NEWSನಮ್ಮಜಿಲ್ಲೆನಮ್ಮರಾಜ್ಯ

₹35 ಟಿಕೆಟ್‌ ಪಡೆದು ಓವರ್‌ಟ್ರಾವಲ್‌ ಮಾಡಿದ್ದು ಯುವತಿ- ತನಿಖಾ ಸಿಬ್ಬಂದಿ ಮೆಮೋ ಕೊಟ್ಟಿದ್ದು ಮಾತ್ರ ನಿರ್ವಾಹಕರಿಗೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಓವರ್‌ಟ್ರಾವಲ್‌ ಮಾಡಿಕೊಂಡು ಬಂದು ತಪ್ಪು ಮಾಡಿದ ಮಹಿಳಾ ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಳ್ಳುವ ಬದಲು, ಬಸ್‌ ಹತ್ತಿದ ಸ್ಥಳದಿಂದ ಇಳಿಯಬೇಕಾದ ನಿಲ್ದಾಣದವರೆಗೂ 35 ರೂಪಾಯಿಯ ಟಿಕೆಟ್‌ ಕೊಟ್ಟ ನಿರ್ವಾಹಕರ ವಿರುದ್ಧವೇ ಎನ್‌ಐಎನ್‌ಸಿ ಮಾಡಿ ತನಿಖಾ ಸಿಬ್ಬಂದಿ ಮೆಮೋ ಕೊಟ್ಟಿರುವುದು ನೋಡಿದರೆ ಇಲ್ಲಿ ರಕ್ಷಕರೆ ಭಕ್ಷಕರಾಗಿದ್ದಾರೆ ಎಂಬುದನ್ನು ಸಾರಿ ಹೇಳುತ್ತಿದೆ.

ಇಂದು ನ.9ರ ಬೆಳಗ್ಗೆ 9.15 ಸಮಯದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಘಟಕ -13ರ ವೋಲ್ವೋ ಬಸ್‌ಗೆ ಕಾಡುಗೋಡಿ ನಿಲ್ದಾಣದಲ್ಲಿ ಬಸ್‌ ಹತ್ತಿದ ಯುವತಿಯೊಬ್ಬರು ಕಾಡುಬಿಸನಹಳ್ಳಿಗೆ 35 ರೂಪಾಯಿ ಕೊಟ್ಟು ಟಿಕೆಟ್‌ ಪಡೆದುಕೊಂಡಿದ್ದಾರೆ.

ಬಳಿಕ ಅವರು ಕಾಡುಬಿಸನಹಳ್ಳಿ ಬಸ್‌ನಿಲ್ದಾಣದಲ್ಲಿ ಇಳಿಯದೆ ನ್ಯೂ ಹಾರಿಜನ್‌ ಕಾಲೇಜಿನ ಬಳಿ ಇಳಿದಿದ್ದಾರೆ. ಈ ವೇಳೆ ತನಿಖಾ ಸಿಬ್ಬಂದಿಗಳು ತನಿಖಾ ಸ್ಥಳವಲ್ಲದಿದ್ದರೂ ತನಿಖೆಗೆ ಬಸ್‌ ಹತ್ತಿದ್ದಾರೆ. ಆಗ ಓವರ್‌ ಟ್ರಾವಲ್‌ ಮಾಡಿಕೊಂಡು ಬಂದ ಯುವತಿ ಸಿಕ್ಕಿಬಿದ್ದಿದ್ದಾಳೆ.

ಈ ಸಮಯದಲ್ಲಿ ನಿರ್ವಾಹಕಿ ಗುಂಡಮ್ಮ ಅವರು ನೀವು ಏಕೆ ಇಳಿಯಬೇಕಾದ ಸ್ಥಳದಲ್ಲಿ ಇಳಿಯಲಿಲ್ಲ. ಇದರಿಂದ ನಮಗೆ ಈಗ ತೊಂದರೆಯಾಗುತ್ತಿದೆ ನೋಡಿ ಎಂದು ಆ ಯುವತಿಯನ್ನು ಕೇಳಿದ್ದಾರೆ.

ಯುವತಿ ಬಸ್‌ ಹತ್ತಿದ ನಿಲ್ದಾಣದಿಂದ ಇಳಿಯುವವರೆಗೂ ಮೊಬೈಲ್‌ ಪೋನ್‌ನಲ್ಲಿ ಮಾತನಾಡಿಕೊಂಡೆ ಬಂದಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ ತಾವು ಎಲ್ಲಿ ಇಳಿಯಬೇಕು ಎಂಬುದನ್ನೆ ಮರೆತು ಮುಂದಿನ ನಿಲ್ದಾಣದವರೆಗೂ ಬಂದಿದ್ದಾರೆ.

ಈ ವೇಳೆ ಯುವತಿಯನ್ನು ನಿರ್ವಾಹಕರು ಕೇಳಿದ್ದಕ್ಕೆ ತನಿಖಾ ಸಿಬ್ಬಂದಿ‌ ಎಸ್‌.ರಾಣಿ ಅವರು ಓವರ್‌ಟ್ರಾವಲ್‌ ಮಾಡಿಕೊಂಡ ಬಂದಿದ್ದ ಯುವತಿಯನ್ನು ಪ್ರಶ್ನಿಸುವ ಬದಲಿಗೆ ನಿರ್ವಾಹಕರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

ಅಲ್ಲದೆ ಓವರ್‌ಟ್ರಾವಲ್‌ ಮಾಡಿಕೊಂಡು ಬಂದು ತಪ್ಪು ಮಾಡಿದ ಯುವತಿಯ ಬಳಿ ನಯವಾಗಿ ಮಾತನಾಡಿ ಆಕೆ ತಪ್ಪೇ ಮಾಡಿಲ್ಲ ಎಂಬಂತೆ ವರ್ತಿಸಿದ್ದಾರೆ. ಬಳಿಕ ಆಕೆಗೆ 200 ರೂಪಾಯಿ ದಂಡಹಾಕಿದ್ದಾರೆ. ಆ ಬಳಿಕ ನಿರ್ವಾಹಕರಿಂದಲೂ ಮತ್ತೊಬ್ಬ ತನಿಖಾ ಸಿಬ್ಬಂದಿ ಎಟಿಐ ಬಸವರಾಜು ಅವರು 200 ರೂಪಾಯಿ ವಸೂಲಿ ಮಾಡಿದ್ದಾರೆ.

ಇಲ್ಲಿ ಓವರ್‌ಟ್ರಾವಲ್‌ ಮಾಡಿಕೊಂಡು ಬಂದು ತಪ್ಪು ಮಾಡಿದ್ದು ಯುವತಿ. ಅದಕ್ಕೆ ದಂಡವನ್ನು ಹಾಕಿ ಆಕೆಯನ್ನು ಕಳಿಸಿದ್ದಾರೆ ಓಕೆ. ಆದರೆ ಏನು ತಪ್ಪೇಮಾಡದ ನಿರ್ವಾಹಕರಿಗೆ ಎನ್‌ಐಎನ್‌ಸಿ ಬರೆದು ಏಕೆ ಮೆಮೋ ಕೊಟ್ಟಿದ್ದಾರೆ. ಜತೆಗೆ 200 ರೂಪಾಯಿ ಏಕೆ ವಸೂಲಿಮಾಡಿದ್ದಾರೆ. ಇನ್ನು ಮುಂದುವರಿದು ತನಿಖಾ ಸಿಬ್ಬಂದಿ ರಾಣಿ ಅವರು ನಿರ್ವಾಹಕರನ್ನು ಸಾರ್ವಜನಿಕರ ಎದುರೆ ನಿಂದಿಸಿದ್ದು ಸರಿಯೇ?

ಹೀಗೆ ಸಾರ್ವಜನಿಕರ ಎದುರೇ ತಮ್ಮ ಸಹೋದ್ಯೋಗಿಯನ್ನು ನಿಂದಿಸಿದರೆ ಸಾರ್ವಜನಿಕರಿಗೆ ಕೆಟ್ಟ ಸಂದೇಶ ರವಾನೆ ಆಗುವುದಿಲ್ಲವೇ? ಜತೆಗೆ ನಿರ್ವಾಹಕರನ್ನು ಜನರು ಕೀಳು ಭಾವನೆಯಿಂದ ನಡೆಸಿಕೊಳ್ಳುವುದಿಲ್ಲವೇ? ಇನ್ನು ನಾವು ನಿಮಗಿಂತ ಅಧಿಕಾರದಲ್ಲಿ ಮೇಲಿದ್ದೇವೆ ಎಂದು ಅಧೀನ ನೌಕರರನ್ನು ತುಚ್ಯವಾಗಿ ಕಾಣುವುದರಿಂದ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಾರೆ ಇವರು.

ಇನ್ನು ತನಿಖಾ ಸ್ಥಳವಲ್ಲದ ಸ್ಥಳಕ್ಕೆ ಬಂದು ಬಸ್‌ ತಪಾಸಣೆ ಮಾಡಿದ್ದು ಅಲ್ಲದೆ ನಿರ್ವಾಹಕರಿಂದ 200 ರೂ. ವಸೂಲಿ ಮಾಡಿ, ಮೆಮೋಕೂಡ ಕೊಟ್ಟಿದ್ದು ಅಲ್ಲದೆ ಅವರ ವಿರುದ್ಧ ಇಲ್ಲ ಸಲ್ಲದ ದೂರನ್ನು ಮೆಮೋದಲ್ಲಿ ದಾಖಲಿಸುತ್ತಾರೆ ಎಂದರೆ ಈ ತಪಾಸಣಾ ಸಿಬ್ಬಂದಿಯ ಉದ್ದೇಶವೇನು ಎಂಬುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹೀಗಾಗಿ ತಪಾಸಣೆ ವೇಳೆ ತಪಾಸಣಾ ಸಿಬ್ಬಂದಿಗಳು ಹಾಕಿಕೊಂಡಿರುವ ಬಾಡಿಕ್ಯಾಮೆರಾ ಮತ್ತು ಬಸ್‌ನಲ್ಲಿರುವ ಕ್ಯಾಮೆರಾವನ್ನು ಕೂಲಂಕಶವಾಗಿ ಪರಿಶೀಲಿಸಿ ಇಲ್ಲಿ ಯಾರು ತಪ್ಪುಮಾಡಿದ್ದಾರೋ ಅವರಿಗೆ ಸಂಸ್ಥೆಯ ನಿಯಮಾವಳಿ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳು ಶಿಕ್ಷೆ ನೀಡಬೇಕು. ಕಾರಣ ಅಮಾಯಕರು ಶಿಕ್ಷೆಗೆ ಒಳಗಾಗಬಾರದು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ