NEWSನಮ್ಮರಾಜ್ಯವಿಡಿಯೋ

5ಸ್ಟಾರ್‌ ಹೋಟೆಲ್‌ಗಳ ಮೀರಿಸುವಂತಿದೆ BMTC  50ನೇ ಘಟಕ-  ಸಿಬ್ಬಂದಿ ಸ್ನೇಹಿ ಡಿಎಂ ನರಸಿಂಹ ರೆಡ್ಡಿ ನಡೆಗೆ ನೌಕರರು ದಿಲ್‌ಖುಷ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಒಂದಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ದೇವನಹಳ್ಳಿ ಘಟಕ – 50ರಲ್ಲಿ ನೌಕರರು ಮತ್ತು ಘಟಕದ ಕಚೇರಿ ಸಿಬ್ಬಂದಿ ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿದೆ.

ಇದು ಸಾಧ್ಯವಾಗಿದ್ದು, ಘಟಕ ವ್ಯವಸ್ಥಾಪಕ ಎಂ.ಎನ್‌.ನರಸಿಂಹ ರೆಡ್ಡಿ ಅವರ ನೌಕರ ಸ್ನೇಹಿ ಸ್ವಾಭಾವದಿಂದ. ನೌಕರರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಡ್ಯೂಟಿಯನ್ನು ಕೂಡ ವ್ಯವಸ್ಥಿತವಾಗಿ ಮಾಡಿಕೊಡುತ್ತಿದ್ದಾರೆ. ಅಲ್ಲದೆ ಲಂಚ ಎಂಬ ಪದ ಇಲ್ಲಿ ಸುಳಿಯದ ರೀತಿ ನೋಡಿಕೊಳ್ಳುತ್ತಿದ್ದಾರೆ.

ಹೌದು! ಈ ಘಟಕದ ವ್ಯವಸ್ಥಾಪಕರ ಇಚ್ಛಾಸಕ್ತಿ ಹಾಗೂ ಒಂದು ಘಟಕವನ್ನು ಯಾವ ಮಟ್ಟಿಗೆ ಇಟ್ಟುಕೊಳ್ಳಬಹುದು ಎಂಬುದಕ್ಕೆ ಇವರಿಗೆ ಇವರೇ ತಾಜಾ ನಿದರ್ಶನವಾಗಿ ನಿಂತಿದ್ದಾರೆ.

ಸಾರಿಗೆ ನಿಗಮಗಳಲ್ಲಿ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ಸುಲಿಗೆ ಮಾಡುವ ಅಧಿಕಾರಿಗಳೇ ಇದ್ದಾರೆ ಎಂಬುವುದಕ್ಕೆ ವಿರುದ್ಧವಾಗಿ ನಿಂತಿರುವ ನರಸಿಂಹ ರೆಡ್ಡಿ ಅವರು ಸಾರಿಗೆಯ ನಾಲ್ಕೂ ನಿಗಮಗಳ ಘಟಕಗಳಲ್ಲಿ ಮಾಡದ ಸತ್ಕಾರ್ಯವನ್ನು ಮಾಡಿ ನೌಕರರಲ್ಲೂ ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ.

ಲಂಚಮುಕ್ತ ಘಟವಾಗಿಸಿರುವ ಡಿಪೋ ಮ್ಯಾನೇಜರ್‌, ಘಟಕವನ್ನು ಯಾವುದೇ 5ಸ್ಟಾರ್‌ಹೋಟೆಲ್‌ಗಿಂತ ಕಡಿಮೆ ಇಲ್ಲ ಎಂಬ ನಿಟ್ಟಿನಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡಿದ್ದಾರೆ. ಶೌಚಾಲಯಗಳು ಕೂಡ 5ಸ್ಟಾರ್‌7ಸ್ಟಾರ್‌ಹೋಟಲ್‌ಗಳನ್ನು ಮೀರಿಸುವಂತೆ ಪಳಪಳ ಹೊಳೆಯುತ್ತಿವೆ. ಅಷ್ಟೇ ಅಲ್ಲ ಘಟಕದಲ್ಲಿ ನೌಕರರಿಗೆ ಕುಡಿಯುವುದಕ್ಕೆ ಶುದ್ಧವಾದ ನೀರಿನ ಸೌಲಭ್ಯವು ಇದೆ. ವಿಶ್ರಾಂತಿ ಪಡೆಯುವ ಕೊಠಡಿಗಳು ಸ್ವಚಂದವಾಗಿವೆ.

ಇನ್ನು ಕಚೇರಿಯನ್ನು ಕೂಡ ವ್ಯವಸ್ಥಿತವಾಗಿ ಇಟ್ಟುಕೊಂಡಿದ್ದು, ಕಚೇರಿ ಸಿಬ್ಬಂದಿಗಳು ಕೂಡ ಸ್ವಚ್ಛ ಮನಸ್ಸಿನವರಾಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ವ್ಯವಸ್ಥೆಯಲ್ಲಿ ಅವರು ಸರಿ ಇಲ್ಲ ಇವರು ಸರಿ ಇಲ್ಲ ಅನ್ನುವ ಬದಲು ನಾವು ಹೇಗೆ ಸರಿಯಾಗಿ ಮಾಡಿಕೊಂಡು ಹೋಗಬೇಕು ಎನ್ನುವುದಕ್ಕೆ ಬಿಎಂಟಿಸಿ ಘಟಕ – 50ರ ಘಟಕ ವ್ಯವಸ್ಥಾಪಕರು ಒಂದು ದೊಡ್ಡ ನಿದರ್ಶನವಾಗಿದ್ದಾರೆ.

ನಾಲ್ಕು ನಿಗಮಗಳ ಯಾವುದೇ ಘಟಕಗಳಲ್ಲಿ ಎಲ್ಲಿಯೂ ಕಾಣ ಸಿಗದ ಸ್ವಚ್ಛತೆ, ನೌಕರರ ಒಡನಾಡಿ ಹಾಗೂ ನೌಕರರಿಗೆ ಅವಶ್ಯವಾಗಿ ಬೇಕಾಗಿರುವ ಎಲ್ಲ ರೀತಿಯ ವ್ಯವಸ್ಥೆಗಳನ್ನು ಉತ್ತಮ ರೀತಿಯಲ್ಲಿ ಒದಗಿಸಿ ಕೊಟ್ಟಿರುವ ನರಸಿಂಹ ರೆಡ್ಡಿ ಅವರಿಗೆ ಸಮಸ್ತ 4 ನಿಗಮದ ನೌಕರರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸೋಣ ಎಂದು ನೌಕರರು ಶ್ಲಾಘಿಸಿದ್ದಾರೆ.

ಇನ್ನು ಪ್ರತಿ ಘಟಕಗಳಲ್ಲಿ ಇರುವಂತಹ ಘಟಕ ವ್ಯವಸ್ಥಾಪಕರು ಇವರ ರೀತಿಯಲ್ಲಿಯೇ ನೌಕರ ಸ್ನೇಹಿ ಹಾಗೂ ಸಂಸ್ಥೆ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶೀಸೋಣ. ಈ ಸಮಾಜದ ವ್ಯವಸ್ಥೆಯೊಳಗೆ ಕೆಟ್ಟವರು ಇರುವ ತರ ತುಂಬಾ ಒಳ್ಳೆಯ ಮನಸ್ಥಿತಿ ಇರುವವರು ಕೂಡ ಇರುತ್ತಾರೆ ಅನ್ನುವುದನ್ನು ಈ ಘಟಕ ವ್ಯವಸ್ಥಾಪಕರು ತೋರಿಸಿಕೊಟ್ಟಿದ್ದಾರೆ.

ಉತ್ತಮರನ್ನು ಪ್ರಸಂಶಿಸುವ ಕೆಲಸ ನಮ್ಮ ಸಾರಿಗೆ ನೌಕರರಿಂದ ಆಗಬೇಕಾಗಿದೆ. ಇತರರು ಇವರ ಮಾರ್ಗದಲ್ಲಿಯೇ ಉತ್ತಮ ರೀತಿಯಲ್ಲಿ ವ್ಯವಸ್ಥೆಯನ್ನು ಸರಿಪಡಿಸಿಕೊಂಡು ಹೋಗಲಿ ಎನ್ನುವುದು ಕೂಡ ಸಾರಿಗೆ ನೌಕರರ ಆಶಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ನೌಕರರು.

ಇದು ನನ್ನೊಬ್ಬನಿಂದ ಸಾಧ್ಯವಾಗಿದ್ದಲ್ಲ. ನಮ್ಮ ಟೀಂ ವರ್ಕ್‌ನಿಂದ ಈ ರೀತಿ ಸ್ವಚ್ಛ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ನಮ್ಮ ಎಂಡಿ ಮೇಡಂ ಸತ್ಯವತಿ ಅವರು ಸೇರಿದಂತೆ ಉನ್ನತ ಅಧಿಕಾರಿಗಳ ಸಹಕಾರದಿಂದ ಈ ಘಟಕವನ್ನು ಇಷ್ಟು ಸುಂದರವಾಗಿಸಲು ಸಾಧ್ಯವಾಗಿದೆ. ನಾವು ಯುವಕರಿದ್ದೇವೆ. ನಮ್ಮಿಂದ ಎಲ್ಲ ಸಾಧ್ಯ ಎಂಬುದನ್ನು ಘಟಕದ ಎಲ್ಲ ನೌಕರ, ಸಿಬ್ಬಂದಿಗಳು ತೋರಿಸಿಕೊಟ್ಟಿದ್ದಾರೆ. ಘಟಕ ಈ ರೀತಿ ಇಂದು ಇರುವುದಕ್ಕೆ ನನ್ನ ಜತೆ ಹೆಜ್ಜೆಹಾಕುತ್ತಿರುವ ಎಲ್ಲರನ್ನು ಅಭಿನಂದಿಸುತ್ತೇನೆ.

l ಎಂ.ಎನ್‌.ನರಸಿಂಹ ರೆಡ್ಡಿ, ಬಿಎಂಟಿಸಿ ದೇವನಹಳ್ಳಿ ಘಟಕ ವ್ಯವಸ್ಥಾಪಕರು

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ