CrimeNEWSಸಿನಿಪಥ

ಅನುಶ್ರೀಗೆ ಸಿಸಿಬಿ ಡ್ರಿಲ್‌ ಬಳಿಕ ಕಾಡ್ತಿದೆ ಡೋಪಿಂಗ್ ಭಯ

ವಿಜಯಪಥ ಸಮಗ್ರ ಸುದ್ದಿ

ಮಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ ದಿನೇದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈಗಾಗಲೇ ನಟಿ ಕಂ ಆ್ಯಂಕರ್ ಅನುಶ್ರೀ ಅವರನ್ನು ಸಿಸಿಬಿ ವಿಚಾರಣೆ ನಡೆಸಿದೆ. ಈ ಬೆನ್ನಲ್ಲೇ ನಿರೂಪಕಿಗೆ ಮತ್ತೊಂದು ಭಯ ಶುರುವಾಗಿದೆ.

ಸಿಸಿಬಿ ತನಿಖೆ ಮುಗಿದ ಬಳಿಕ ಅನುಶ್ರೀ ಖುಷಿಯಾಗಿದ್ದರು. ಆದರೆ ಕಮಿಷನರ್ ಹೇಳಿಕೆ ಬಳಿಕ ನಟಿ ಚಿಂತಕ್ರಾಂತರಾಗಿದ್ದಾರೆ. ಕಾರಣ ಅನುಶ್ರೀಗೆ ಡೋಪಿಂಗ್ ಟೆಸ್ಟ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಇದರಿಂದ ಅನುಶ್ರೀಗೆ ಭಯ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

ಡ್ರಗ್ಸ್ ಟೆಸ್ಟ್ ಮಾಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಹೇಳಿದ್ದಾರೆ. ಇದರಿಂದಾಗಿ ನಟಿಗೆ ಚಿಂತೆ ಕಾಡಲು ಆರಂಭವಾಗಿದೆ. ಈ ಮಧ್ಯೆ ಡೋಪಿಂಗ್ ಟೆಸ್ಟ್ ಮಾಡಿಸದಂತೆ ಪ್ರಭಾವಿಯೊಬ್ಬರು ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಆದರೂ ಪೊಲೀಸರು ತಮ್ಮ ಕೆಲಸಕ್ಕೆ ಅಡ್ಡಿ ಮಾಡಬೇಡಿ ಎಂದು ಆ ವ್ಯಕ್ತಿಗೆ ತಿಳಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಇತ್ತ ಡ್ರಗ್ಸ್ ಪ್ರಕರಣ ಸಂಬಂಧ ಪ್ರಮುಖ ಡ್ರಗ್ ಪೆಡ್ಲರ್‌ ಒಬ್ಬನನ್ನು ಸಿಸಿಬಿ ಬಂಧಿಸಿದೆ. ಮಹಮ್ಮದ್ ಶಾಕೀರ್ ಬಂಧಿತ ಆರೋಪಿ. ಡ್ಯಾನ್ಸರ್ ಕಿಶೋರ್, ಕೋರಿಯೋಗ್ರಫರ್ ತರುಣ್ ರಾಜ್ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದೆ. ಈ ಎಲ್ಲರಿಗೂ ಶಾಕೀರ್ ಡ್ರಗ್ಸ್ ಲಿಂಕ್ ಕೊಡಿಸಿದ್ದ ಎಂಬ ಮಾಹಿತಿ ದೊರೆತಿದ್ದು, ಶಾಕೀರ್ ವಿಚಾರಣೆ ವೇಳೆ ಹಲವು ಹೆಸರುಗಳ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ