ಬೆಂಗಳೂರು: ಆಯುಷ್ಮಾನ್ ಯೋಜನೆಯಡಿ 5 ಲಕ್ಷ ರೂ.ವರಗೆ ಬಿಎಂಟಿಸಿಯ 35 ಸಾವಿರಕ್ಕೂ ಹೆಚ್ಚಿನ ನೌಕರರಿಗೆ 5 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯವನ್ನು ಘೋಷಿಸಲಾಗಿದೆ. ಈ ಯೋಜನೆಯಡಿ ನೌಕರರು ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಹೀಗಾಗಿ ಇನ್ಮುಂದೆ ಮಹಾನಗರ ಸಾರಿಗೆ ಸಂಸ್ಥೆ ನೌಕರರು ಚಿಕಿತ್ಸೆ ಸಿಗುತ್ತಿಲ್ಲ ಎಂದು ಆಸ್ಪತ್ರೆಗೆ ಅಲೆಯಬೇಕಿಲ್ಲ. ಬಿಎಂಟಿಸಿ ಎಲ್ಲ ಸಿಬ್ಬಂದಿಗೂ ಆರೋಗ್ಯ ರಕ್ಷಾ ಯೋಜನೆಯ ಸೌಲಭ್ಯ ನೀಡಲಿದೆ. ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗೆ ನೀಡುತ್ತಿರುವ ಆಯುಷ್ಮಾನ್ ಯೋಜನೆಯಡಿಯ 5 ಲಕ್ಷ ಆರೋಗ್ಯ ವಿಮೆವನ್ನು ನೌಕರರು ಅವರ ಕುಟುಂಬದವರು ಪಡೆಯಬಹುದು.
ಈ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದು, ಆಯುಷ್ಮಾನ್ ಯೋಜನೆಯಡಿಯಲ್ಲಿ ಸಾಸ್ತಾ ಎಂಬ ಯೋಜನೆ ತರಲು ಸಾರಿಗೆ ನಿಗಮ ಮುಂದಾಗಿದೆ. ನಿಗಮದ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಯಾವುದೇ ಅನಾರೋಗ್ಯಕ್ಕೊಳಗಾದರೂ ಈ ಯೋಜನೆಯಡಿ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಈ ಬಗ್ಗೆ ಆರೋಗ್ಯ ಸಚಿವರು ಹಾಗೂ ಇಲಾಖೆ ಜತೆ ಈಗಾಗಲೇ ಬಿಎಂಟಿಸಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ದೀರ್ಘಕಾಲಿಕ ರೋಗ, ಹೃದಯ ಬೈಪಾಸ್ ಸರ್ಜರಿ ಸೇರಿ ಕೆಲ ಕಾಯಿಲೆಗಳಿಂದ ಹಲವು ನೌಕರರು ಬಳಲುತ್ತಿದ್ದು, ಅವರೆಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಹಿನ್ನೆಲೆ ಆರೋಗ್ಯ ವಿಮೆ ಯೋಜನೆಗೆ ಬಿಎಂಟಿಸಿ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಸಾರಿಗೆ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆರೋಗ್ಯ ಯೋಜನೆ ಜಾರಿಗೆ ತರಲಾಗುತ್ತಿದೆ. ನೌಕರರ ಕುಟುಂಬವೊಂದಕ್ಕೆ ವಾರ್ಷಿಕ 5 ಲಕ್ಷ ರೂ. ವರೆಗೆ ಆಸ್ಪತ್ರೆ ಖರ್ಚು ಭರಿಸಲಿದೆ ಈ ಯೋಜನೆ. ಚಾಲಕರು ಮತ್ತು ನಿರ್ವಾಹಕರು ಅತಿ ಹೆಚ್ಚು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಈ ಚಿಕಿತ್ಸೆ ಭಾಗ್ಯಕ್ಕೆ ನಿಗಮ ಮುಂದಾಗಿದೆ ಎಂದು ಹೇಳಿದ್ದಾರೆ.
ಆದರೆ, ನೌಕರರು ಈ ರೀತಿ ಮಾಡುವ ಬದಲಿಗೆ ಮನಗೂ ಸರ್ಕಾರಿ ನೌಕರರಿಗೆ ಇರುವಂತೆ ಕ್ಯಾಶ್‌ಲೆಸ್ ಚಿಕಿತ್ಸೆ ಸೌಲಭ್ಯವನ್ನು ಕಲ್ಪಿಸಿದರೆ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಈ ರೀತಿಯ ಜಾರಿಕೊಳ್ಳುವ ಅಥವಾ ನೌಕರರನ್ನು ದಿಕ್ಕುತಪ್ಪಿಸುವ ಯೋಜನೆಗಳನ್ನು ಮಾಡಿ ತಾತ್ಕಾಲಿಕ ಪರಿಹಾರ ಎಂಬಂತೆ ಘೋಷಣೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
ಒಟ್ಟಾರೆ ಚುನಾವಣೆ ಸಮೀಪದಲ್ಲೇ ಇರುವ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ನೌಕರರ ಮನ ಪರಿವರ್ತನೆ ಮಾಡಲು ಸರ್ಕಾರ ಈಗ ವಾಮ ಮಾರ್ವನ್ನು ಅನುಸರಿಸುತ್ತಿದೆ. ಆದರೆ ನೌಕರರಿಗೆ 202ರ ಜನವರಿ 1ರಿಂದಲಿಂದಲೇ ಜಾರಿ ಯಾಗಬೇಕಿರುವ ವೇತನ ಹೆಚ್ಚಳದ ಬಗ್ಗೆ ಮಾತ್ರ ತುಟಿ ಬಿಚ್ಚುತ್ತಿಲ್ಲ.
ಇದು ಮನೆ ಮಕ್ಕಳನ್ನೇ ಬಟ್ಟೆ ಬಿಚ್ಚಿ ಬೀದಿಲೀ ನಿಲ್ಲಿಸುವ ಕೆಲಸದಂತೆ ಈ ಸರ್ಕಾರ ತಮ್ಮ ನೌಕರರನ್ನು ಅತ್ಯಂತ ಕೀಳಾಗಿ ಈಗಲೂ ನಡೆಸಿಕೊಳ್ಳುತ್ತಿದೆ. ಇದನ್ನು ಬಿಟ್ಟು ಅವರಿಗೆ ನೀಡಬೇಕಿರುವ ಸೌಲಭ್ಯ ಮತ್ತು ವೇತನ ತಾರತಮ್ಯತೆಯನ್ನು ಹೋಗಲಾಡಿಸಲು ಮುಂದಾಗಬೇಕು ಎಂಬುವುದು ನಾಡಿನ ಜನರ ಅಭಿಪ್ರಾಯವಾಗಿದೆ.