ನ್ಯೂಡೆಲ್ಲಿ: ದೇಶದ ಜಿಡಿಪಿಯ ಐತಿಹಾಸಿಕ, ಮಹಾಕುಸಿತಕ್ಕೆ ನರೇಂದ್ರ ಮೋದಿ ಸರ್ಕಾರದ ‘ಗಬ್ಬರ್ ಸಿಂಗ್ ಟ್ಯಾಕ್ಸ್’ (ಸರಕು ಮತ್ತು ಸೇವಾ ತೆರಿಗೆ ಜಿಎಸ್ಟಿ) ಕಾರಣ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಗಂಭೀರ ಮತ್ತು ನೇರ ಆರೋಪ ಮಾಡಿದ್ದಾರೆ.
ಜಿಎಸ್ಟಿ ಎಂಬುದು ತೆರಿಗೆ ವ್ಯವಸ್ಥೆಯಲ್ಲ, ಲಕ್ಷಾಂತರ ಸಣ್ಣ ವ್ಯಾಪಾರಗಳು, ಕೋಟ್ಯಂತರ ನೌಕರಿಗಳು ಮತ್ತು ಯುವಕರ ಭವಿಷ್ಯ ರಾಜ್ಯಗಳ ಆರ್ಥಿಕ ಸ್ಥಿತಿ ಸೇರಿ ಬಡವರು ಮತ್ತು ಅಸಂಘಟಿತ ವಲಯದ ಮೇಲೆ ನಡೆಸುತ್ತಿರುವ ಘನ ಘೋರ ದಾಳಿ ಎಂದು ವಾಗ್ದಾಳಿ ಮಾಡಿದ್ದಾರೆ.
ಈ ಜಿಎಸ್ಟಿ ವ್ಯವಸ್ಥೆ ಜಾರಿಗೆ ತಂದಿದ್ದರಿಂದ ಲಕ್ಷಾಂತರ ಸಣ್ಣ ಉದ್ಯಮಗಳನ್ನು, ಉದ್ಯೋಗಗಳನ್ನುಕೇಂದ್ರ ಸರ್ಕಾರ ಕಸಿದುಕೊಂಡಿದೆ. ಯುವಕರ ಮತ್ತು ರಾಜ್ಯಗಳ ಆರ್ಥಿಕತೆಯ ಭವಿಷ್ಯ ಹಾಳು ಮಾಡಿದೆ ಎಂದೂ ಅವರು ಆಕ್ರೋಶಭರಿತವಾಗಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ರಾಹುಲ್ ಗಾಂಧಿ ಅವರ ಈ ವಿಡಿಯೋ ನೋಡಿ.
GDP में ऐतिहासिक गिरावट का एक और बड़ा कारण है- मोदी सरकार का गब्बर सिंह टैक्स (GST)।
इससे बहुत कुछ बर्बाद हुआ जैसे-
▪️लाखों छोटे व्यापार
▪️करोड़ों नौकरियाँ और युवाओं का भविष्य
▪️राज्यों की आर्थिक स्थिति।GST मतलब आर्थिक सर्वनाश।
अधिक जानने के लिए मेरा वीडियो देखें। pic.twitter.com/QdD3HMEqBy
— Rahul Gandhi (@RahulGandhi) September 6, 2020