NEWSದೇಶ-ವಿದೇಶನಮ್ಮಜಿಲ್ಲೆಸಂಸ್ಕೃತಿ

ರಾಮನ ಮೂರ್ತಿಗೆ ಶಿಲೆಕೊಟ್ಟವನಿಗೆ 80 ಸಾವಿರ ದಂಡ: ಮಾಡದ ತಪ್ಪಿಗೆ ಕಣ್ಣೀರು ಹಾಕುತ್ತಿರುವ ಗುತ್ತಿಗೆದಾರ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡು ಕೋಟ್ಯಂತರ ಭಕ್ತರು ಕೈ ಮುಗಿಯುತ್ತಿರುವ ರಾಮಲಲ್ಲಾ ಮೂರ್ತಿ ಹಿಂದೆ ಕಣ್ಣೀರ ಕಥೆಯೊಂದು ಬೆಳಕಿಗೆ ಬಂದಿದೆ. ಅಯೋಧ್ಯೆಗೆ ರಾಮಲಲ್ಲಾ ಶಿಲೆ ನೀಡಿದ ವ್ಯಕ್ತಿ ಈಗ ಕಣ್ಣೀರು ಹಾಕುತ್ತಿರುವುದು ಪ್ರಧಾನಿ ಅವರ ಬಂದಿಲ್ಲವೇ ಎಂಬುವುದು ಯಕ್ಷಪತ್ರಶ್ನೆಯಾಗಿದೆ.

ಹೌದು! ನೋಡಿ ರಾಮಲಲ್ಲಾ ಶಿಲೆ ನೀಡಿದ ವ್ಯಕ್ತಿಗೆ 80 ಸಾವಿರ ರೂಪಾಯಿ ದಂಡ ವಿಧಿಸುವ ಮೂಲಕ ಆತನ ವಿರುದ್ಧ ಗಣಿಗಾರಿಕೆ ಮಾಡಿರುವ ಆರೋಪವನ್ನು ಹೊರಿಸಲಾಗಿದೆ. ರಾಮನ ಮೂರ್ತಿಗಾಗಿ ಶಿಲೆ ಕೊಟ್ಟ ಗುತ್ತಿಗೆದಾರ ಶ್ರೀನಿವಾಸ್‌ಗೆ 80 ಸಾವಿರ ದಂಡ ವಿಧಿಸಲಾಗಿದೆ.

ಶ್ರೀನಿವಾಸ್ ಮೈಸೂರಿನ ಹಾರೋಹಳ್ಳಿ- ಗುಜ್ಜೇಗೌಡನಪುರ ಗ್ರಾಮದ ನಿವಾಸಿಯಾಗಿದ್ದು, ತನ್ನ ಹೆಂಡತಿಯ ಚಿನ್ನಾಭರಣಗಳನ್ನು ಅಡವಿಟ್ಟು ದಂಡ ಕಟ್ಟಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.

ಗಣಿಗಾರಿಕೆ ಮಾಡಿದ್ದಕ್ಕೆ ದಂಡ: ಇತ್ತ ಭೂ ಮಾಲೀಕ ರಾಮದಾಸ್ ಅವರು ಭೂಮಿ ಒಳಗಿದ್ದ ಬಂಡೆ ತೆಗೆಯುವಂತೆ ಶ್ರೀನಿವಾಸ್​ಗೆ ಗುತ್ತಿಗೆ ನೀಡಿದ್ದರು. ಅದರಂತೆಯೇ ಆ ಕಲ್ಲನ್ನು ಹೊರಕ್ಕೆ ತೆಗೆದು ಜಮೀನಿನ ಪಕ್ಕದಲ್ಲಿ ಇಟ್ಟಿದ್ದೆ. ಆ‌ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ಗಣಿಗಾರಿಕೆ ಅಂತ ಆರೋಪ ಮಾಡಿ 80 ಸಾವಿರ ರೂಪಾಯಿ ದಂಡವನ್ನು ನನ್ನಿಂದ ಕಟ್ಟಿಸಿಕೊಂಡಿದ್ದಾರೆ ಎಂದು ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ.

ಹೆಂಡತಿ ಚಿನ್ನ ಗಿರಿವಿಯಿಟ್ಟು ದಂಡ ಕಟ್ಟಿದೆ: ವರಮಹಾಲಕ್ಷ್ಮಿ ಹಬ್ಬದ ದಿನವೇ ಹೆಂಡತಿಯ ಚಿನ್ನಾಭರಣಗಳನ್ನು ಅಡವಿಟ್ಟಿದ್ದೇನೆ. ಚಿನ್ನ ಗಿರವಿಗೆ ಇಟ್ಟು ಇಲಾಖೆಗೆ ದಂಡ ಕಟ್ಟಿದ್ದೇನೆ. ರಾಮಲಲ್ಲಾ ಮೂರ್ತಿ ಆಗಿ ಅದು ಈಗ ರೂಪುಗೊಂಡಿದೆ. ನನಗೆ ಈವರಗೆ ಯಾರೂ ಸಹಾಯ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಶ್ರೀನಿವಾಸ್‌.

ರಾಮಲಲ್ಲಾ ವಿಗ್ರಹದ ಶಿಲೆಯನ್ನು ತೆಗೆದುಕೊಟ್ಟ ನನ್ನ ಕಷ್ಟ ಇನ್ನೂ ತೀರಿಲ್ಲ. ನನಗೂ ಯಾರಾದರೂ ಸಹಾಯ ಮಾಡುತ್ತಾರೆಯೇ ಎಂದು ಎದುರು ನೋಡುತ್ತಿದ್ದೇನೆ ಎಂದು ಗುತ್ತಿಗೆದಾರ ಶ್ರೀನಿವಾಸ್ ತನ್ನ ನೋವನ್ನು ತೋಡಿಕೊಂಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ