CrimeNEWSನಮ್ಮಜಿಲ್ಲೆ

ನಿಮ್ಮ ಚಿನ್ನಕ್ಕೆ ನಾವೇ ಬಡ್ಡಿಕೊಡುತ್ತೇವೆ ಅದು ಶೇ.40ರಷ್ಟು: ವಂಚಕನ ಆಮಿಷದ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿರುವ ಮಂಡ್ಯ ನಾರಿಯರು !

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ನಿಮ್ಮ ಚಿನ್ನಾಭರಣಗಳನ್ನು ನಮ್ಮ ಬ್ಯಾಂಕ್‌ನಲ್ಲಿ ಇಟ್ಟರೆ ನಿಮಗೆ ನಾವು ವಾರಕ್ಕೆ ಶೇ.10 ತಿಂಗಳಿಗಾದರೆ ಶೇ.40ರಷ್ಟು ಬಡ್ಡಿಯನ್ನು ಕೊಡುತ್ತೇವೆ ಎಂದು ನಾರಿಯರನ್ನು ನಂಬಿಸಿದ ಖತರ್ನಾಕ್ ವಂಚಕನೊಬ್ಬ ಬರೋಬರಿ 20 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಸಂಗ್ರಹಿಸಿದ್ದಾನೆ.

ಮಹಿಳೆಯರಿಗೆ ಚಿನ್ನದ ಮೇಲೆ ಅಧಿಕ ಬಡ್ಡಿಯ ಆಸೆ ತೋರಿಸಿ ಕೆಜಿಗಟ್ಟಲೇ ಚಿನ್ನಾಭರಣಗಳನ್ನು ದೋಚಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ವಂಚಕನ ವಂಚನೆಗೆ ಹಲವಾರು ಮಹಿಳೆಯರು ಒಳಗಾಗಿದ್ದು ಸದ್ಯ ಈಗ ನಮ್ಮ ಚಿನ್ನವನ್ನು ನಮಗೆ ವಾಪಸ್‌ ಕೊಡಿಸಿ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಜತೆಗೆ ಕಣ್ಣೀರು ಹಾಕ್ತಿದ್ದಾರೆ.

ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಸೋಮಶೇಖರ್ ಎಂಬಾತನೆ ವಂಚಕನಾಗಿದ್ದಾನೆ. ಈತ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಬ್ಯಾಂಕ್ ಒಂದರಲ್ಲಿ ಎಕ್ಸಿಕ್ಯೂಟಿವ್ ಆಗಿದ್ದ. ಈತನ ನಯ ನಾಜೂಕಿನ ಮಾತುಗಳಿಗೆ ಮರುಳಾದ ಮಹಿಳೆಯರು ತಮ್ಮಲ್ಲಿರುವ ಚಿನ್ನವನ್ನು ಈತನಿಗೆ ಕೊಟ್ಟಿದ್ದರು. ಮಹಿಳೆಯರಿಂದ ಪಡೆದ ಚಿನ್ನವನ್ನು ಈತ ಬ್ಯಾಂಕ್​ನಲ್ಲಿ ಇಟ್ಟಿರುವುದಾಗಿ ಹೇಳಿ, ಕೆಲ ತಿಂಗಳು ಬಡ್ಡಿಯನ್ನೂ ಕೊಡುತ್ತಾ ಬಂದಿದ್ದ. ಇವನ ಮಾತನ್ನು ನಂಬಿದ್ದ ಇನ್ನಷ್ಟು ಮಹಿಳೆಯರು‌ ಈತನಿಗೆ ತಮ್ಮಲ್ಲಿದ್ದ ಎಲ್ಲಾಚಿನ್ನವನ್ನೂ ಕೊಟ್ಟಿದ್ದಾರೆ.

ಮಹಿಳೆಯರಿಂದ ಬರೋಬ್ಬರಿ 20 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸಂಗ್ರಹಣೆ ಮಾಡಿದ್ದಾನೆ. ಕೆಲವು ತಿಂಗಳು ಬಡ್ಡಿ ನೀಡಿದ ಈತ ಕೆಲ ತಿಂಗಳ ಬಳಿಕ ನಾಪತ್ತೆಯಾಗಿದ್ದಾನೆ. ಚಿನ್ನ ಕೊಟ್ಟವರು ಈತನ ಮನೆಗೆ ಹೋಗಿ ವಿಚಾರಿಸಿದರೆ. ಆತನ ಮನೆಯವರು ಸ್ಪಂದಿಸುವುದಿಲ್ಲ. ಕಡೆಗೆ ಮಂಗಳಮುಖಿಯೊಬ್ಬರು ಪೊಲೀಸರಿಗೆ ದೂರು‌ ನೀಡಿ ಈತನ ವಂಚನೆ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

ವಂಚನೆ ವಿಷಯ ತಿಳಿಯುತ್ತಿದ್ದಂತೆ ಇದೀಗ ಚಿನ್ನ ಕಳೆದುಕೊಂಡ ಮಹಿಳೆಯರು ಪೂರ್ವ ಪೊಲೀಸ್ ಠಾಣೆ ಸೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ನೀಡಿದ್ದು, ತಮ್ಮ ಚಿನ್ನಾಭರಣಗಳನ್ನು ಕೊಡಿಸಿಕೊಡಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೂರ್ವ ಠಾಣಾ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿ ಸೋಮಶೇಖರ್​‌ನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಬ್ಯಾಂಕ್ ನೌಕರನೆಂದು ವಂಚಿಸಿದ್ದು, ಈತನ ವಂಚನೆಗೆ ಮಂಡ್ಯ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಜಿಲ್ಲಾಧ್ಯಕ್ಷೆ ರಶ್ಮಿ ಕೂಡ ಸಿಲುಕಿ ತಮ್ಮ ಚಿನ್ನವನ್ನು ಕಳೆದುಕೊಂಡಿದ್ದಾರೆ.

ಈತನ ವಂಚನೆ ಪ್ರಕರಣದಲ್ಲಿ ಮಂಡ್ಯ ನಗರದ ಶ್ರೀಮಂತ ವರ್ತಕನ ಸೊಸೆಯೊಬ್ಬರು ಭಾಗಿಯಾಗಿರೋ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಈತನ ಕೃತ್ಯದ ಬಗ್ಗೆ ತಿಳಿದುಕೊಂಡ ಬ್ಯಾಂಕ್​ನವರು ಈತನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಶೋಕಿಗಾಗಿ ತಾನು ಈ ಕೃತ್ಯ ಎಸಗಿರೋದಾಗಿ ಪೊಲೀಸರ ವಿಚಾರಣೆ ವೇಳೆ ಆತ ತಿಳಿಸಿದ್ದು, ತಾನು ಮಹಿಳೆಯರಿಂದ ಪಡೆದ ಚಿನ್ನವನ್ನು ಬೇರೆಬೇರೆ ಫೈನಾನ್ಸ್​ನಲ್ಲಿ ಅಡವಿಟ್ಟಿರೋದಾಗಿ ಹೇಳಿದ್ದಾನೆ.

ಇದೀಗ ಪೊಲೀಸರು ಚಿನ್ನವನ್ನು ವಶಕ್ಕೆ ವಪಡೆಯುವ ಕಾರ್ಯಕ್ಕೆ ಮುಂದಾಗಿದ್ದು, ಆರೋಪಿಯಿಂದ ಮೋಸಕೊಳಗಾದವರಿಗೆ ಅವರವರ ಚಿನ್ನಾಭರಣಗಳನ್ನು ಕೊಡಿಸಲು ಪ್ರಯತ್ನಿಸುವುದಾಗಿ ಎಸ್​ಪಿ ಪರಶುರಾಮ್ ತಿಳಿಸಿದ್ದಾರೆ‌.

ಒಟ್ಟಾರೆ ಅಧಿಕ ಬಡ್ಡಿಯ ಆಸೆಗೆ ಬಿದ್ದ ಮಹಿಳೆಯರು ತಮ್ಮ ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲಾ ವಂಚಕನ ಮಾತು ನಂಬಿ ಕೊಟ್ಟು ಇದೀಗ ಕಣ್ಣೀರು ಹಾಕ್ತಿದ್ದಾರೆ. ಈ ನಡುವೆ ಕೊಟ್ಟವ ಕೊಡಂಗಿ ಇಸ್ಕೊಂಡವ ವೀರಭದ್ರ. ಇನ್ನು ಈ ಆಭರಣಗಳನ್ನು ಗಿರಿವಿ ಇಟ್ಟುಕೊಂಡವನ ಹಣಕ್ಕೆ ಮೂರು ನಾಮ. ಹೀಗಾಗಿ ಇನ್ನಾದರೂ ಈ ಮಹಿಳಾ ಮಣಿಯರು ಇಂಥವರ ಮೋಸದ ಜಾಲಕ್ಕೆ ಬೀಳದೆ ಇದು ನಡೆಯಲು ಹೇಗೆ ಸಾಧ್ಯ ಎಂದು ಸ್ವಲ್ಪ ಯೋಚಿಸುವ ಮಟ್ಟಕ್ಕೆ ಬೆಳೆಯಲಿ ಎಂಬುವುದು ವಿಜಯಪಥದ ಕಳಕಳಿ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ