ಬೆಂಗಳೂರು: ರಾಜ್ಯದಲ್ಲಿ ಇಂದು 9,265 ಹೊಸ ಪ್ರಕರಣ ಪತ್ತೆಯಾಗಿವೆ.ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 7,35,371ಕ್ಕೆ ಏರಿಕೆ ಆಗಿದೆ.
ಕೊರೊನಾದಿಂದಾಗಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 75 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10,217ಕ್ಕೆ (ಅನ್ಯ ಕಾರಣಕ್ಕೆ 19 ಮಂದಿ ಮೃತಪಟ್ಟಿರುವುದು ಸೇರಿ) ಏರಿಕೆಯಾಗಿದೆ.
ಯಾವ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ ಎಷ್ಟು ಜನ ಒಳಗಾಗಿದ್ದಾರೆ ಮತ್ತು ಬಲಿಯಾಗಿದ್ದಾರೆ ಎಂದು ಬಾಕ್ಸ್ ಒಳಗೆ ಕೊಟ್ಟಿರುವುದರಲ್ಲಿ ನೋಡಿ…
ಇಂದು ಬೆಂಗಳೂರು ನಗರವೊಂದರಲ್ಲೇ ಅತಿ ಹೆಚ್ಚು ಅಂದರೆ 4,574 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ 2,93,405ಕ್ಕೆ ಏರಿಕೆಯಾಗಿದೆ. ಇಂದು 27 ಮಂದಿ ಮೃತಪಟ್ಟಿದ್ದಾರೆ.
ಇಂದು 8,662 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 6,11,67ಕ್ಕೆ ಏರಿಕೆಯಾಗಿದೆ. 1,13,987 ಮಂದಿ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 91925ಮಂದಿ ಐಸಿಯುನಲ್ಲಿದ್ದಾರೆ.