ಮೊದಲ ದಿನದ ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿ, ನಾಳೆ ಬೆಳಗ್ಗೆ 6 ಗಂಟೆಯಿಂದ ಮುಂದುವರಿಕೆ
ಚಿತ್ರದುರ್ಗ: ಇಂದು ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡ ಸಾರಿಗೆ ನೌಕರರ ಪಾದಯಾತ್ರೆ 18 ಕಿಲೋ ಮೀಟರ್ ಕ್ರಮಿಸುವ ಮೂಲಕ ಮೊದಲ ದಿನ ಭಾರಿ ಯಶಸ್ವಿಗೊಂಡಿದೆ.

ಸದ್ಯ ಈ ರಾತ್ರಿ ಬುರುಜನರೊಪ್ಪ ಗ್ರಾಮದ ಶ್ರೀ ರಕ್ಷಾ ಗಣಪತಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದು ನಾಳೆ ಬೆಳಗ್ಗೆ 6 ಗಂಟೆಗೆ ಎರಡನೇ ದಿನದ ಜಾಥಾ ಆರಂಭವಾಗಲಿದೆ.
ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ನೀಡಬೇಕು ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಜಟಾಪಟಿ ಗೋಜು ಗೊಂದಲಗಳಿಗೆ ಮುಕ್ತಿಯಾಡಬೇಕು. ಅಲ್ಲದೆ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಸಾರಿಗೆ ನೌಕರರಿಗೆ ಕೊಟ್ಟಿರುವ ಪ್ರಣಾಳಿಕೆ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ.
ಇಂದು ಜಾಥಾ ಯಶಸ್ವಿಯಾಗಿದ್ದು, ಭಾರಿ ನೌಕರರು ಸೇರಿಲ್ಲ ಎಂಬುವುದು ಬಿಟ್ಟರೆ ಯಾವುದೇ ಗೊಂದಲವಿಲ್ಲದೆ ಇಂದಿನ ಪಾದಯಾತ್ರೆ ಪೂರ್ಣಗೊಂಡಿದೆ. ಇನ್ನು ನಾಳೆ ಬೆಳಗ್ಗೆ 6ಗಂಟೆಗೆ ಎರಡನೆ ದಿನದ ಪಾದಯಾತ್ರೆ ಮುಂದುವರಿಯಲಿದ್ದು, ಎಲ್ಲ ನೌಕರರು ಸಾಥ್ ನೀಡಬೇಕು ಎಂದು ಮನವಿ ಮಾಡಿದ್ದಾರೆ.
Related












