NEWSದೇಶ-ವಿದೇಶರಾಜಕೀಯ

ಚೀನ ಬೆದರಿಕೆಗೆ ತಿರುಗೇಟು ನೀಡಿದ ತೈವಾನ್‌

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಅಮೆರಿಕ ರಾಜತಾಂತ್ರಿಕ ಅಧಿಕಾರಿ ತೈಪೆ ಭೇಟಿ ಮುಗಿಸಿದ ಬೆನ್ನಲ್ಲೇ ತೈವಾನ್‌, ಚೀನ ಹಾಕಿದ ಮಾರಣಾಂತಿಕ ಬೆದರಿಕೆಗೆ ತಿರುಗೇಟು ನೀಡಿದೆ. ಈ ಮೂಲಕ ಗುಟುರು ಹಾಕಿದೆ. ಬೀಜಿಂಗ್‌ ಎದುರು ಸೆಟೆದು ನಿಲ್ಲುವ ಮುನ್ಸೂಚನೆ ನೀಡಿದೆ.

ದೂರದ ಸ್ನೇಹಿತನೊಬ್ಬ ಔತಣಕ್ಕೆಂದು ಬಂದಾಗ ನೆರೆಮನೆಯವರು ಮಾರಣಾಂತಿಕ ಬೆದರಿಕೆ ಹಾಕಿದರೆ ಅದನ್ನು ಹೇಗೆ ನಿಭಾಯಿಸುವುದು? ಚೀನ ಏಕೆ ಈ ಬಗ್ಗೆ ಅಸಹನೆ ನಡೆ ಅನುಸರಿಸುತ್ತಿದೆ ಎಂದು ತೈವಾನ್‌ ಅಧ್ಯಕ್ಷೀಯ ಕಚೇರಿ ವಕ್ತಾರ ಖಾರವಾಗಿ ಪ್ರಶ್ನಿಸಿದ್ದಾರೆ.

ತೈವಾನ್‌ ಅಧ್ಯಕ್ಷ ತ್ಸಾಯ್‌ ಇಂಗ್‌- ವೆನ್‌, ಅಮೆರಿಕದ ಅಧಿಕಾರಿ ಜತೆ ಔತಣ ಕೂಟದ ವೇಳೆ ಗಾಢ ಸಂಬಂಧ ಕುರಿತು ಪ್ರತಿಜ್ಞೆ ಮಾಡಿದರು. ಇದು ಸ್ಪಷ್ಟವಾಗಿ ಬೆಂಕಿ ಜತೆಗಿನ ಸರಸ. ಚೀನದ ಪ್ರತ್ಯೇಕತಾ ವಿರೋಧಿ ಕಾನೂನಿನ ಉಲ್ಲಂಘನೆಯನ್ನು ಪ್ರಚೋದಿಸಿದ್ದೇ ಆದಲ್ಲಿ ತೈವಾನ್‌ ಮೇಲೆ ಯುದ್ಧವನ್ನೇ ಸಾರಬೇಕಾಗುತ್ತದೆ. ತ್ಸಾಯ್‌ ನಾಶವಾಗಲಿದ್ದಾರೆ ಎಂಬ “ಗ್ಲೋಬಲ್‌ ಟೈಮ್ಸ್‌’ನ ಹೇಳಿಕೆಗೆ ತೈವಾನ್‌ ಹೀಗೆ ಪ್ರತಿಕ್ರಿಯಿಸಿದೆ.

ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿ ಕೀತ್‌ ಕ್ರಾಚ್‌ ಭೇಟಿ, ಅಮೆರಿಕ- ತೈವಾನ್‌ ಸಂಬಂಧವನ್ನು ಬಲಪಡಿಸಿದೆ. ಇಂಡೋ- ಪೆಸಿಫಿಕ್‌ ವಲಯದಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರಲಿದೆ’ ಎಂದು ತೈವಾನ್‌ ಹೇಳಿದೆ. ಕ್ರಾಚ್‌ ಕೈಗೊಂಡಿದ್ದ 3 ದಿನಗಳ ತೈಪೆ ಪ್ರವಾಸದ ವೇಳೆ ಚೀನದ ಹಲವು ಯುದ್ಧ ವಿಮಾನಗಳು ತೈವಾನ್‌ ದ್ವೀಪಗಳ ಸಮೀಪ ಅಬ್ಬರಿಸಿದ್ದವು.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ