ಬೆಂಗಳೂರು: ಭು ಸುಧಾರಣೆ, ಎಪಿಎಂಸಿ ಕಾಯ್ದೆ ವಿರುದ್ಧ ಶುಕ್ರವಾರ ಬೆಳಗ್ಗೆ 9ಗಂಟೆಯಿಂದ ಗೊರಗುಂಟೆಪಾಳ್ಯ ಬಳಿ ನೂರಾರು ರೈತರು ರಸ್ತೆ ತಡೆ ನಡೆಸಿದ್ದರಿಂದ ಸುಮಾರು 1ಕಿಮೀ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಕೊರೊನಾ ಲಾಕ್‍ಡೌನ್ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಬಂದ್ ಆಗಿದ್ದು, ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಬೀದಿಗೆ ಇಳಿದಿವೆ ಪರಿಣಾಮ ತುಮಕೂರು ಹೆದ್ದಾರಿ ಬಂದ್ ಮಾಡಲಾಗಿತ್ತು. ಆದರೆ ಪೊಲೀಸರು ಮಧ್ಯಪ್ರವೇಶಿಸಿ ವಾಹನ ಚಂಚಾರಕ್ಕೆ ಅನುವು ಮಾಡಿಕೊಟ್ಟರು. ಬಂದ್ ನಿರತರಾಗಿದ್ದ ಕೆಲ ರೈತರನ್ನು ಬಂಧಿಸಿ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯ ಹೆದ್ದಾರಿಗಳನ್ನು ರೈತರು ಬಂದ್ ಮಾಡಿ ಬೃಹತ್ ಪ್ರತಿಭಟನೆಗೆ ಮಾಡುತ್ತಿದ್ದಾರೆ. ಅಧಿಕೃತವಾಗಿ ರಾಜ್ಯದಲ್ಲಿ ಬಂದ್ ಸ್ಥಿತಿ ಇಲ್ಲದಿದ್ದರೂ, ರಸ್ತೆಗಳು ಬಂದ್ ಆಗುತ್ತಿರುವ ಕಾರಣ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ಇತ್ತ ರೈತರಿಂದ ಹೆಚ್ಚು ಸಮಯ ರಸ್ತೆ ಬಂದ್ ಆದರೆ ಉಂಟಾಗುವ ಸಂಚಾರ ವ್ಯತ್ಯಯವನ್ನು ತಡೆಯಲು ಬೀಗಿ ಪೊಲೀಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಸೇರಿ ಮೈಸೂರು ಬ್ಯಾಂಕ್ ಸರ್ಕಲ್, ಏರ್‍ಪೋರ್ಟ್ ರಸ್ತೆ, ಗೊರಗುಂಟೆ ಪಾಳ್ಯ, ನೆಲಮಂಗಲ ಟೋಲ್, ಅತ್ತಿಬೆಲೆ ಟೋಲ್, ದೇವನಹಳ್ಳಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಟೋಲ್, ವಿಧಾನಸೌಧ ಅಸುಪಾಸು, ಚಿಕ್ಕಪೇಟೆ-ಕೆ.ಆರ್. ಮಾರುಕಟ್ಟೆ ಪ್ರದೇಶಗಳ ರಸ್ತೆಗಳು ಲಾಕ್ ಆಗುತ್ತಿವೆ.
ರಾಜ್ಯದಾದ್ಯಂತ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದು, ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಬಂದ್ ಆಗುತ್ತಿವೆ. ತಾಲೂಕು ಕೇಂದ್ರಗಳಲ್ಲೂ ರಸ್ತೆಗಳನ್ನು ಬಂದ್ ಮಾಡಲಾಗುತ್ತಿದೆ. ಇನ್ನು ಹೋಬಳಿ ಮಟ್ಟದಲ್ಲೂ ರೈತರು ರಸ್ತೆಗಳಿದಿದ್ದಾರೆ.
ಇತ್ತ ರೈತ ವಿರೋಧಿ ಮಸೂದೆ ವಿರುದ್ಧ ರೈತ ಮುಖಂಡರು ಗುರುವಾರ ಗುಡುಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತರ ಹೋರಾಟ ಪ್ರಶ್ನಿಸುತ್ತಿರುವ ಸಚಿವ ಬಿಸಿ ಪಾಟೀಲ್, ಸಿಟಿ ರವಿ ಹಾಗೂ ಸೋಮಶೇಖರ್ ವಿರುದ್ಧ ಗರಂ ಆಗಿದ್ದಾರೆ. ನಿಮ್ಮ ಪ್ರಧಾನಿ ಹೇಳಿದ್ದನ್ನು ಸಮರ್ಥಿಸಿಕೊಳ್ಳಿ ಆದರೆ ರೈತರಿಗೆ ಅನುಕೂಲ ಅಂತ ಹೇಳಬೇಡಿ. ಸಿಟಿ ರವಿ ಅವರೇ ಪ್ರೊಫೆಸರ್ ನಂಜುಂಡ ಸ್ವಾಮಿ ಹೇಳಿದ್ದೇನು ಎಂಬುದೇ ನಿಮಗೆ ಅರ್ಥ ಆಗಿಲ್ಲ. ಎಲ್ಲರೂ ಸೇರಿಕೊಂಡು ರೈತರ ಕಥೆ ಮುಗಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದ್ದರು.
Olledu bisi muttisabeku