ಬೆಂಗಳೂರು: ಶಿಕ್ಷಕರ ದಿನಾಚರಣೆ ನಿಮಿತ್ತ ನೆಚ್ಚಿನ ಗುರುಗಳ ಸೇವೆಯನ್ನು ದೇಶಾದ್ಯಂತ ಸ್ಮರಿಸಲಾಗುತ್ತಿದ್ದು, ಮಾಜಿ ಸಿಎಂಗಳಾದ ಸಿದ್ಧರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಹಾಲಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿ ಹಲವು ಗಣ್ಯರು ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ನೆನೆಯುತ್ತ ಶಿಕ್ಷಕ ವೃಂದಕ್ಕೆ ಶುಭಾಶಯ ಕೋರಿದ್ದಾರೆ.
ಹಳ್ಳಿಯಲ್ಲಿ ಹುಟ್ಟಿದ ನನ್ನಂತಹವನಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತು ಜನಸೇವೆ ಮಾಡುವ ಅವಕಾಶ ಕೂಡಿ ಬಂದಿದ್ದರೆ ಅದಕ್ಕೆ ನನ್ನನ್ನು ತಿದ್ದಿ ತೀಡಿ ಬೆಳೆಸಿದ ಗುರುಗಳು ಕಾರಣ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಅವರಿಗೆ ತಲೆಬಾಗಿ ನಮಿಸುವೆ. ನನ್ನಂಥವನಿಗೆ ಒಲಿದು ಬಂದ ಗುರುಗಳು ಜಗದ ಮಕ್ಕಳೆಲ್ಲರಿಗೂ ಸಿಗಲಿ ಎಂದು ಹಾರೈಸುತ್ತೇನೆ ಎಂದು ಶುಭ ಕೋರಿದ್ದಾರೆ.
ಹಳ್ಳಿಯಲ್ಲಿ ಹುಟ್ಟಿದ ನನ್ನಂತಹವನಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತು ಜನಸೇವೆ ಮಾಡುವ ಅವಕಾಶ ಕೂಡಿ ಬಂದಿದ್ದರೆ ಅದಕ್ಕೆ
ನನ್ನನ್ನು ತಿದ್ದಿ ತೀಡಿ ಬೆಳೆಸಿದ ಗುರುಗಳು ಕಾರಣ.ಅವರಿಗೆ ತಲೆಬಾಗಿ ನಮಿಸುವೆ.
ನನ್ನಂತಹವನಿಗೆ ಒಲಿದು ಬಂದ ಗುರುಗಳು ಜಗದ ಮಕ್ಕಳೆಲ್ಲರಿಗೂ ಸಿಗಲಿ ಎಂದು ಹಾರೈಸುತ್ತೇನೆ.#TeachersDay pic.twitter.com/qlcYA0Flyi
— Siddaramaiah (@siddaramaiah) September 5, 2020