CRIMENEWSದೇಶ-ವಿದೇಶ

ಯುದ್ಧ ನಿಲ್ಲಿಸೋ ನಿರ್ಧಾರ ನಿಮ್ಮದಲ್ಲ ನಮ್ಮದು – ದಾಳಿ ಮುಂದುವರಿದರೆ 1 ಲೀಟರ್‌ ತೈಲವೂ ಸಿಗಲ್ಲ: ಅಮೆರಿಕಕ್ಕೆ ಎಚ್ಚರಿಕೆ ಕೊಟ್ಟ ಇರಾನ್‌ IRGC

ವಿಜಯಪಥ ಸಮಗ್ರ ಸುದ್ದಿ

ಟೆಹ್ರಾನ್‌: ಇಸ್ರೇಲ್-ಇರಾನ್ ಯುದ್ಧ ನಿಲ್ಲಿಸೋ ನಿರ್ಧಾರ ಅಮೆರಿಕದ್ದಲ್ಲ ಅದು ಏನಿದ್ದರೂ ನಮ್ಮ ನಿರ್ಧಾರ ಎಂದು ಇರಾನ್‌ನ ಐಆರ್‌ಜಿಸಿ (Islamic Revolutionary Guard Corps) ಪಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ತಿರುಗೇಟು ನೀಡಿದೆ.

ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಟ್ರಂಪ್‌ ಹೇಳಿಕೆಗೆ ಐಆರ್‌ಜಿಸಿ ಪಡೆ ಈ ರೀತಿಯ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಮುಂದುವರಿದರೆ, ಈ ಪ್ರದೇಶದಿಂದ ಒಂದು ಲೀಟರ್ ತೈಲವನ್ನೂ ರಫ್ತು ಮಾಡಲು ಇರಾನ್ ಅನುಮತಿಸುವುದಿಲ್ಲ ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ.

ಇನ್ನು ಇದು ಜಾಗತಿಕ ಇಂಧನ ಮಾರುಕಟ್ಟೆಗಳಿಗೆ ಭಾರಿ ಹೊಡೆತಕೊಡಲಿದೆ. ಇದರಿಂದ ವಿಶ್ವದ ಅನೇಕ ರಾಷ್ಟ್ರಗಳು ಜಾಗತಿಕ ಸಮಸ್ಯೆಗೆ ಒಳಗಾಗಲಿವೆ ಎಂದು ಹೇಳಲಾಗುತ್ತಿದೆ.

ನಿನ್ನೆ ಸೋಮವಾರ ಅಮೆರಿಕನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಟ್ರಂಪ್, ಇರಾನ್ ಯುದ್ಧವು ಸಾಕಷ್ಟು ಪೂರ್ಣಗೊಂಡಿದೆ ಎಂದಿದ್ದರು. ಇದಾದ ಕೆಲವೇ ಹೊತ್ತಲ್ಲಿ ನಾವು ಸಂಪೂರ್ಣ ಗೆದ್ದಿಲ್ಲ. ಇರಾನ್ ಸಂಪೂರ್ಣವಾಗಿ ಮತ್ತು ನಿರ್ಣಾಯಕವಾಗಿ ಸೋಲುವವರೆಗೂ ಯುದ್ಧ ಮುಂದುವರಿಯುತ್ತದೆ ಎಂದಿದ್ದರು.

ಟ್ರಂಪ್ ಹೇಳಿಕೆಗಳಿಗೆ IRGC ನೇರ ಪ್ರತಿಕ್ರಿಯೆ ನೀಡಿದೆ. ಸಂಘರ್ಷ ಹೇಗೆ ಮತ್ತು ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ವಾಷಿಂಗ್ಟನ್ ಅಲ್ಲ, ಟೆಹ್ರಾನ್ ನಿರ್ಧರಿಸುತ್ತದೆ. ಟ್ರಂಪ್ ಹೇಳಿಕೆ ಅಸಂಬದ್ಧ ಎಂದು IRGC ವಕ್ತಾರರು ಹೇಳಿಕೊಂಡಿದ್ದಾರೆ.

Megha
the authorMegha

Leave a Reply

error: Content is protected !!
Latest news
BMS ಸಂಘಟನೆಯ ಹೋರಾಟ: ನೌಕರರ ಧ್ವನಿಗೆ ಸ್ಪಂದಿಸಿದ ಸರ್ಕಾರ- ಸೂಕ್ತ ವ್ಯವಸ್ಥೆ ಮಾಡದೆ ಬಿಟ್ಟಿ ಸಲಹೆ ಕೊಟ್ಟ ಎಂಡಿ ಅಕ್ರಮ... NWKRTC: ಬ್ಯಾಡಗಿ ಬಸ್‌ ನಿಲ್ದಾಣದಲ್ಲಿ ಎರಡು ಬಸ್‌ಗಳ ಮಧ್ಯೆ ಸಿಲುಕಿದ ಕಾಲೇಜು ವಿದ್ಯಾರ್ಥಿ- ಚಿಂತಾಜನಕ ಸ್ಥಿತಿ ಸಾರಿಗೆ ನೌಕರರ ಮುಷ್ಕರ: ಆತ್ಮಹತ್ಯೆಗೆ ಯತ್ನಿಸಿದ ನರಸಂಪೇಟೆ ಡಿಪೋ ಚಾಲಕ ಶಂಕರ್ ಗೌಡ್ ಚಿಕಿತ್ಸೆ ಫಲಿಸದೆ ಮೃತ ಬೇಡಿಕೆ ಈಡೇರಿಸದ ಸರ್ಕಾರ: ಸಾರಿಗೆ ನೌಕರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ- ಸಾವು ಬದುಕಿನ ನಡುವೆ ಹೋರಾಟ KSRTC ನೌಕರರ ಏಪ್ರಿಲ್‌ ತಿಂಗಳ ವೇತನ ಏ.30ರಂದೆ ಪಾವತಿಸಲು ಎಂಡಿ ಆದೇಶ ಎಸ್‌ಎಸ್ಎಲ್‌ಸಿ ಪರೀಕ್ಷೆಗೆ ಹಾಜರಾದರೂ ಹಾಜರಾಗಿಲ್ಲ ಅಂತ ಅಂಧ ವಿದ್ಯಾರ್ಥಿನಿಯ ಫೇಲ್ ಮಾಡಿದ ಮಂಡಳಿ ಎಸ್ಸೆಸ್ಸೆಲ್ಸಿ ಪರೀಕ್ಷೆ-01 ಫಲಿತಾಂಶ - ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ SSLC ಪರೀಕ್ಷಾ ಫಲಿತಾಂಶ ಅಧಿಕೃತ ಪ್ರಕಟ: ಶೇ.94.1 ತೇರ್ಗಡೆ ಹುಡುಗಿಯರೇ ಈ ಬಾರಿಯೂ ಮೇಲುಗೈ KSRTC: ನೌಕರರ ವೇತನ ಹೆಚ್ಚಳ ಸಂಬಂಧದ ಹೋರಾಟ ನಿಲ್ಲುವುದಿಲ್ಲ ಹೈ ಕೋರ್ಟ್‌ ನಿರ್ದೇಶನದಂತೆ ಮುಂದುವರಿಯಲಿದೆ- ಚಂದ್ರಶೇಖರ... ಏ.29ರಂದು ಸಾರಿಗೆ ಸಚಿವರ ಅಧ್ಯಕ್ಷತೇಲಿ 2024ರ ಜ.1ರಿಂದ ನೌಕರರ ವೇತನ ಹೆಚ್ಚಳ, ಹಿಂಬಾಕಿ ಕುರಿತು ಮತ್ತೇ ಒಕ್ಕೂಟದ ಜತೆ ...