗೆ ಕಾಣಿಸಿಕೊಂಡ ಕೊರೊನಾ ವೇಳೆ ಕರ್ತವ್ಯ ನಿರ್ವಹಿಸಿ ಹುತಾತ್ಮರಾದ ಸಾರಿಗೆ ಸೇನಾನಿಗಳಿಗೆ ಈವರೆಗೂ 30 ಲಕ್ಷ ರೂ. ಕೋವಿಡ್‌ ಪರಿಹಾರ ನೀಡಿಲ್ಲ.

ಈ ಬಗ್ಗೆ ಲಜ್ಜೆಗೆಟ್ಟ ಸಾರಿಗೆ ಕಾರ್ಮಿಕರ ಸಂಘಟನೆಗಳು ಎಂದು ಹೇಳಿಕೊಂಡು ನೌಕರರ ಲೂಟಿ ಮಾಡುತ್ತಿರುವ ಈ ಸಂಘಟನೆಗಳ ಮುಖಂಡರು ಈವರೆಗೂ ಒಂದೇ ಒಂದು ಮಾತನ್ನು ಸಹ ಸರ್ಕಾರಕ್ಕಾಗಲಿ ಅಥವಾ ನಿಗಮಗಳ ಆಡಳಿತ ಮಂಡಳಿಗಾಗಲಿ ಹೇಳಿಲ್ಲ. ಇನ್ನು ಹೇಳಿದ್ದರೂ ತಮ್ಮ ಬೇಳೆ ಬೇಯಿಸಿಕೊಳ್ಳುವ ರೀತಿಯಲ್ಲಿ ಹೇಳಿದ್ದಾರೆ ಅಷ್ಟೆ.

ನಿಜವಾಗಲು ಈ ಸಂಘಟನೆಗಳಿಗೆ ನೌಕರರ ಸಮಸ್ಯೆ ನೀಗಿಸಬೇಕು. ಕೊರೊನಾಕ್ಕೆ ಬಲಿಯಾದ ನೌಕರರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂಬ ಧ್ಯೇಯ ಇದ್ದಿದ್ದರೆ ಈಗಾಗಲೇ ಕೊರೊನಾದಿಂದ ಮೃತಪಟ್ಟ 114ಕ್ಕೂ ಹೆಚ್ಚು ಸಾರಿಗೆ ನೌಕರರ ಕುಟುಂಬಗಳಿಗೆ ಈವರೆಗೂ ಸರ್ಕಾರ ಬಿಡುಗಡೆ ಮಾಡದ ಪರಿಹಾರ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಉಪವಾಸ ಸತ್ಯಾಗ್ರಹ ಕೂರುವ ಮನಸ್ಸು ಮಾಡುತ್ತಾರೆಯೇ?

ಇನ್ನು ಗರಿಗರಿಯಾದ ಬಿಳಿ ವಸ್ತ್ರ ಧರಿಸಿ ಫೋಟೋಗಳಿಗೆ ಪೋಸ್‌ ಕೊಡುವ ಈ ಲಜ್ಜೆಗೆಟ್ಟ ಕೆಲ ಸಾರಿಗೆ ಸಂಘಟನೆಗಳ ಮುಖಂಡರು. ಈ ಕಾರ್ಮಿಕರಿಂದಲೇ ದೇಣಿಗೆ ಸಂಗ್ರಹಿಸಿ ತಮ್ಮ ಜೇಬು ತುಂಬಿಸಿಕೊಂಡು ನೌಕರರನ್ನು ಬಲಿಪಶುಗಳಾಗಿ ಮಾಡುತ್ತಿದರುವುದು ಇನ್ನು ಗುಟ್ಟಾಗಿ ಉಳಿದಿದೆಯೇ? ಇವರ ಹೋರಾಟ ಏನು ಎಂಬುದನ್ನು ಈ ಮುಖಂಡರ ಹೇಳಿಕೆಗಳು ಸಾಕ್ಷೀಕರಿಸುತ್ತಿಲ್ಲವೆ?

ನಾವು ನೌಕರರ ಪರ ಇದ್ದೇವೆ ಎಂದು ಹೇಳುವ ಇವರಿಗೆ ನೌಕರರು ಮತ್ತು ಅವರ ಕುಟುಂಬಗಳು ನೆಮ್ಮದಿಯಿಂದ ಅದು ಕಾನೂನಾತ್ಮಕವಾಗಿ ಬರಬೇಕಿರುವ ಸೌಲಭ್ಯಗಳನ್ನು ಪಡೆದು ಜೀವಿಸಲಿ ಎಂಬ ಕಾಳಜಿ ಇದ್ದರೆ ಈಗಲಾದರೂ 114ಕ್ಕೂ ಹೆಚ್ಚು ಕಟುಂಬಗಳಿಗೆ ಕೊರೊನಾ ಪರಿಹಾರ 30 ಲಕ್ಷ ರೂಪಾಯಿಯನ್ನು ಕೊಡಿಸಲು ಮೀನಮೇಷ ಎಣಿಸದೆ ಮುಂದೆ ಬರಬೆಕಲ್ಲವೇ?

ಅಂದರೆ, ಇವರದು ನರಿ ಬುದ್ಧಿ. ತಾವು ಚೆನ್ನಾಗಿದ್ದರೆ ಸಾಕು. ಅದಕ್ಕೆ ಕೆಲ ಭ್ರಷ್ಟ ಅಧಿಕಾರಗಳು ಸಾಥ್‌ ನೀಡುತ್ತಾರೆ. ಆ ಅಧಿಕಾರಿಗಳನ್ನು ಸುಮ್ಮನೆ ಬಿಟ್ಟರೆ ಸಾಕು ಅವರಿಂದಲೂ ನಮಗೆ ಎಂಜಿಲು ಸಿಗುತ್ತದೆ. ನಮ್ಮ ಕೆಲಸವೂ ಆಗುತ್ತದೆ ಅಲ್ಲವೇ? ಇನ್ನು ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಇರುವ ಈ ನೌಕರರಿಂದ ನಮಗೆ ದೇಣಿಗೆ ಬಿಟ್ಟರೆ ಇನ್ನೇನು ಪ್ರಯೋಜವಿದೆ.

ಯಾರನ್ನಾದರೂ ವರ್ಗಾವಣೆ ಮಾಡಿಸುವ ಅಥವಾ ಮಾಡುವ ಅಧಿಕಾರ ಇದೆಯೇ? ಇಲ್ಲ. ಅಂದಮೇಲೆ ನಾವು ಹೇಳಿದಂತೆ ಕೇಳಿಕೊಂಡು ಬಿದ್ದಿರುವ ಈ ನೌಕರರನ್ನು ನಾವು ಮನೆಯಲ್ಲಿ ಸಾಕಿದ ನಾಯಿಯ ರೀತಿಯಲ್ಲೇ ನೋಡಿಕೊಳ್ಳಬೇಕು ಅಲ್ಲವೇ ಎಂಬ ಅಜಂಡ ಇಟ್ಟುಕೊಂಡು ದುರುದ್ದೇಶದಿಂದ ಕಳೆದ ಹತ್ತಾರು ವರ್ಷಗಳಿಂದಲೂ ನೌಕರರನ್ನು ವಂಚಿಸಿಕೊಂಡು ಬಂದಿದ್ದಾರೆ. ಈಗಲೂ ಅದೇ ಕುತಂತ್ರ ಬುದ್ಧಿಯನ್ನು ಅನುಸರಿಸುತ್ತಿದ್ದಾರೆ.

ಹೀಗಾಗಿ ಸಾರಿಗೆ ನೌಕರರು ಇಂಥ ಕುತಂತ್ರಿಗಳ ಮಾತಿಗೆ ಮರುಳಾಗದೆ. ನಿಮ್ಮ ಪರವಾದ ನಿಮ್ಮದೇ ಸಂಘಟನೆಯನ್ನು ಬೆಂಬಲಿಸುವ ಮೂಲಕ ನಿಮ್ಮ ಏಳಿಗೆಗೆ ನೀವೆ ಬುನಾದಹಾಕಿಕೊಳ್ಳಬೇಕು. ಅದನ್ನು ಬಿಟ್ಟು ಇಂಥವರ ಸಹವಾಸವನ್ನು ಮುಂದುವರಿಸಿದರೆ ಈ ಬಾರಿಯೂ ನಿಮ್ಮ ಕೈಗೆ ದೊಡ್ಡ ಚೊಂಬು ಕೊಟ್ಟು ಅಷ್ಟು ಸಾಲದು ಎಂಬಂತೆ ಹಣೆಗೆ ಮೂರು ನಾಮವನ್ನೂ ಹಾಕಿ ಬೀದಿಯಲ್ಲೇ ಬಿಟ್ಟಿರುತ್ತಾರೆ.

ಅಷ್ಟೇ ಅಲ್ಲ, ಆ ಚೊಂಬಿಗೆ ಬೀಳುವ ಕಾಸನ್ನು ಇವರೆ ಎತ್ತಿಕೊಂಡು ದರ್ಬಾರ್‌ ಮಾಡುತ್ತಾರೆ. ಇದರ ಬಗ್ಗೆ ಎಚ್ಚರವಾಗಿರಿ. ನಿಮ್ಮ ಜ್ಞಾನವನ್ನು ಸಂಕುಚಿತಮಾಡಿಕೊಳ್ಳಬೇಡಿ. ನೀಚ ಸಂಘಟನೆಗಳ ಮುಖಂಡರ ಮಾತಿಗೆ ಮರುಳಾಗಬೇಡಿ. ಕೊರೊನಾ ವೇಳೆ ಕರ್ತವ್ಯ ನಿರ್ವಹಿಸಿ ಮಡಿದ ನಿಮ್ಮ ಸಹೋದ್ಯೋಗಿಗಳ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ಕೊಡಿಸಲು ನೀವು ನಮ್ಮದೇ ಸಂಘಟನೆಗೆ ಶಕ್ತಿತುಂಬುವ ಮೂಲಕ ಹೋರಾಟವನ್ನು ತೀವ್ರಗೊಳಿಸಿ.

ಆ ಹೋರಾಟ ಹೇಗಿರಬೇಕು ಎಂದರೆ ಇಡೀ ಸರ್ಕಾರ ನಿಮ್ಮ ಹೋರಾಟಕ್ಕೆ ಶರಣಾಗಿ ಕಾನೂನಾತ್ಮಕವಾದ ನ್ಯಾಯ ಕೊಡಲು ಮುಂದೆ ಬರಬೇಕು. ಅಲ್ಲದೆ ತಕ್ಷಣ ಕೊರೊನಾ ಪರಿಹಾರ 30 ಲಕ್ಷ ರೂಪಾಯಿಯನ್ನು ಬಿಡಗಡೆ ಮಾಡಿ ಮೃತರ ಕುಟುಂಬದವರಿಗೆ ಪರಿಹಾರ ಸಿಗುವಂತಾಗಬೇಕು. ಇಲ್ಲ ಈ ಸಂಘಟನೆಗಳನ್ನು ನಂಬಿದರೆ ಇದ್ದಲೇ ಸವೆದು ಹೋಗುತ್ತೀರ ಜೋಕೆ.

ಸಾರಿಗೆ ನೌಕರರ ಮನದಾಳ: ನಮ್ಮ ಸಾರಿಗೆ ಸಂಸ್ಥೆ ನೌಕರರಲ್ಲಿ ಒಂದು ವಿನಂತಿ. ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಎಂಬ ಮಹಾಮಾರಿಯ ಕಾಯಿಲೆಗೆ ಪ್ರಯಾಣಿಕರ ಸೇವೆಯೇ ಜನಾರ್ದನ ಸೇವೆ, ದೇವರ ಸೇವೆ ಎಂದು ಕೆಲಸ ಮಾಡಿದಂತಹ ನಮ್ಮ ಸಾರಿಗೆ ಕಾರ್ಮಿಕರು ಕೋವಿಡ್ ಎಂಬ ಮಾರಾಮಾರಿ ಸಂಕ್ರಾಮಿಕ ರೋಗಕ್ಕೆ ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಆ ಪ್ರಾಣವನ್ನು ಲೆಕ್ಕಿಸದೆ ತಮ್ಮ ಕುಟುಂಬಗಳ ಸಂತೋಷವನ್ನೂ ಬದಿಗಿಟ್ಟು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ.

ಅಂತಹ ಕಾರ್ಮಿಕರಿಗೆ ಸರ್ಕಾರದ ಆದೇಶದಂತೆ 30 ಲಕ್ಷ ಹಣ ಕೊಡಬೇಕು. ಆದರೆ ಇನ್ನೂ ಕೂಡ ಪ್ರಾಣ ಕಳೆದುಕೊಂಡ ಕಾರ್ಮಿಕರ ಕುಟುಂಬಕ್ಕೆ ಬಂದಿಲ್ಲ. ಜೀವಂತವಾಗಿರು ನಾವು ಪ್ರಾಣವನ್ನು ಕಳೆದುಕೊಂಡಂತಹ ನಮ್ಮ ಸಹೋದ್ಯೋಗಿಗಳ ಕುಟುಂಬಕ್ಕೆ ಪರಿಹಾರ ಕೊಡಿಸಲು ಪಣತೊಡೋಣ. ಇದಕ್ಕೆ ನಮ್ಮದೇ ಸಂಘಟನೆಗೆ ಬಲ ತುಂಬುವ ಕೆಲಸ ಮಾಡೋಣ. ನಮ್ಮ ವೈಯಕ್ತಿ ದ್ವೇಷವನ್ನು ಬದಿಗಿಟ್ಟು ನಾವೆಲ್ಲರೂ ಒಂದಾಗಿ ಸಾಗರದ ಅಲೆಯಂತೆ ನುಗ್ಗೋಣ. ಈಗಾಗಲೇ ಯೋಚನೆಯಲ್ಲೇ 2 ವರ್ಷ ಕಳೆದಿದ್ದೇವೆ ಇನ್ನು ಯೋಚನೆ ಮಾಡಲು ಸಮಯವಿಲ್ಲ. ಹೀಗಾಗಿ ನಾವು ಎಚ್ಚರಗೊಳ್ಳುವ ಸಮಯ ಬಂದಿದೆ ಎಚ್ಚರರಾಗೋಣ. – ಸಮಸ್ತ ಸಾರಿಗೆ ನೌಕರರು.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ