NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಲಕ್ಷಾಂತರ ಪುರುಷ ಪ್ರಯಾಣಿಕರಿಗೆ ಗುಡ್​ ನ್ಯೂಸ್ ಕೊಟ್ಟ ಸಾರಿಗೆ ಸಚಿವರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರ ಈ ವರ್ಷ ಬಸ್ ಪ್ರಯಾಣ ಮಾಡುವ ಲಕ್ಷಾಂತರ ಪುರುಷ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಅಂದರೆ ಇದು ಪುರುಷ ಪ್ರಯಾಣಿಕರಿಗೆ ಗುಡ್​ ನ್ಯೂಸ್ ಅಂತಲೇ ಹೇಳಬಹುದು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕೃತ ಹೇಳಿಕೆ ನೀಡಿದ್ದಾರೆ.

ಸದ್ಯಕ್ಕೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್ ದರ ಏರಿಕೆ ಆಗುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದ್ದು, ಕಳೆದ ವರ್ಷ ಜನವರಿಯಲ್ಲಿ ಬಸ್ ಪ್ರಯಾಣ ದರ ಶೇ.15ರಷ್ಟು ಏರಿಕೆ ಮಾಡಲಾಗಿತ್ತು. ಆ ಬಳಿಕ ಸರ್ಕಾರವು ಪ್ರತಿ ವರ್ಷ ದರ ಪರಿಷ್ಕರಣೆ ಮಾಡುವ ನಿರ್ಣಯ ತೆಗೆದುಕೊಂಡಿತ್ತು. ಆದರೆ ಈ ವರ್ಷ ಇದಕ್ಕೆ ಬ್ರೇಕ್​ ಹಾಕಿದೆ.

ರಾಜ್ಯ ಸರ್ಕಾರ ಜಲಮಂಡಳಿ, ವಿದ್ಯುತ್ ಮತ್ತು ಮೆಟ್ರೋ ಮಾದರಿಯಲ್ಲಿ ಪ್ರತಿ ವರ್ಷ ದರ ಪರಿಷ್ಕರಣೆ ಮಾಡುವಂತೆ ಸಾರಿಗೆ ದರಕ್ಕೂ ಅನ್ವಯಿಸಲು ಯೋಜನೆ ಮಾಡಲಾಗಿತ್ತು. ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಿ, ಆ ಸಮಿತಿ ವರದಿ ಆಧಾರದ ಮೇಲೆ ದರ ಏರಿಕೆ ಅಥವಾ ಕಡಿತ ಮಾಡುವ ಯೋಜನೆಯಾಗಿತ್ತು. ಆದರೆ ಈ ವರ್ಷ ಇನ್ನೂ ಆ ಸಮಿತಿ ರಚನೆಯಾಗಿಲ್ಲ. ಸಮಿತಿ ರಚನೆಯಾಗದ ಕಾರಣ ಈ ವರ್ಷ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ವರ್ಷ ದರ ಪರಿಷ್ಕರಣೆ ಸಾಧ್ಯತೆ!: ಮುಂದಿನ 6 ತಿಂಗಳಲ್ಲಿ ಸಮಿತಿ ರಚನೆಯಾಗಿ ವರದಿ ನೀಡಿದರೂ, ಈ ವರ್ಷ ದರ ಏರಿಕೆಯ ಸಾಧ್ಯತೆ ಇಲ್ಲ. ಅಂದರೆ 2026ರ ಜನವರಿಯಿಂದ ಏಪ್ರಿಲ್ ಅಥವಾ ಮೇ ತಿಂಗಳವರೆಗೆ ಬಸ್ ದರ ಏರಿಕೆ ಆಗುವುದಿಲ್ಲ ಎಂದು ಅರ್ಥ. ಮುಂದಿನ ವರ್ಷ (2027) ದರ ಪರಿಷ್ಕರಣೆಯ ಸಾಧ್ಯತೆ ಇದೆ ಎಂದು ಸಚಿವರು ಸೂಚನೆ ನೀಡಿದ್ದಾರೆ.

ಸಚಿವರ ಸ್ಪಷ್ಟನೆ!: ಸಚಿವ ರಾಮಲಿಂಗರೆಡ್ಡಿ ಈ ಬಗ್ಗೆ ಮಾತನಾಡಿ, ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟುಕೊಂಡೇ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಸಮಿತಿ ರಚನೆಯಾಗುವವರೆಗೆ ದರ ಏರಿಕೆ ಇಲ್ಲ. ಸದ್ಯಕ್ಕೆ ಯಾವುದೇ ಏರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿರ್ಣಯದಿಂದ ರಾಜ್ಯದಲ್ಲಿ ದಿನನಿತ್ಯ ಬಸ್ ಪ್ರಯಾಣ ಮಾಡುವ ಲಕ್ಷಾಂತರ ಪುರುಷ ಪ್ರಯಾಣಿಕರಿಗೆ ದೊಡ್ಡ ಆರ್ಥಿಕ ರಿಲೀಫ್ ಸಿಕ್ಕಂತಾಗಿದೆ. ವಿಶೇಷವಾಗಿ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಇದು ದೊಡ್ಡ ಸುದ್ದಿ.

ಪ್ರಯಾಣಿಕರು ಈ ಸುದ್ದಿಯನ್ನು ಸ್ವಾಗತಿಸಿದ್ದು, ಸಾರಿಗೆ ಇಲಾಖೆಯು ಬಸ್ ಸೇವೆಯ ಗುಣಮಟ್ಟ, ಸಮಯಪಾಲನೆ ಮತ್ತು ಪ್ರಯಾಣಿಕರ ಸೌಕರ್ಯಕ್ಕೆ ಇನ್ನಷ್ಟು ಗಮನ ನೀಡಬೇಕು ಎಂದು ಪ್ರಯಾಣಿಕರ ಬೇಡಿಕೆಯಾಗಿದೆ. ದರ ಏರಿಕೆ ಇಲ್ಲದಿದ್ದರೂ ಸೇವೆಯಲ್ಲಿ ಸುಧಾರಣೆ ಬರಬೇಕು ಜತೆಗೆ ನೌಕರರ ಬೇಡಿಕೆ ಈಡೇರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂಬುದು ಎಲ್ಲರ ಅಪೇಕ್ಷೆ.

Megha
the authorMegha

Leave a Reply

error: Content is protected !!