ಬೆಂಗಳೂರು: ಅವತಾರ ಪುರುಷ ಆಕ್ಷನ್ ಸೀಕ್ವೆನ್ಸ್ ವೇಳೆ ಮಸಲ್ ಕ್ಯಾಚ್ (ಸ್ನಾಯು ಸೆಳೆತ) ನಿಂದಾಗಿ ನಟ ಶರಣ್ ಶೂಟ್ ಸೆಟ್ನಲ್ಲೇ ಕೆಳಗೆ ಬಿದ್ದ ಪರಿಣಾಮ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ.
ಎಚ್ಎಂಟಿ ಗ್ರೌಂಡ್ ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಸದ್ಯ ಯಾವುದೇ ತೊಂದರೆ ಇಲ್ಲ. ಮಲ್ಲಿಗೆ ಆಸ್ಪತ್ರೆಯಲ್ಲಿ ಶರಣ್ ಅವರನ್ನು ಅಡ್ಮಿಟ್ ಮಾಡಲಾಗಿದೆ. ಅಭಿಮಾನಿಗಳು ಆತಂಕ ಪಡೋ ರೀತಿ ಯಾವುದೇ ಘಟನೆ ನಡೆದಿಲ್ಲ ಎಂದು ನಿರ್ದೇಶಕ ಸುನೀಲ್ ತಿಳಿಸಿದ್ದಾರೆ.
ಕೊರೊನಾ ಲಾಕ್ಡೌನ್ ಬಳಿಕ ಈಗ ಚಿತ್ರರಂಗ ಮತ್ತೆ ಸಿನಿಮಾ ಶೂಟಿಂಗ್ ಶುರು ಮಾಡಿದ್ದು, ಅರ್ಥಕ್ಕೆ ನಿಂತಿರುವ ಸಿನಿಮಾಗಳನ್ನು ನಿರ್ಮಾಪಕರು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರೀಕರಣದ ಸಂದರ್ಭದಲ್ಲಿ ಈ ಒಂದು ಚಿಕ್ಕ ಅವಘಡ ಸಂಭವಿಸಿದ್ದರಿಂದ ನಟ ಶರಣ್ ಆಸ್ಪತ್ರೆ ಸೇರಿದ್ದಾರೆ.