NEWSನಮ್ಮರಾಜ್ಯಸಂಸ್ಕೃತಿ

22ರ ಯುವಕನ ಜೊತೆ ಆರನೇ ಮದುವೆಯಾದ 20+18 ಆಂಟಿ

ಇವ್ನು ಇವಳೇ ಬೇಕು ಅಂತಾನೆ l ಅವ್ಳು ಇದೇ ಲಾಸ್ಟ್ ಮ್ಯಾರೇಜ್ ಎನ್ನುತ್ತಾಳೆ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಪ್ರೀತಿಯೋ ಮೋಹವೋ ಅಥವಾ ಕಾಮವೋ ಗೊತ್ತಿಲ್ಲ. ಜತೆಗೆ ಜಾತಿ-ಪಂಥಿಯ ಬೇಲಿಯೂ ಇಲ್ಲದ! ವಯಸ್ಸಿನ ಅಂತವರವೂ ಪರಿಗಣನೆಗೆ ಬಾರದ ಈ ಪ್ರೇಮಪಾಸಕ್ಕೆ ಸಿಲುಕಿದವರಿಗೆ ಅವರು ಹೇಗಿದ್ದರೂ ಚಂದಾನೆ.

ಈ ಸಾಲುಗಳಲ್ಲಿ ಒಂದಷ್ಟು ಪ್ರಾಸ ಇದೇಯೋ ಇಲ್ಲವೋ ಅದು ಮನಗೆ ಗೊತ್ತಿಲ್ಲ. ಆದರೂ ಒಂದು ಸತ್ಯಘಟನೆಯ ಬಗ್ಗೆ ಇಲ್ಲಿ ಹೇಳಹೊರಟಿರುವುದಂತೂ ನೂರಕ್ಕೇ ನೂರು ನಿಜವಾದದ್ದು, ಅದೇನೆಂದರೆ ಚಿಕ್ಕಮಗಳೂರಿನಲ್ಲಿ 38ರ ಆಂಟಿಯೊಬ್ಬಳು 22 ವರ್ಷದ ಯುವಕನನ್ನ ಆರನೇ ಗಂಡನಾಗಿ ಸ್ವೀಕರಿಸಿದ್ದಾಳೆ. ಆದರೆ ಆಕೆಗೆ ಈತನೇ ಬೇಕು ಎನ್ನುವುದು ಮುಖ್ಯವಲ್ಲ. ಆದರೆ ಈತ ಅವಳೇ ಬೇಕು, ಬಾಳು ಕೊಡುತ್ತೇನೆ ಎಂದು ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ವಿಶೇಷಗಳಲ್ಲಿ ವಿಶೇಷವಾಗಿದೆ.

ಅದು ಕಂಬಿಹಳ್ಳಿ ಚಂದ್ರುಗೂ ಹೆಂಡತಿ. ಹನಿಕೆ ಬಸವರಾಜನ ಪ್ರೇಮಿ, ಬೆಂಗಳೂರಿನ ಬೇಕರಿಯೊಂದರ ಕಿರಣನಿಗೂ ಮನದರಸಿ, ರಮೇಶನ ರಾಧೆಯೂ ಇವಳೇ. ತುಕಾರಂನ ಮಡದಿಯೂ ಇವಳೆ. ಈಗ ರಂಗೇನಹಳ್ಳಿ ಚಂದ್ರುವಿನ ಚಕೋರಿಯಾಗಿ ಸಪ್ತಪದಿ ತುಳಿದಿದ್ದಾಳೆ.

ಇದು ಒಂದು ಅರ್ಥದಲ್ಲಿ ಮಹಾಭಾರತವನ್ನು ನೆನಪಿಸಿದರೂ ಅದನ್ನು ಮೀರಿಸಿದ ಸಂಬಂಧ ಇಲ್ಲಿ ಬೆಸೆದುಕೊಂಡಿದೆ ಎಂದು ಹೇಳಬಹುದೇನೋ ನಮಗೆ ಗೊತ್ತಿಲ್ಲ.

ಇನ್ನು 38ರ ಅಸುಪಾಸಿಗೆ ಆರನೇ ಮದ್ವೆಯಾದ ಪ್ರಿಯಾಳ ಕೊನೆ ಪ್ರೇಮಿ ವಯಸ್ಸು ಕೇವಲ 22. ಪ್ರೀತಿಗೆ ಕಣ್ಣಿಲ್ಲ ನಿಜ. ಬುದ್ಧಿಯೂ ಇಲ್ಲದಂತಾಯ್ತು. ಈಕೆ ಐದು ಮದ್ವೆಯಾಗಿ ಎರಡು ಮಕ್ಕಳಿದ್ದರೂ 38ನೇ ವಯಸ್ಸಿಗೆ ಆರನೇ ಬಾರಿ ಹಸೆಮಣೆ ಏರಿ, ಕೈಗೆ ಕರಿ ಬಳಿ ಧರಿಸಿ 22ರ ಯುವಕನ ಜೊತೆ ಸಂಸಾರ ಶುರು ಮಾಡಿದ್ದಾಳೆ.

ಈಕೆಯನ್ನು ವರಿಸಿದ 22ರ ಯುವಕ ಕೂಡ ನಂಗೆ ಇವಳೇ ಬೇಕು. ನಾನು ಇವಳ ಜೊತೆಯೇ ಇರುತ್ತೇನೆ ಎನ್ನುತ್ತಾನೆ. ಇನ್ನು ತನ್ನ ಆರನೇ ಮದುವೆ ಬಗ್ಗೆ ಹೇಳಿಕೊಂಡಿರುವ ಮದುವೆ ಎಕ್ಸ್ಪರ್ಟ್ ಮೇಡಂ, ಇದೆ ಕೊನೆ ಮದುವೆ ನಾವಿಬ್ರೂ ಚೆನ್ನಾಗಿ ಇರುತ್ತೇವೆ ಎಂದು ಪ್ರಾಮಿಸ್ ಮಾಡಿದ್ದಾಳೆ.

ನಾನು ಈಕೆಯನ್ನ ಬೀಡೋದಿಲ್ಲ, ಒಂದು ತಿಂಗಳಿಂದ ಲವ್ ಮಾಡ್ತಿದ್ವಿ. ನಾನೇ ಇಷ್ಟ ಪಟ್ಟು ಮದ್ವೆ ಆದೆ, ಈಕೆಗೊಂದು ಬಾಳು ಕೊಡ್ತೀನಿ ಅಂತಿದ್ದಾನೆ ಚಂದ್ರು. ಇನ್ನು ಚಂದ್ರುವಿಗೆ ಪೋಷಕರಿಲ್ಲ. ಈತನನ್ನು ಅಕ್ಕ ಸಾಕಿದ್ದಾರೆ.

ಅವಳಿಗೆ 5 ಮದುವೆಯಾಗಿದೆ, ಇಬ್ಬರು ಮಕ್ಕಳಿದ್ದಾರೆ, ನಿನಗಿಂತ ದೊಡ್ಡವಳು ಎಂದು ಅಕ್ಕ ಬುದ್ಧಿವಾದ ಹೇಳಿದ್ದರೂ ನನಗೆ ಈಕೆಯೇ ಬೇಕು ಅಂತ ವರಿಸಿದ್ದಾನೆ ಈ ಮನದನ್ನೆಯನ್ನು. ಈ ವರ ಮಹಾಶಯನಿಗೂ ಜಸ್ಟ್ ಮದುವೆ ವಯಸ್ಸು 21 ಮೀರಿ 22 ಆಗಿರುವ ಕಾರಣ ಇವನ ಮನೆಯವರು ಕೂಡ ಏನು ಮಾಡಲಾಗದೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಚಂದ್ರು ಮಾತ್ರ ಈಕೆಗೆ ಐದಲ್ಲ. ಇನ್ನೈದಾಗಿದ್ದರೂ ನನಗೆ ಈಕೆಯೇ ಬೇಕೆಂದು ಬಯಸಿ ಸಂಸಾರಕ್ಕೆ ಅಣಿಯಾಗಿದ್ದಾನೆ.

ತಾನು ಮದುವೆಯಾದ ಐದು ಕಡೆಯೂ ಪ್ರಿಯಾ ಒಂದಿಲ್ಲೊಂದು ಯಡವಟ್ಟು ಮಾಡಿಕೊಂಡಿದ್ದಾಳೆ. ಕೊನೆಗೆ ಐದು ಮಂದಿಯ ಜೊತೆನೂ ಸಂಬಂಧವನ್ನೇ ಕಳೆದುಕೊಂಡಿದ್ದಾಳೆ. ಈಕೆಯ ಎಲ್ಲ ಗಂಡಂದಿರು ಮದುವೆ ಸಹವಾಸ ಸಾಕಪ್ಪ ಅಂತಿದ್ದಾರೆ. ಆದ್ರೆ, 22ರ ಸರಿಯಾಗಿ ಮೀಸೆ ಮೂಡದ ಚಂದ್ರು ನನಗೆ ಅಂಟಿನೇ ಬೇಕು ಅಂತ 38ರ ಹರೆಯದ ಮೇಡಮ್ಮನ ಕೈಹಿಡಿದಿದ್ದಾನೆ.

ಇನ್ನು ಜೋಡಿಗೆ ಸ್ಥಳೀಯರು ಈಕೆಗೆ ಇದೇ ಕೊನೆ ಮದುವೆಯಾಗಲಿ, ಹುಡುಗನ ಸಂಸಾರದ ನೌಕೆ ಸರಿ ದಿಕ್ಕಿನಲ್ಲಿ ಸಾಗಲಿ ಎಂದು ಶುಭ ಹಾರೈಸಿದ್ದಾರೆ.

ಒಟ್ಟಾರೆ ಇವರ ಜೋಡಿ ಇಂದಿನ ಕಲಿಯುಗಕ್ಕೆ ತಕ್ಕಂತೆ ನಡೆದಿದೆ ಎಂದು ಹಿರಿಯ ನಾಗರಿಕರು ಗೊಣಗುತ್ತಿದ್ದು ಕಲಿಯ ಲೀಲೆಯನ್ನು ಎಲೆ ಅಡಿಕೆ ಸುಣ್ಣ ಹಾಕಿಕೊಂಡು ಚಪ್ಪರಿಸಿದ್ದಾರೆ. ಇನ್ನು ನೀವು  ಇವರ ಮದುವೆ ಬಗ್ಗೆ ಏನು ಊಹಿಸಿಕೊಳ್ಳುತ್ತಿರೋ ಅದು ನಿಮಗೆ ಬಿಟ್ಟದ್ದು.

Leave a Reply

error: Content is protected !!
LATEST
ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ