NEWSನಮ್ಮರಾಜ್ಯಸಿನಿಪಥ

ಸೆ.20 ರಂದು ʼಯುವರತ್ನʼ ಚಿತ್ರೀಕರಣಕ್ಕೆ ಮತ್ತೆ ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸುತ್ತಿರುವ ‘ಯುವರತ್ನ’ ಚಿತ್ರದ ಹಾಡುಗಳ ಶೂಟಿಂಗ್ ಬಾಕಿ ಉಳಿದಿದ್ದು ಸೆಪ್ಟೆಂಬರ್‌ 20 ರಂದು  ಚಿತ್ರೀಕರಣ ಮತ್ತೆ ಆರಂಭವಾಗಲಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಸ್ಪೇನ್‍ಗೆ ತೆರಳಲು ನಿರ್ಧರಿಸಿತ್ತು. ಆದರೆ ಅಷ್ಟರಲ್ಲಾಗಲೇ ಕೊರೊನಾ ಭೀತಿ ಆರಂಭವಾಗಿತ್ತು. ಈ ನಡುವೆಯೂ ಪುನೀತ್ ರಾಜ್‍ಕುಮಾರ್ ಸ್ಪೇನ್‍ಗೆ ಹೋಗಲು ರೆಡಿ ಇದ್ದರಂತೆ. ಆದರೆ ಒಂದೇ ಒಂದು ಕಾರಣದಿಂದ ಫಾರಿನ್ ಟ್ರಿಪ್ ಕ್ಯಾನ್ಸಲ್ ಮಾಡಿದ್ರಂತೆ ಪುನೀತ್.

ಇತ್ತೀಚೆಗೆ ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ವಿತ್ ಸೃಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುನೀತ್ ಈ ಇಂಟ್ರಸ್ಟಿಂಗ್ ವಿಚಾರವನ್ನು ಹೇಳಿಕೊಂಡಿದ್ದಾರೆ.

‘ಆಗಿನ್ನೂ ಒಂದೊಂದಾಗಿ ಕೊರೊನಾ ಪ್ರಕರಣ ಕೇಳಿಬರುತ್ತಿತ್ತು. ಎಲ್ಲಾ ಮುಂಜಾಗ್ರತೆ ವಹಿಸಿಕೊಂಡು ಸ್ಪೇನ್‍ಗೆ ಹೋಗಿ ಶೂಟಿಂಗ್ ಮಾಡಿ ಬರೋಣ ಎಂದು ನಾನೇ ಚಿತ್ರತಂಡಕ್ಕೆ ಹೇಳಿದ್ದೆ. ಈ ವಿಚಾರವಾಗಿ ಪತ್ನಿ ಅಶ್ವಿನಿಗೂ ತಿಳಿಸಿದ್ದೆ. ಆದರೆ ಸೀನುವುದು, ಕೆಮ್ಮುವುದು, ನೆಗಡಿ ಎಲ್ಲಾ ಕೊರೊನಾ ಲಕ್ಷಣ ಎಂಬ ಮಾಹಿತಿ ನನಗೆ ದೊರೆಯಿತು. ಆ ಸಮಯದಲ್ಲಿ ಯಾರಾದರೂ ಸೀನಿದರೆ, ಕೆಮ್ಮಿದರೆ ಅಂತವರನ್ನು ಕ್ವಾರಂಟೈನ್‍ನಲ್ಲಿ ಇರಿಸುತ್ತಿದ್ದಾರೆ ಎಂಬ ವಿಚಾರ ಕೂಡಾ ತಿಳಿದುಬಂತು. ನನಗೆ ಭಯ ಶುರುವಾಗಿದ್ದು ಅಲ್ಲೇ.

ನಾನು ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ 10 ಬಾರಿಯಾದರೂ ಸೀನುತ್ತೇನೆ. ನನಗೆ ಇದು ಚಿಕ್ಕಂದಿನಿಂದ ಅಭ್ಯಾಸ ಆಗಿ ಹೋಗಿದೆ. ಒಂದು ವೇಳೆ ನಾನು ವಿದೇಶಕ್ಕೆ ಶೂಟಿಂಗ್ ಹೋಗಿ ಬೆಳಗ್ಗೆ ನಾನು ಸೀನುವುದನ್ನು ಅಲ್ಲಿ ಯಾರಾದರೂ ನೋಡಿ ನನ್ನನ್ನು ಕ್ವಾರಂಟೈನ್‍ಗೆ ಎಳೆದೊಯ್ದರೆ ಕಷ್ಟ ಎಂದು ಭಯಪಟ್ಟು, ವಿದೇಶಕ್ಕೆ ಹೋಗುವ ಸಹವಾಸವೇ ಬೇಡ ಎಂದು ಶೂಟಿಂಗ್ ಕ್ಯಾನ್ಸಲ್ ಮಾಡಿದ ವಿಚಾರವನ್ನು ಪುನೀತ್ ಹೇಳಿಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ತಯಾರಿಸುತ್ತಿರುವ ಈ ಚಿತ್ರದಲ್ಲಿ ಪುನೀತ್ ಇಂಟ್ರೊಡ್ಯೂಸ್ಡ್ ಸಾಂಗನ್ನು ಚಿತ್ರೀಕರಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಜಾನಿ ಮಾಸ್ಟರ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ  ವೇಳೆಗೆ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಖುಷಿಯಿಂದ ವಿಷಯವನ್ನು ಹಂಚಿಕೊಂಡಿದೆ.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?