CRIMENEWSVideosನಮ್ಮಜಿಲ್ಲೆನಮ್ಮರಾಜ್ಯ

KSRTC: ಕರ್ತವ್ಯ ಮುಗಿಸಿ ಪ್ರಯಾಣಿಸುವ ಸಂಸ್ಥೆ ಸಿಬ್ಬಂದಿ ಕಡ್ಡಾಯವಾಗಿ ID Card ಪ್ರದರ್ಶಿಸಿ- ಇಂಥ ಚೋರರ ಪತ್ತೆಗೆ ಸಹಕರಿಸಿ

ವಿಜಯಪಥ ಸಮಗ್ರ ಸುದ್ದಿ
  • ಸ್ಟಾಫ್‌ ಅಂತ ಸುಳ್ಳು ಹೇಳುವ ಕಿಡಿಗೇಡಿಗಳ ಪತ್ತೆಗೆ ನಿಮ್ಮ ಸಹಕಾರವು ಅತ್ಯಗತ್ಯ

ಬೆಂಗಳೂರು: ಇತ್ತೀಚೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಕೆಲ ಕಿಡಿಗೇಡಿಗಳು ನಾವು ಸ್ಟಾಫ್‌ ಎಂದು ಹೇಳಿಕೊಂಡು ಫ್ರೀಯಾಗಿ ಪ್ರಯಾಣಿಸುವ ಕತ್ತರ್ನಾಕ್‌ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಈ ವೇಳೆ ನಿರ್ವಾಹಕರು ಕೂಡ ನಮ್ಮ ಸ್ಟಾಫ್‌ ಅಂತ ಅವರ ಬಳಿ ಐಡಿ ಕಾರ್ಡ್‌ ಕೂಡ ಕೇಳುವುದಿಲ್ಲ.

ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಸಂಸ್ಥೆಯ ನೌಕರರಲ್ಲದಿದ್ದರೂ ನಾವು ಸ್ಟಾಫ್‌ ಅಂತ ಹೇಳಿ ಟಿಕೆಟ್‌ ಪಡೆಯದೆ ಪ್ರಯಾಣಿಸುತ್ತಾರೆ. ಈಗ ಒಬ್ಬ ಕತ್ತರ್‌ನಾಕ್‌ ಹೀಗೆ ಮಾಡಿದ್ದು ತನಿಖಾಧಿಕಾರಿಗಳು ಬಂದು ತನಿಖೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದು ನಿರ್ವಾಹಕರಿಗೆ ಕೈ ಮುಗಿದ್ದು ಬೇಡಿಕೊಂಡಿದ್ದಾನೆ. ಆದರೆ ತನಿಖಾಧಿಕಾರಿಗಳು ಅವರ ಕೆಲಸ ಮಾಡದೆ ಬಿಟ್ಟಾರೆಯೇ. ನಿರ್ವಾಹಕರಿಗೂ ಕರ್ತವ್ಯ ಲೋಪದಡಿ ಮೆಮೋ ಕೊಟ್ಟಿದ್ದಾರೆ.

ಇದು ಹೀಗೆ ಮುಂದೆ ನಡೆಯಬಾರದು ಎಂಬ ದೃಷ್ಟಿಯಿಂದ ಎಲ್ಲ ನಿರ್ವಾಹಕರು ಎಚ್ಚೆತ್ತುಕೊಂಡಿದ್ದು, ಅದರಲ್ಲಿ ಕೆಲ ಪ್ರಜ್ಞಾವಂತ ನೌಕರರು ಸಾರಿಗೆ ಸಂಸ್ಥೆಯ ಎಲ್ಲ ಆಡಳಿತ ಮತ್ತು ಚಾಲನಾ ಸಿಬ್ಬಂದಿಗಳಿಗೆ ಒಂದು ತರ್ತು ಸಲಹೆ ನೀಡಿದ್ದಾರೆ.

ಅದೇನೆಂದರೆ, ಇತ್ತೀಚಿನ ದಿನಗಳಲ್ಲಿ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಕೆಲವು ಸಾರ್ವಜನಿಕರು ತಾವು ಸಂಸ್ಥೆಯ ನೌಕರರೆಂದು ಸುಳ್ಳು ಹೇಳಿಕೊಂಡು ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಇಂತಹ ಘಟನೆಗಳಿಂದಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕರಿಗೆ ತೀವ್ರ ಮುಜುಗರ ಹಾಗೂ ಆರ್ಥಿಕ ನಷ್ಟದ ಭೀತಿ ಎದುರಾಗುತ್ತಿದೆ.

ಆದುದರಿಂದ, ಸಂಸ್ಥೆಯ ಶಿಸ್ತು ಮತ್ತು ಆದಾಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ಕೆಳಗಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೋರಿದ್ದಾರೆ.

ನೌಕರರ ಗುರುತಿನ ಚೀಟಿ ಪ್ರದರ್ಶನ ಕಡ್ಡಾಯ: ಸಂಸ್ಥೆಯ ಯಾವುದೇ ವಿಭಾಗದ ಆಡಳಿತ ಮತ್ತು ಚಾಲನಾ ಸಿಬ್ಬಂದಿಗಳು ಬಸ್ಸಿನಲ್ಲಿ ಪ್ರಯಾಣಿಸುವಾಗ, ಕರ್ತವ್ಯದಲ್ಲಿರುವ ನಿರ್ವಾಹಕರು ಕೇಳಿದ ತಕ್ಷಣ ಗುರುತಿನ ಚೀಟಿ ತೋರಿಸಿ ಅಥವಾ ಸ್ವಯಂಪ್ರೇರಿತರಾಗಿ ತಮ್ಮ ಅಧಿಕೃತ ಗುರುತಿನ ಚೀಟಿಯನ್ನು (Original ID Card) ತೋರಿಸಿ ತಮ್ಮ ಗುರುತನ್ನು ದೃಢೀಕರಿಸಿಕೊಳ್ಳಬೇಕು.

ಕೆಲ ಕಿಡಿಗೇಡಿ ಸಾರ್ವಜನಿಕರು ನೌಕರರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು, ನೈಜ ನೌಕರರು ಗುರುತಿನ ಚೀಟಿ ತೋರಿಸುವುದು ಅತ್ಯಗತ್ಯವಾಗಿದೆ. ಇದು ನಿರ್ವಾಹಕರಿಗೆ ಕಳ್ಳಪ್ರಯಾಣಿಕರನ್ನು ಗುರುತಿಸಲು ಸಹಾಯ ಮಾಡುತ್ತದೆ.

ನಿರ್ವಾಹಕರು ನಮ್ಮ ಪರಿಚಯದವರು ಎಂದು ಹಾಗೆ ಕುಳಿತುಕೊಳ್ಳದೆ ಅಥವಾ ತಮ್ಮ ಗುರುತಿನ ಚೀಟಿ ಕೇಳಿದನೆಂದು ಕೋಪಗೊಳ್ಳದೆ, ನಾನೊಬ್ಬ ಈ ವಾಹನದಲ್ಲಿ ಪ್ರಯಾಣಿಕ ಅನ್ನುವುದನ್ನು ಗಮನದಲ್ಲಿಟ್ಟುಕೊಂಡು ತಾವೇ ಸ್ವಯಂ ಪ್ರೇರಿತರಾಗಿ id card ತೋರಿಸಿ.

ಇನ್ನು ತನಿಖಾಧಿಕಾರಿಗಳು ವಾಹನ ತಪಾಸಣೆಗೆ (Checking Squad) ಬಂದ ಸಂದರ್ಭದಲ್ಲಿ ಯಾವುದೇ ಅನಗತ್ಯ ಗೊಂದಲಗಳು ಉಂಟಾಗದಂತೆ ತಡೆಯಲು ಇದು ಏಕೈಕ ಮಾರ್ಗವಾಗಿದೆ.

ನಾವೆಲ್ಲರೂ ಒಂದೇ ಸಂಸ್ಥೆಯ ಕುಟುಂಬದವರಾಗಿದ್ದು, ಒಬ್ಬರಿಗೊಬ್ಬರು ಗೌರವ ನೀಡುವುದು ಮತ್ತು ಸಂಸ್ಥೆಯ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಆದುದರಿಂದ, ಎಲ್ಲ ನೌಕರ ಬಾಂಧವರು ಈ ಗಂಭೀರ ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ನಿರ್ವಾಹಕರೊಂದಿಗೆ ಸಹಕರಿಸಿ ಸಾರಿಗೆ ಸಂಸ್ಥೆಯ ಹಿತದೃಷ್ಟಿಯಿಂದ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಸಂಸ್ಥೆಯ ಎಲ್ಲ ನಿರ್ವಾಹಕ ಸಿಬ್ಬಂದಿಗಳ ಪರವಾಗಿ ಎಂದು ನಿಗಮದ ಪ್ರಜ್ಞಾವಂತ ನೌಕರರು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ಸಾರಿಗೆ ನೌಕರರಿಗೆ ಶೇ.12.5ರಷ್ಟು ವೇತನ ಹೆಚ್ಚಿಸಿ ಸರ್ಕಾರದ ಆದೇಶ KSRTC: ಶೇ.12.5ರಷ್ಟು ವೇತನ ಹೆಚ್ಚಳ ಖಚಿತ, ಒಂದೆರಡು ಗಂಟೆಯಲ್ಲೇ ಅಧಿಕೃತ ಆದೇಶ ! KSRTC: ಶೇ.12-15ರ ನಡುವೆ ವೇತನ ಹೆಚ್ಚಳ ಬಹುತೇಕ ಖಚಿತ, ಅಧಿಕೃತ ಆದೇಶ ಹೊರಬೀಳುವುದೊಂದೆ ಬಾಕಿ ! ಜನರ ಆಶೀರ್ವಾದವಿರುವ ನಮ್ಮ 'ಕುರ್ಚಿ'ಗಳು ಭದ್ರವಾಗಿವೆ, ಕನ್ನಡಿಗರು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಿ... KSRTC: ಬ್ರೇಕ್ ಫೇಲಾಗಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಬಸ್‌- ತಪ್ಪಿದ ಭಾರಿ ಅನಾಹುತ ನಾಗಮಲೆ ಬಳಿ ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ₹20 ಲಕ್ಷ ಪರಿಹಾರ KKRTC ದ್ವಂದ್ವ ನಿಲುವಿಗೆ ಹೈಕೋರ್ಟ್‌ ತೀವ್ರ ಅಸಮಾಧಾನ- 25 ಸಾವಿರ ರೂ. ದಂಡ, ಅಧಿಕಾರಿಗಳಿಂದಲೇ ವಸೂಲಿಗೆ ಆದೇಶ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಮಿಳಗ ವೆಟ್ರಿ ಕಳಗಂ ನಾಯಕ ದಳಪತಿ ವಿಜಯ್ ಅತೀ ಶೀಘ್ರದಲ್ಲೇ KSRTC ನಾಲ್ಕೂ ನಿಗಮಗಳ ಸಾರಿಗೆ ಕಾರ್ಮಿಕ ಸಂಘಟನೆಗಳ ಚುನಾವಣೆ ! ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ನಿಧನ